ಮೈತ್ರಿಯಾ ಗೌಡ ಮೇಲೆ ಬಿತ್ತು ಬೆದರಿಕೆ ಕೇಸ್
ಬೆಂಗಳೂರು, ಸೆ.2: ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಮೇಲೆ ಅತ್ಯಾಚಾರ, ವಂಚನೆ ಆರೋಪ ಮಾಡಿರುವ ಮೈತ್ರಿಯಾ ಗೌಡ ವಿರುದ್ಧ ಮಂಗಳವಾರ ಬೆದರಿಕೆ ಕೇಸ್ ಬಿದ್ದಿದೆ. ಕೊಟ್ಲಲ್ಲಪ್ಪೋ ಕೈ ಸಿನಿಮಾದ ನಿರ್ದೇಶಕ ರಿಷಿ ಅವರನ್ನು ಮದುವೆಯಾಗಿ ಕೈ ಕೊಟ್ಟಿದ್ದಲ್ಲದೆ ಬೆದರಿಕೆ ಒಡ್ಡಿದ ಆರೋಪ ಮೈತ್ರಿಯಾ ಮೇಲಿದೆ.
ಆದರೆ, ಮೈತ್ರಿಯಾ ಮೇಲಿನ ಆರೋಪಗಳನ್ನು ಅವರ ತಾಯಿ ಇಂದಿರಾ ಅಲ್ಲಗೆಳೆದಿದ್ದಾರೆ. ತಪ್ಪು ಮಾಡಿದ್ರೆ ಸಾರ್ವಜನಿಕವಾಗಿ ಹ್ಯಾಂಗ್ ಮಾಡಿ ಯಾಕೆ ನನಗೆ ಈ ರೀತಿ ಹಿಂಸೆ ಮಾಡುತ್ತಿದ್ದೀರಿ. ನಿರ್ದೇಶಕ ರಿಷಿ ಆರೋಪಗಳೆಲ್ಲವೂ ಸುಳ್ಳು. ಕಾರ್ತಿಕ್ ಜೊತೆ ಮದುವೆಯಾಗಿದ್ದೇನೆ. ರಿಷಿ ಏನು ಎತ್ತ ಎಂಬುದು ಎಲ್ಲರಿಗೂ ಗೊತ್ತು. ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲು ಸಿದ್ಧ ಎಂದು ಘೋಷಿಸಿದ್ದಾರೆ.
ಮೈತ್ರಿಯಾ ಗೌಡ ಬಿನ್ ವೆಂಕಟೇಶ ಗೌಡ ಪ್ರೇಮ, ವಿವಾಹ ಕಥೆ ನೋಡುತ್ತಿದ್ದರೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಬುದ್ಧಿವಂತ ಚಿತ್ರದ 'ನಾನವನಲ್ಲ ನಾನವನಲ್ಲ' ಡೈಲಾಗ್ ನೆನಪಾಗುತ್ತದೆ. ಮೈತ್ರಿಯಾ ಗೌಡ ಅವರಿಗೆ ನಾನಾ ಹೆಸರುಗಳಿದ್ದು, ಶ್ರುತಿ, ಶಿವಾನಿ ಎಂಬ ಹೆಸರಿನಲ್ಲೂ ಅನೇಕರಿಗೆ ಪರಿಚಿತರು ಎನ್ನಲಾಗಿದೆ.[ಮೈತ್ರಿಯಾ ಜೊತೆ ದೈಹಿಕ ಸಂಪರ್ಕ ಮಾಡಿದ್ದು ಯಾರು?]
ಬೆಂಗಳೂರಿನಲ್ಲಿ 2004ರ ಜುಲೈ 17ರಂದು ಮೈತ್ರಿಯಾ ಹಾಗೂ ನಿರ್ದೇಶಕ ರಿಷಿ ಅವರ ಮದುವೆ ಆಗಿತ್ತು. ಸೂರ್ಯ ದಿ ಗ್ರೇಟ್ ಚಿತ್ರದ ನಾಯಕಿಯಾಗಿ ಮೈತ್ರಿಯಾ ಅಲಿಯಾಸ್ ಶ್ರುತಿ ಗೌಡರನ್ನು ರಿಷಿ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಇತ್ತೀಚೆಗೆ ಮೈತ್ರಿಯಾ-ಕಾರ್ತಿಕ್ ಪ್ರೇಮ ಪ್ರಕರಣ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಿಷಿ ಅವರು ಮೈತ್ರಿಯಾರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಅದರೆ, ಪಾಸ್ಟ್ ಇಸ್ ಪಾಸ್ಟ್ ಹಳೆಯದನ್ನು ಮರೆತುಬಿಡಿ ಎಂದು ಮೈತ್ರಿಯಾ ಹೇಳಿದ್ದಾರಂತೆ. ಇದಾರ ಬಳಿಕ ಮೈತ್ರಿಯಾ ಕಡೆಯಿಂದ ರಿಷಿಗೆ ಬೆದರಿಕೆ ಕರೆ ಬಂದಿದೆ ಎಂದು ರಿಷಿ ಪರ ವಕೀಲ ಕುಮಾರ್ ಗೌಡ ಹೇಳಿದ್ದಾರೆ.

