ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ ಕೊರೊನಾಗೆ ಹೆದರಬೇಕ- ಪ್ರೇಮ್
ಬೆಂಗಳೂರು, ಮಾರ್ಚ್ 20: ''ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ ಈ ಕೊರೊನಾಗೆ ಹೆದರಬೇಕ'' ಎಂದು ನಿರ್ದೇಶಕ ಜೋಗಿ ಪ್ರೇಮ್ ಕೊರೊನಾ ವಿರುದ್ಧ ಭಯ ಪಡಬೇಡಿ ಎಂದು ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.
''ಕೊರೊನಾಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಆದೇಶ ಹೊರಡಿಸಿರುವ ರೀತಿ ಇದ್ದರೆ, ನಾವೆಲ್ಲ ಸುರಕ್ಷತವಾಗಿ ಇರುತ್ತೇವೆ. ಮನೆಯಲ್ಲಿ ಇರುವವರೆಲಲ್ಲ ಸ್ವಚ್ಚವಾಗಿ ಇರೀ. ನಮ್ಮ ದೇಶ, ನಾವು ನಮ್ಮ ತನವನ್ನು ಕಾಪಾಡೋಣ.'' ಎಂದು ಪ್ರೇಮ್ ವಿಡಿಯೋದಲ್ಲಿ ಹೇಳಿದ್ದಾರೆ.

''ಕೋವಿಡ್ 19 ವಿರುದ್ಧ ಸಮರ ಸಾರಿರುವ ಎಲ್ಲ ಡಾಕ್ಟರ್, ನರ್ಸ್ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಇದೇ ಭಾನುವಾರ ಸೆಲ್ಯೂಟ್ ಮಾಡುತ್ತೇನೆ. ಬಿ ಸೇಫ್ ಅಂಡ್ ಬಿ ಕೇರ್ ಫುಲ್.'' ಎಂದಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಪ್ರೇಮ್ ನಮನ ಸಲ್ಲಿಸಿದ್ದಾರೆ. ಕೊರೊನಾ ದಿಂದ ಭಯ ಪಡದೆ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದ್ದಾರೆ.
A big salute to all the doctors, nurses, hospital staffs, police and everyone who are serving without caring themselves. It is our responsiblity to be safe and make the country safe. Let us follow the people's curfew declared on sunday 22nd March. #COVID19 #Prems #Ekloveya pic.twitter.com/9nAKBQm026
— PREM❣️S (@directorprems) March 20, 2020
ಕರ್ನಾಟಕದಲ್ಲಿ ಈವರೆಗೆ 15 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. ಭಾರತದಲ್ಲಿ 223 ಪ್ರಕರಣಗಳು ದೃಢಪಟ್ಟಿವೆ. ಭಾರತದಲ್ಲಿ 4 ಜನ ಮರಣ ಹೊಂದಿದ್ದಾರೆ.












Click it and Unblock the Notifications