• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಬಿಡೆಂಟ್, ಅಜ್ಮೀರಾ ಬಳಿಕ ಮತ್ತೊಂದು ಚಿಟ್‌ಫಂಡ್‌ ಸಂಸ್ಥೆ ಕರ್ಮಕಾಂಡ ಬಯಲು

|

ಬೆಂಗಳೂರು, ನವೆಂಬರ್ 20: ಆಂಬಿಡೆಂಟ್, ಅಜ್ಮೀರಾ ಚಿಟ್‌ಫಂಡ್‌ ಸಂಸ್ಥೆಗಳ ಬಳಿಕ ಇದೀಗ ಐಎಂಎ (ಐ ಮೊನೆಟರಿ ಅಡ್ವೈಸರಿ ಪ್ರೈವೇಟ್‌ ಲಿಮಿಟೆಡ್‌) ಸಂಸ್ಥೆ ಸಹ ತನ್ನ ಗ್ರಾಹಕರಿಗೆ ದೋಖಾ ಮಾಡಿದೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

ಕಾನೂನುಬಾಹಿರವಾಗಿ ಐಎಂಎ ಸಂಸ್ಥೆಯು ಜನರಿಂದ ಹಣ ಸಂಗ್ರಹಿಸಿದೆ, ಹಾಗೂ ಅದನ್ನು ಸಂಸ್ಥೆಯ ನಿರ್ದೇಶಕರು ವೈಯಕ್ತಿಕ ಅವಶ್ಯಕತೆಗೆ ಬಳಸಿಕೊಂಡಿದ್ದಾರೆ ಎಂದು ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ, ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಪೊಲೀಸರು ನೊಟೀಸ್‌ ಪ್ರಕಟಿಸಿದ್ದಾರೆ.

ಸಂಸ್ಥೆಯಲ್ಲಿ ಹಣ ಹೂಡಿದ್ದ ಗ್ರಾಹಕರು ಇಂದು ಟೌನ್‌ಹಾಲ್‌ನ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿ ತಮ್ಮ ಹಣವನ್ನು ವಾಪಸ್ಸು ದೊರಕಿಸಿಕೊಡುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

ಆಂಬಿಡೆಂಟ್‌ ಮಾದರಿಯಲ್ಲೇ ಅಜ್ಮೀರಾ ಚಿಟ್‌ಫಂಡ್‌ನಿಂದ ವಂಚನೆ: ಪ್ರತಿಭಟನೆ

ಸಂಸ್ಥೆಯಲ್ಲಿ ಒಟ್ಟು 16 ಜನ ನಿರ್ದೇಶಕರುಗಳು ಇದ್ದು ಎಲ್ಲರ ಮೇಲೂ ಪ್ರಕರಣ ದಾಖಲಾಗಿದೆ. ಅಲ್ಲದೆ ಸಂಸ್ಥೆಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಆಂಬಿಡೆಂಟ್ ಪ್ರಕರಣ ಸಿಐಡಿಗೆ?, ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಇದೇ ಸಂಸ್ಥೆಯ ಪ್ರಚಾರಕರೊಬ್ಬರಿಗೆ ಕನ್ನಡದ ಟಿವಿ ಮಾಧ್ಯಮವೊಂದು ಕೊಡಮಾಡುವ ಉತ್ತಮ ನಾಗರೀಕ ಪ್ರಶಸ್ತಿ ಸಹ ಸಿಕ್ಕಿತ್ತು. ಆಭರಣ ವ್ಯಾಪಾರಿಗಳಾದ ಅವರಿಗೆ ಅಂದು ನಿವೃತ್ತ ನ್ಯಾಯಮೂರ್ತಿ ಸಂತೋಶ್ ಹೆಗಡೆ ಅವರೇ ಪ್ರಶಸ್ತಿ ವಿತರಣೆ ಸಹ ಮಾಡಿದ್ದರು.

English summary
Police registered complaint and forfeit chit fund company IMA's assets. IMA private limited companies costumers did protest in front of town hall today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X