ರಿಷಿ ನೀಡಿದ ದೂರಿನ ಸಾರಾಂಶವೇನು?
* ನಟಿ ಮೈತ್ರಿಯಾ ವಿರುದ್ಧ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಟಿ ಮೈತ್ರಿಯಾ ವಿರುದ್ಧ ವಂಚನೆ, ಕೊಲೆ ಬೆದರಿಕೆ ಮತ್ತು ಕಳ್ಳತನ ಆರೋಪದಡಿ ನಿರ್ದೇಶಕ ರಿಷಿ ದೂರು ದಾಖಲಿಸಿದ್ದಾರೆ.
* ಮೈತ್ರಿಯಾ ಅಲಿಯಾಸ್ ಶೃತಿಗೌಡರನ್ನು 2004ರಲ್ಲಿ ಮಲ್ಲೇಶ್ವರಂದ ಸನ್ಮಾನ್ ಹೋಟೆಲ್ ನಲ್ಲಿ ನಾನು ಮದುವೆಯಾಗಿದ್ದೆ. ಅಲ್ಲದೆ ನಾಲ್ಕು ತಿಂಗಳ ಕಾಲ ಸಂಸಾರ ಕೂಡ ಮಾಡಿದ್ದೆ. ಆಕೆ ನನ್ನ ಬಳಿ ಇದ್ದ 2 ಲಕ್ಷ ರು.ಗಳನ್ನು ಅಪಹರಿಸಿ ನಾಪತ್ತೆಯಾಗಿದ್ದಳು. ಸಾಕಷ್ಟು ಬಾರಿ ನಾನು ಆಕೆಯನ್ನು ಹುಡುಕಲು ಪ್ರಯತ್ನಿಸಿದ್ದೆ. ಈಗ ಮಾಧ್ಯಮದಲ್ಲಿ ಈಕೆ ಬಗ್ಗೆ ಸುದ್ದಿ ಬಂದ ಮೇಲೆ ಈಕೆ ಬಗ್ಗೆ ತಿಳಿಯಿತು ಎಂದು ನಿರ್ದೇಶಕ ರಿಷಿ ಆರೋಪಿಸಿದ್ದಾರೆ.

ಉದ್ಯಮಿ ಅಂಜನ್ ಕುಮಾರ್‌ಗೆ ಹಿಂಸೆ ನೀಡಿದ್ದಳು
* 2007ರಲ್ಲಿ ನನ್ನಂತೆಯೇ ಮತ್ತೊಬ್ಬ ಈಕೆಯಿಂದ ಹಿಂಸೆಗೆ ಒಳಗಾಗಿದ್ದ. ಉದ್ಯಮಿ ಅಂಜನ್ ಕುಮಾರ್‌ಗೆ ಹಿಂಸೆ ನೀಡಿದ್ದಳು. ಕೇವಲ ಅಂಜನ್ ಮಾತ್ರವಲ್ಲದೆ ಬೆಂಗಳೂರಿನ ಹಲವು ನಿರ್ಮಾಪಕರು ಈಕೆಯ ಹಿಂಸೆಗೆ ಒಳಗಾಗಿದ್ದಾರೆ.
* ಆಗಸ್ಟ್ 27ರಂದು ನಾನು ಆಕೆಯ ಮನೆಗೆ ಹೋಗಿದ್ದೆ. ಆದರೆ ಆಕೆ ನನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನನಗೆ ಪ್ರಭಾವಿ ವ್ಯಕ್ತಿಗಳ ಮತ್ತು ರಾಜಕೀಯ ನಂಟಿದ್ದು, ತನ್ನ ಪೂರ್ವ ಜೀವನವನ್ನು ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿದರು.
* ಸೋಮವಾರ ಮಧ್ಯಾಹ್ನ 2.30ಕ್ಕೆ 080-25994309 ದೂರವಾಣಿ ಸಂಖ್ಯೆಯಿಂದ ನನ್ನ ಮೊಬೈಲ್‌ಗೆ ಬೆದರಿಕೆ ಕರೆ ಬಂದಿತ್ತು. ಮೈತ್ರಿಯಾ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ರಿಷಿ ಆರೋಪಿಸಿದ್ದಾರೆ.

