ಸಂವಾದ: ಪ್ರಸ್ತುತ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ

ಬೆಂಗಳೂರು, ಫೆಬ್ರವರಿ 07 : ಸಂವಾದ ಟ್ರಸ್ಟ್ ನ ತನ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಪ್ರಸ್ತುತ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ ಒಂದು ಮರುಚಿಂತನೆ ವಿಷಯವಾಗಿ 'ಸಂವಾದ ಪರಿಸೆ' ಕಾರ್ಯಕ್ರಮವನ್ನು ಫೆ.9 ರಿಂದ 11 ರವರೆಗೆ ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಂಡಿದೆ.

ಸಮಕಾಲೀನ ಭಾರತದಲ್ಲಿ ಅವಕಾಶ ವಂಚಿತ ಯುವ ಜನ ಸಮುದಾಯಗಳಿಂದ ದೂರವಾಗುತ್ತಿರುವ ರಾಜಕಾರಣದ ಕುರಿತು ಗೋಷ್ಠಿಗಳು ನಡೆಯಲಿದೆ. ಅಂದು ಸಾರ್ವಜನಿಕ ವಿಚಾರ ಸಂಕಿರಣ, ಸೌಹಾರ್ದತೆಗಾಘಿ ಸಂಗೀತ, ಆಂದೋಲನಗಳ ಪ್ತಸ್ತುತಿ, ಸಂವಾದ ಸಮ್ಮಿಲನ ಕಾರ್ಯಕ್ರಮಗಳು ಜರುಗಲಿವೆ.'ಸಂವಾದದಲ್ಲಿ ಡಾ. ಲಕ್ಷ್ಮೀಪತಿ ಸಿ.ಜಿ, ಡಾ. ಆನಂದ್ ತೇಲ್ತುಂಬೆ, ಡಾ. ಶಿವ ವಿಶ್ವನಾಥನ್, ಡಾ. ಮುಜಾಫರ್ ಅಸಾದಿ, ಡಾ. ಸುಜಾತ ಸುರೆಪಲ್ಲಿ, ಉಷಾ ರಾಜಾರಾಂ, ಅನಿತಾ ರತ್ನಂ ಪಾಲ್ಗೊಳ್ಳಲಿದ್ದಾರೆ.

ಫೆಬ್ರವರಿ 10 ರಂದು ವಾಸುದೀಕ್ಷಿತ್ ಬಳಗದಿಂದ ಸೌಹಾರ್ದತೆಗಾಗಿ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.

ಫೆಬ್ರವರಿ 11 ರಂದು ಏನೇನಿದೆ: ಪ್ರದರ್ಶನ ಕಲೆಯ ಮೂಲಕ ಯುವ ಮುಂದಾಳತ್ವ ಕಾರ್ಯಕ್ರಮ ನಡೆಯಲಿದ್ದು ಅದರಲ್ಲಿ ನಾದಮಣಿ ನಾಲ್ಕೂರು ಅವರಿಂದ ಏಕತಾರಿ ಹಾಡುಗಳು, ಶಿವಾನಂದ ನಾಯ್ಕ ಅವರಿಂದ ದೃಶ್ಯಕಲೆ, ನೀನಾಸಂ ಚಂದ್ರು ಮತ್ತು ತಂಡದವರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.

Discussion on Higher education and youth from Feb 9 to 11

ಸಾಮಾಜಿಕ ನ್ಯಾಯಕ್ಕಾಗಿ ಯುವ ಮುಂದಾಳತ್ವ ಕುರಿತು ಚರ್ಚೆ ನಡೆಯಲಿದ್ದು, ಅದರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಮಾಧುರಿ ಬೋಲಾರ್, ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ನಸ್ರೀನ್, ದಲಿತ ದಮನಿತರ ಹೋರಾಟ ಸಮಿತಿಯ ಹುಲಿಕುಂಟೆ ಮೂರ್ತಿ ಭಾಗವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಭಾಗಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+