Actor Darshan: ದರ್ಶನ್‌ಗೆ ಕಾಟೇರಾ ನಿರ್ದೇಶಕ ನೀಡಿರುವ ಆ ಎರಡು ಪುಸ್ತಕಗಳಲ್ಲಿ ಏನಿದೆ?
ನಟ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಆಗಿ ಶುಭ ಸುದ್ದಿ ನೀಡಿ ಹೋಗ ಬೇಕು ಎಂದು ಕಾಟೇರಾ ನಿರ್ದೇಶಕ ತರುಣ್ ಸುಧೀರ್ ಅವರು ಆಗಮಿಸಿದ್ದರು. ಆದರೆ ಅವರಿಗೆ ನಿರಾಸೆ ಕಾದಿದೆ. ತರುಣ್ ಸುಧೀರ್ ಅವರಿಗೆ ಮದುವೆಯ ಆಮಂತ್ರಣವನ್ನೇ ನೀಡಲು ಅವಕಾಶ ನೀಡಲಿಲ್ಲ ಎಂದು ತರುಣ್ ತಿಳಿಸಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಇಬ್ಬರೂ ಇದೇ ಆಗಸ್ಟ್ 10 ಹಾಗೂ 11 ರಂದು ಹಸೆ ಮಣೆ ಏರಲಿದ್ದಾರೆ. ಮದುವೆಯ ಆಮಂತ್ರಣದ ಮೊದಲ ಪ್ರತಿಯನ್ನು ತಮ್ಮ ಗಾಢ್ ಫಾದರ್ ದರ್ಶನ್ ಅವರಿಗೆ ನೀಡಬೇಕು ಎಂದು ನಿರ್ದೇಶಕ ತರುಣ್ ಸುಧೀರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಆದರೆ ಅವರನ್ನು ಅಲ್ಲಿನ ಅಧಿಕಾರಿಗಳು ಒಳಗೆ ಬಿಡಲಿಲ್ಲ.

ಗಾಢ್‌ಫಾದರ್ ದರ್ಶನ ಪಡೆದ ತರುಣ್
ಶನಿವಾರ (ಜುಲೈ 19) ರಂದು ದರ್ಶನ್ ಅವರನ್ನು ಭೇಟಿ ಆಗಲು ನಿರ್ದೇಶಕ ತರುಣ್ ಸುಧೀರ್, ಯಶಸ್ ಸುರ್ಯ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಟ ದರ್ಶನ್ ಅವರನ್ನು ಭೇಟಿ ಆಗಿ ಆರೋಗ್ಯವನ್ನು ವಿಚಾರಿಸಿದ್ದಾರೆ. ದರ್ಶನ್ ಇವರ ಜೊತೆ ಕೆಲ ಕಾಲ ಮಾತನಾಡಿದ್ದಾರೆ. ಆದರೆ ದರ್ಶನ್ ಅವರಿಗೆ ಮೊದಲ ಆಮಂತ್ರಣ ನೀಡಬೇಕು ಎಂದು ಕನಸು ಕಂಡಿದ್ದ ಸುಧೀರ್ ಆಸೆಗೆ ಬ್ರೇಕ್ ಬಿದ್ದಿದೆ.
ಜೈಲು ಅಧಿಕಾರಿಗಳು ದರ್ಶನ್ ನೋಡಲು ಹೋಗುವಾಗ ಮದುವೆ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು ಬಿಟ್ಟಿಲ್ಲ. ಆದರೆ ದರ್ಶನ್ ಅವರಿಗೆ ತರುಣ್ ಸುಧೀರ್ ಅವರು ತಂದಿದ್ದ ಆ ಎರಡು ಪುಸ್ತಕಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ದರ್ಶನ್‌ಗೆ ನೀಡಿದ ಆ ಎರಡು ಪುಸ್ತಕಗಳು ಯಾವವು?
ದರ್ಶನ್ ಅವರನ್ನು ಭೇಟಿ ಆದ ಮೇಲೆ ಮಾಧ್ಯಮದ ಜೊತೆ ಮಾತನಾಡಿರುವ ತರುಣ್ ಸುಧೀರ್ ದರ್ಶನ್ ಅವರಿಗೆ ಎರಡು ಪುಸ್ತಕ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾರೆ. ದರ್ಶನ್‌ಗೆ ಓದುವುದಕ್ಕಾಗಿ ತರುಣ್ ಸುಧೀರ್ ಅವರು ದಿ ಅಲ್‌ಕೆಮಿಸ್ಟ್ ಕನ್ನಡ ಅನುವಾದ ಪುಸ್ತಕವನ್ನು ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಅರ್ಜುನ್ ಆನೆಯ ಬಗ್ಗೆ ಬರೆದಿರುವ ವಿಶೇಷ ಪುಸ್ತಕವನ್ನು ನೀಡಿ ಬಂದಿದ್ದಾಗಿ ತಿಳಿಸಿದ್ದಾರೆ.

ಆ ಪುಸ್ತಕದಲ್ಲಿ ಏನಿದೆ?
ದಿ ಅಲ್‌ಕೆಮಿಸ್ಟ್ ಇದು ಒಂದು ಜೀವನದ ಕಥೆ ಆಗಿದೆ. ಆ ಪುಸ್ತಕದಲ್ಲಿ ಒಂದು ಫಿಲಾಸಪಿ ಇದೆ. ಬುಕ್ ಓದುತ್ತಾ ಹೋದರೆ ಜೀವನಕ್ಕೆ ಪ್ರೇರಣೆ ಸಿಗಲಿದೆ. ಯಾವ ಸಂದರ್ಭದಲ್ಲಿ ಹೇಗೆ ಪಾಸಿಟಿವ್ ನೆಸ್ ಹುಡಕಬೇಕು ಎಂಬುದು ಆ ಪುಸ್ತಕದಲ್ಲಿ ನೀಡಲಾಗಿದೆ ಎಂದು ತರುಣ್ ಸುಧೀರ್ ವಿವರಿಸಿದ್ದಾರೆ. ಇನ್ನು ದರ್ಶನ್‌ಗೆ ಪ್ರಾಣಿಗಳೆಂದರೆ ತುಂಬ ಇಷ್ಟ ಹೀಗಾಗು ಆನೆಯ ಪುಸ್ತಕವನ್ನು ನೀಡಿದ್ದೇನೆ ಎಂದು ತರುಣ್ ಹೇಳಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಅವರ ಪ್ರೀತಿ ಮೊದಲಿಗೆ ದರ್ಶನ್ ಅವರಿಗೆ ತಿಳಿದಿತ್ತು. ದರ್ಶನ್ ಹಸೆ ಮಣೆ ಏರಲು ಗ್ರೀನ್ ಸಿಗ್ನಲ್ ನೀಡಿದ್ದರು ಎನ್ನಲಾಗಿದೆ. ಇನ್ನು ದರ್ಶನ್ ಜೈಲಿನಲ್ಲಿರುವಾಗ ನಾನು ಮದುವೆ ಆಗಲಾರೆ ಎಂದು ತರುಣ್ ಹೇಳುತ್ತಿದ್ದರಂತೆ. ಆದರೆ ಹಿರಿಯರ ಒತ್ತಾಯಕ್ಕೆ ಮಣಿದು ಆಗಸ್ಟ್‌ನಲ್ಲಿ ಮದುವೆ ಆಗಲು ನಿರ್ಧರಿಸಿದ್ದಾಗಿ ತಿಳಿದು ಬಂದಿದೆ.
-
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications