12 ವರ್ಷ ಕರ್ನಾಟಕದಲ್ಲಿದ್ರೂ ಕನ್ನಡ ಕಲಿಯಲಿಲ್ಲ, ಗಾಂಚಲಿ ಕಮ್ಮಿ ಇಲ್ಲ!
Kannadigaru: ಬೆಂಗಳೂರಲ್ಲಿ ಮತ್ತೆ ಕನ್ನಡ ಭಾಷಾ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಅನ್ಯಭಾಷಿಕರು ವರ್ಷಗಳ ಕಾಲ ಕರ್ನಾಟಕದಲ್ಲಿದ್ದರೂ ಕನ್ನಡ ಕಲಿಯದೆ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲೊಬ್ಬ ವ್ಯಕ್ತಿ ಕಳೆದ 12 ವರ್ಷಗಳಿಂದ ಬೆಂಗಳೂರಲ್ಲಿ ಇದ್ದರೂ, ಕನ್ನಡ ಕಲಿತಿಲ್ಲವಂತೆ. ಇನ್ನೂ ಕನ್ನಡ ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದು ಅನ್ಯಭಾಷಿಕರ ಮಾತು. ವರ್ಷಗಳಾದರೂ ಕನ್ನಡ ಕಲಿಯದೆ ಇರುವುದನ್ನು ಕನ್ನಡಿಗರು ಪ್ರಶ್ನಿಸಿದ್ದಾರೆ.
ಬೆಂಗಳೂರಲ್ಲಿ ಹಾಗೂ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇದ್ದರೂ ಕನ್ನಡ ಕಲಿಯದೆ ಇರುವವರ ಬಗ್ಗೆ ಈಗ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಕರ್ನಾಟಕದಲ್ಲಿ 12 ವರ್ಷಗಳಿಂದ ಇದ್ದರೂ ಕನ್ನಡ ಕಲಿಯದ ವ್ಯಕ್ತಿಗೆ ಕನ್ನಡಿಗರೊಬ್ಬರು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಕನ್ನಡಿಗರೊಬ್ಬರು ಅನ್ಯಭಾಷೆಯ ವ್ಯಕ್ತಿ ಜೊತೆ ಮಾತನಾಡಿದ್ದಾರೆ. ಅದರಲ್ಲಿ ನೀವ್ಯಾಕೆ ಕನ್ನಡ ಕಲಿತಿಲ್ಲ ಎಂದು ಪ್ರಶ್ನೆ ಮಾಡಿದ್ದು, ಅವರಿಗೂ (ಪೆಟ್ರೋಲ್ ಬಂಕ್ ವ್ಯಕ್ತಿಗೆ ) ನಾನು ಮಾತನಾಡುವುದು ಅರ್ಥ ಆಗುತ್ತೆ ಅದಕ್ಕೆ ಮಾತಾಡಿಲ್ಲ ಎಂದಿದ್ದಾನೆ. ಮುಂದುವರಿದು ಪ್ರಶ್ನೆ ಮಾಡಿದ ಕನ್ನಡಿರಿಗೆ ನಿಮಗೆ ಹಿಂದಿ ಬರುತ್ತಾ ಅಂತ ಪ್ರಶ್ನೆ ಮಾಡಿದ್ದಾನೆ.
ಇದಕ್ಕೆ ಉತ್ತರಿಸಿರುವ ಕನ್ನಡಿಗ ಹೌದು ನನಗೆ ಹಿಂದಿನೂ ಬರುತ್ತೆ. ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಆದರೆ, ನೀವು ಸುದೀರ್ಘ 12 ವರ್ಷ ಕರ್ನಾಟಕದಲ್ಲಿದ್ದೂ ಯಾಕೆ ಕನ್ನಡ ಕಲಿತಿಲ್ಲ. ಕರ್ನಾಟಕವನ್ನು ಬಿಡಿ (ಇಲ್ಲಿಂದ ಹೋಗಿ) ಎಂದಿದ್ದಾನೆ. ಅಲ್ಲದೇ ಇಂದು ಉತ್ತರ ಭಾರತ ಅಥವಾ ಮುಂಬೈ ಅಲ್ಲ. ಇಲ್ಲಿದ್ದ ಮೇಲೆ ಕನ್ನಡವನ್ನು ಕಲಿಯಿರಿ, ಸ್ಥಳೀಯ ಭಾಷೆಗೆ ಆದ್ಯತೆ ಕೊಡಿ ಎಂದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕನ್ನಡ ಯಾಕೆ ಕಲಿತಿಲ್ಲ. ಇಷ್ಟೊಂದು ವರ್ಷವಾಯ್ತಲ್ಲ ಇಲ್ಲಿ ಬಂದು ಎನ್ನುವ ಪ್ರಶ್ನೆಗೆ ಸುಮ್ಮನೆ ಯಾಕೆ ನನ್ನೊಂದಿಗೆ ಜಗಳ ಮಾಡ್ತಿದ್ದಿರಿ, ವಿಡಿಯೋ ಯಾಕೆ ಮಾಡ್ಕೊಳ್ತಿದ್ದೀರಿ ಅಂತ ಅನ್ಯಭಾಷಿಕ ಕನ್ನಡಿಗನನ್ನು ಕೇಳಿರುವುದು ವಿಡಿಯೋದಲ್ಲಿ ಇದೆ. ಇಬ್ಬರು ಸಮಾಧಾನವಾಗಿಯೇ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿಗೆ ಕನ್ನಡ ಕಲಿ ಅಂತೀರಾ ?
