• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ಕಾಯ್ದೆ ಜಾರಿ: ಬಿಬಿಎಂಪಿಗಿರುವ ಹೊಸ ಸವಾಲುಗಳೇನು?

|

ಬೆಂಗಳೂರು, ಜನವರಿ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ಕಾಯ್ದೆ ಜಾರಿಯಾಗಿದ್ದು, ಅದರ ಜತೆ ಜತೆಗೆ ಹೊಸ ಸವಾಲುಗಳು ಕೂಡ ಎದುರಾಗಿವೆ.

ಈ ಕಾಯ್ದೆ ಅನ್ವಯ ಬಿಬಿಎಂಪಿ ಹುದ್ದೆಗಳಿಗೆ ಈಗ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ.ಬಿಬಿಎಂಪಿ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳ ನಿಯೋಜನೆಯೇ ಸವಾಲು.

ಇನ್ನು ಹೊಸ ಕಾಯ್ದೆಯ ಪ್ರಕಾರ, ಬಿಬಿಎಂಪಿಯ ಎಂಟು ವಲಯಗಳಲ್ಲಿ ಪ್ರತಿಯೊಂದೂ ವಲಯವೂ ಉಪಾ ಆಯುಕ್ತರನ್ನು ಹೊಂದಿರುತ್ತದೆ. ಈ ಉಪ ಆಯುಕ್ತರ ಅವರ ಪಾತ್ರವು ಉಪ-ಮೇಯರ್ ಪಾತ್ರಕ್ಕೆ ಸಮಾನವಾಗಿರುತ್ತದೆ.

ಹೀಗಾಗಿ ಆಯುಕ್ತರ ಹುದ್ದೆಯನ್ನು ಐಎಎಸ್ ಅಧಿಕಾರಿಯೊಬ್ಬರು ಭರ್ತಿ ಮಾಡಬೇಕಾಗುತ್ತದೆ. ಆದರೆ ಪ್ರಸ್ತುತ ಇರುವ ಪ್ರಾಂತೀಯ ಅಧಿಕಾರಿಗಳೆಲ್ಲರೂ ಕೆಎಎಸ್ ಅಧಿಕಾರಿಗಳಾಗಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರಿಗರೇ ಗಮನಿಸಿ, ಹೊಸ ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ

ಹೊಸ ವಲಯ ಆಯುಕ್ತರು ಬೇರೆ ಯಾವುದೇ ಪೋಸ್ಟಿಂಗ್‌ಗಳನ್ನು ಹೊಂದಿರದ ಕಾರಣ ಸವಾಲು ಈ ದೊಡ್ಡದಾಗಿದೆ, ಏಕೆಂದರೆ ಅವರು ಶೇ.100 ವಲಯ ಆಯುಕ್ತರ ಹುದ್ದೆಗೆ ಮೀಸಲಿಡಬೇಕು. ಪ್ರಸ್ತುತ ಎಲ್ಲಾ ಅಧಿಕಾರಿಗಳು ಈಗಾಗಲೇ ಇತರ ಹುದ್ದೆ ಅಥವಾ ಜವಾಬ್ದಾರಿಗಳನ್ನು ಹೊಂದಿದ್ದಾರೆ ಮತ್ತು ಇದನ್ನು ಹೆಚ್ಚುವರಿ ಪಾತ್ರವಾಗಿ ತೆಗೆದುಕೊಳ್ಳಲು ಯಾರೂ ಉತ್ಸುಕರಾಗಿಲ್ಲ.