ನಯನಾ ಕೃಷ್ಣ ಪ್ರಕರಣದಲ್ಲಿ ಸಿಲುಕಿದ್ದ ರಿಷಿ
ಕೊಟ್ಟೊಲ್ಲಪ್ಪ ಕೈ ಚಿತ್ರದ ನಿರ್ದೇಶಕ ರಿಷಿ ಅವರು 8 ಲಕ್ಷ ರು ಮೋಸ ಮಾಡಿದ್ದಾರೆ. ನನ್ನನ್ನು ಕೆಟ್ಟದಾಗಿ ಬಳಸಿಕೊಳ್ಳಲು ಯತ್ನಿಸಿದರು ಎಂದು ಆರೋಪಿ ನಟಿ ನಯನಾಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ರಿಷಿ ಮೇಲೆ ಚಪ್ಪಲಿಯಿಂದ ಹೊಡೆದಿದ್ದರು. ನಯನಾ ಮೇಲೆ ರಿಷಿ ಹಾಗೂ ರಿಷಿ ಮೇಲೆ ನಯನಾ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು

ತಪ್ಪು ಮಾಡಿದ್ರೆ ಸಾರ್ವಜನಿಕವಾಗಿ ಹ್ಯಾಂಗ್ ಮಾಡಿ
ತಪ್ಪು ಮಾಡಿದ್ರೆ ಸಾರ್ವಜನಿಕವಾಗಿ ಹ್ಯಾಂಗ್ ಮಾಡಿ ಯಾಕೆ ನನಗೆ ಈ ರೀತಿ ಹಿಂಸೆ ಮಾಡುತ್ತಿದ್ದೀರಿ. ನಿರ್ದೇಶಕ ರಿಷಿ ಆರೋಪಗಳೆಲ್ಲವೂ ಸುಳ್ಳು. ಕಾರ್ತಿಕ್ ಜೊತೆ ಮದುವೆಯಾಗಿದ್ದೇನೆ ಅವನು ಬೇಕು. ಅವನು ಮದುವೆಯಾಗಿದ್ದೆ ಎಂದು ಒಪ್ಪಿಕೊಂಡರೇ ಸಾಕು. ರಿಷಿಯನ್ನು ಬಳಸಿಕೊಂಡು ಕೆಲವರು ನನ್ನ ಮೇಲೆ ಸುಳ್ಳು ಆರೋಪ ಮಾಡಲು ಯತ್ನಿಸುತ್ತಿದ್ದಾರೆ.
ಹಣ ಕೊಟ್ಟು ಕೇಸ್ ಮುಕ್ತಾಯಗೊಳಿಸಲು ಯತ್ನಿಸಿದರು. ಕಾರ್ತಿಕ್ ಬಿಟ್ಟು ಬೇರೆಯವರನ್ನು ಮದುವೆಯಾಗಿಲ್ಲ. ನಾನು ಎಲ್ಲರನ್ನು ಮೋಸ ಮಾಡುವ ಥರ್ಡ್ ಕ್ಲಾಸ್ ಅಲ್ಲ ಎಂದು ಖಾಸಗಿ ವಾಹಿನಿ ಮುಂದೆ ಮೈತ್ರಿಯಾ ಗೋಳಾಡಿದ್ದಾರೆ.












Click it and Unblock the Notifications