ಇನ್ನು ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನ್ಯಭಾಷಿಕರಿಗೆ ಕನ್ನಡಿಗರು ಭಾಷೆ ಕಲಿಯದೆ ಇರುವುದಕ್ಕೆ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇದಕ್ಕೆ ಕೆಲವರು ಸರಿಯಾಗಿಯೇ ಹೇಳಿದ್ದಾರೆ ಎಂದರೆ, ಇನ್ನೂ ಕೆಲವರು ಅದು ಅವರ ಆಯ್ಕೆ ಹಾಗೂ ಸ್ವಾತಂತ್ರ್ಯ ಈ ರೀತಿ ಒತ್ತಾಯ ಮಾಡುವುದರಲ್ಲಿ ಅರ್ಥವಿಲ್ಲ ಎಂದೂ ಹೇಳಿದ್ದಾರೆ.
ಆದರೆ, ಕೆಲವರು ನೀವು ವಿರಾಟ್ ಕೊಹ್ಲಿಗೆ ಕನ್ನಡ ಕಲಿಯಿರಿ ಅಂತ ಹೇಳ್ತೀರಾ, ಅವರು ಆರ್‌ಸಿಬಿಗಾಗಿ 16 ವರ್ಷಗಳಿಂದ ಆಟ ಆಡ್ತಾಇದ್ದಾರೆ. ಅವರಿಗೆ ಯಾಕೆ ಕನ್ನಡ ಕಲಿರಿ ಅಂತ ಹೇಳ್ತಾ ಇಲ್ಲ ಅಂತನೂ ಕೇಳಿದ್ದಾರೆ.
This is Good. Question the Lazy folks
— ಲಕ್ಷ್ಮಿ ತನಯ (@ManjuKBye) October 30, 2024
12yrs in Karnataka and yet to understand and learn Kannada?
That says only Two things, Zero Curiosity and willingness to Learn, Arrogance towards Local Culture and Language.#Kannada #Karnataka pic.twitter.com/fdkosPscKc
ಇದು ಒಳ್ಳೆಯ ಬೆಳವಣಿಗೆ
ಈ ವಿಡಿಯೋವನ್ನು ಲಕ್ಷ್ಮಿ ತನಯ ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದೊಂದಿಗೆ ಇದು ಒಳ್ಳೆಯ ಬೆಳವಣಿಗೆ. ಈ ರೀತಿಯ ಸೋಮಾರಿಗಳನ್ನು ಪ್ರಶ್ನಿಸಿ ಎಂದು ಕರೆ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ 12 ವರ್ಷಗಳಿಂದ ಇದ್ದರೂ, ಇನ್ನೂ ಕನ್ನಡವನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಕಲಿಯಬೇಕು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇವರು ಕನ್ನಡ ಕಲಿಯದೆ ಇರುವುದು ಎರಡು ಕಾರಣಗಳನ್ನು ತೋರಿಸುತ್ತದೆ. ಇವರಿಗೆ ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿಯುವ ಯಾವ ಕುತೂಹಲವೂ ಉಳಿದಿಲ್ಲ. ಕನ್ನಡ ಕಲಿಯುವ ಇಚ್ಛೆ, ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಇವರು ಹೊಂದಿರುವ ಅಹಂಕಾರವನ್ನು ತೋರಿಸುತ್ತದೆ ಎಂದಿದ್ದಾರೆ.












Click it and Unblock the Notifications