ಸೋಮವಾರದಿಂದಲೇ ನೂತನ ಕಾಯ್ದೆ ಜಾರಿಯಾಗಿದ್ದು. ಎರಡೂ ಸದನಗಳಲ್ಲಿ ಒಪ್ಪಿಗೆ ನೀಡಿ ಕಾಯ್ದೆಗೆ ಅನುಮೋದನೆ ಪಡೆಯಲಾಗಿದ್ದು, ಈಗ ಹೊಸ ಕಾಯ್ದೆ ಬಂದಿದೆ. ವಾರ್ಡ್‍ಗಳ ಸಂಖ್ಯೆ ಹೆಚ್ಚಳವಾಗಬೇಕಿದೆ. ಹೊಸ ಪ್ರದೇಶಗಳ ಸೇರ್ಪಡೆಗೆ ಅವಕಾಶವಿದೆ.

ನಗರದಲ್ಲಿರುವ 8 ವಲಯಗಳು 15ಕ್ಕೆ ಏರಿಕೆ

ನಗರದಲ್ಲಿರುವ 8 ವಲಯಗಳು 15ಕ್ಕೆ ಏರಿಕೆ

ನಗರದಲ್ಲಿ 8 ವಲಯಗಳಿದ್ದು ಅದನ್ನು 15 ವಲಯಗಳನ್ನಾಗಿ ಮಾಡಬಹುದು. ವಲಯ ಡಿ ಮಾರ್ಕೆಷನ್ ಕಮೀಷನ್ ರಚನೆಗೆ ಅವಕಾಶವಿದೆ. ವಲಯ ವ್ಯಾಪ್ತಿಯ ವಾರ್ಡ್‍ಗಳ ಸಂಖ್ಯೆಯನ್ನು ಸಮಿತಿಯ ಸದಸ್ಯರು ನಿರ್ಧಾರ ಮಾಡಲಿದ್ದಾರೆ.

ವಾರ್ಡ್‌ಗಳ ಸಂಖ್ಯೆ 243ಕ್ಕೆ ಏರಿಕೆಯಾಗಲಿದೆ

ವಾರ್ಡ್‌ಗಳ ಸಂಖ್ಯೆ 243ಕ್ಕೆ ಏರಿಕೆಯಾಗಲಿದೆ

ಹೊಸ ಕಾಯ್ದೆ ಪ್ರಕಾರ ಸಮಿತಿ ರಚನೆಯಾದ ಮೇಲೆ ನಗರದಲ್ಲಿನ 198 ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆಯಾಗಲಿದೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ನಗರದ ಹೊರವಲಯವನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ವಾರ್ಡ್ ಕಮಿಟಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರು, ಮಹಿಳಾ ಸದಸ್ಯರು ಇರುತ್ತಾರೆ. ಮುಖ್ಯ ಆಯುಕ್ತರು ಈ ಸದಸ್ಯರನ್ನು ನೇಮಕ ಮಾಡಲಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿರುವ ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರೆಂದು ಮರುನಾಮಕರಣ ಮಾಡಲಾಗಿದೆ. ಈ ಕಾಯಿದೆಯು ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸುತ್ತದೆ ಮತ್ತು ಈ ವಾರ್ಡ್ ಗಳಿಗೆ ಕೌನ್ಸಿಲರ್ ಗಳ ನೇತೃತ್ವ ಇರುತ್ತದೆ. ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಪಡೆಯುವುದು ಈಗ ಸವಾಲಾಗಿದೆ. ಪ್ರಸ್ತುತ ಅಧಿಕಾರಿಗಳು ಸರ್ಕಾರ ಅನುಮೋದಿಸಿದ್ದಕ್ಕಿಂತ ಕಡಿಮೆ ಕೇಡರ್ (ಕೆಎಎಸ್) ನವರಾಗಿದ್ದಾರೆ.

ವಲಯ ಆಯುಕ್ತರು ಯಾರಾಗಲಿದ್ದಾರೆ?

ವಲಯ ಆಯುಕ್ತರು ಯಾರಾಗಲಿದ್ದಾರೆ?

ಜಂಟಿ ಆಯುಕ್ತರು ಆಗ ವಲಯ ಆಯುಕ್ತರಾಗಲಿದ್ದಾರೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಅಧೀನದಲ್ಲಿ ಜೋನಲ್ ಕಮೀಷನರ್ ಕಾರ್ಯ ನಿರ್ವಹಿಸಲಿದ್ದಾರೆ.

ಸೆಕ್ರೆಟರಿ ಲೆವಲ್ ಅಧಿಕಾರಿಗಳ ನೇಮಕ, ವಾರ್ಡ್ ಸಂಖ್ಯೆಗಳ ಹೆಚ್ಚಳ ಆಗಬೇಕಿದೆ, ಯಾವ ಆಧಾರದಲ್ಲಿ ಪ್ರದೇಶಗಳ ಸೇರ್ಪಡೆ ಮಾಡಬೇಕೆಂಬ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

  Engineering ವಿಧ್ಯಾರ್ಥಿಗಳಿಗೆ ಸಿಹಿ ಸುದ್ದಿ!! ಕೊಟ್ಟ ಎಜುಕೇಶನ್ ಮಿನಿಸ್ಟರ್ | Suresh Kumar | Oneindia Kannada
  ಹೊಸ ಕಾಯ್ದೆ ಜಾರಿ: ಬಿಬಿಎಂಪಿಗಿರುವ ಹೊಸ ಸವಾಲುಗಳೇನು?

  ಹೊಸ ಕಾಯ್ದೆ ಜಾರಿ: ಬಿಬಿಎಂಪಿಗಿರುವ ಹೊಸ ಸವಾಲುಗಳೇನು?

  ಯಾವ ಆಧಾರದಲ್ಲಿ ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಬೇಕಿದ್ದು, ವಾರ್ಡ್‍ಗಳ ಸೇರ್ಪಡೆ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ. ವಾರ್ಡ್ ಸಂಖ್ಯೆ ಹೆಚ್ಚಳ ವಿಚಾರಕ್ಕೆ ಸರ್ಕಾರ ಅನುಮೋದನೆ ನೀಡಬೇಕು. ಕರಡು ಪ್ರತಿ ರಚನೆ ಮಾಡಿ ಸಾರ್ವಜನಿಕರ ಅಭಿಪ್ರಾಯ ಪಡೆದ ನಂತರ ಅಧಿಸೂಚನೆ ಹೊರಬೀಳಲಿದೆ.

  ಸದ್ಯ ಈ ಸಂಬಂಧಿತ ಬೈಲಾ-ಆ್ಯಕ್ಟ್ ಎರಡೂ ಪಾಲಿಕೆಯ ಮುಂದಿದೆ. ಎರಡನ್ನೂ ಪರಾಮರ್ಶಿಸಿದಾಗ ಕಾಯ್ದೆ ಅಂತಿಮವಾಗಲಿದೆ. ತಾಜಾ ನಿದರ್ಶನವೆಂದರೆ ಆಯುಕ್ತರ ಅನುಮತಿ ಪಡೆದು ಜಾಹಿರಾತು ಹಾಕಲು ಅವಕಾಶವಿದೆ ಎಂದು ಹೇಳಿದರು. ಮಾಡಲ್ ಬಿಲ್ಡಿಂಗ್ ಬೈಲಾ ಕೇಂದ್ರ ಸರ್ಕಾರ ನೀಡಿದ್ದು, ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ. 1976ರಿಂದ ಕೆಎಂಸಿ ಕಾಯ್ದೆ ಬಂದಿತ್ತು. ಇದರಲ್ಲಿ ಎಲ್ಲ ಮಹಾನಗರ ಪಾಲಿಕೆಗಳು ನಡೆಯುತ್ತಿತ್ತು. ಆದರೆ ಈಗ ಹೊಸ ಕಾಯ್ದೆ ಬಂದಿದೆ ಎಂದು ಅವರು ಹೇಳಿದ್ದಾರೆ.

  English summary
  Although the new Bruhat Bengaluru Mahanagara Palike Act came into effect on Monday, it gave rise to the crucial questions of who the new zonal commissioners will be.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X