• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಹಗಳಿಂದ ನಿರ್ಮಿತ ಗಣೇಶ ಮೂರ್ತಿಗಳ ಪ್ರದರ್ಶನ ಮತ್ತು ಮಾರಾಟ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 03: ಮುಂಬರುವ ಗೌರಿ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ "ದ ಸೋಕ್‌ ಮಾರ್ಕೇಟ" ನ್ನು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್‌ ಶಂಕರ್‌ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೋನಾ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರೂ ಕೂಡಾ ತೊಂದರೆಗೀಡಾಗಿದ್ದಾರೆ. ಅದಕ್ಕೆ ಕರಕುಶಲಕರ್ಮಿಗಳು ಹೊರತಾಗಿಲ್ಲ. ಅವರಿಗೆ ವೇದಿಕೆ ಹಾಗೂ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಬಾರಿಯ ಸೋಕ್‌ ಮಾರ್ಕೇಟ್‌ ನಲ್ಲಿ ವಿವಿಧ ಲೋಹಗಳನ್ನು ಹಾಗೂ ಮರಗಳನ್ನು ಬಳಸಿ ನಿರ್ಮಿಸಲಾಗಿರುವ ಗಣೇಶ ಮೂರ್ತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

   ಸಿಎಂ ಬೊಮ್ಮಾಯಿಯನ್ನ ಹಾಡಿಹೊಗಳಿದ ಅಮಿತ್ ಶಾ | Oneindia Kannada

   ಕಾರ್ಯಕ್ರಮದ ಆಯೋಜಕರಾದ ಅಫ್ತಾಬ್‌ ಮಾತನಾಡಿ, ಸೆಪ್ಟೆಂಬರ್‌ 12 ರ ವರೆಗೆ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿರುವ ಈ ಮೇಳದಲ್ಲಿ ಕೋವಿಡ್‌ ಹರಡದಂತೆ ಎಲ್ಲಾ ರೀತಿಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರವೇಶ ಉಚಿತವಾಗಿದೆ. ಮುಂಬರುವ ಹಬ್ಬಗಳಿಗೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ.

   Demand for Ganesh Idol made of Various Metals at Chitakala Parishat


   ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ. 80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ ಎಂದು ಹೇಳಿದರು.

   ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಾಜಯ್ಯ, ಕಲಾವಿದೆ ಜಯಂತಿ ರತನ್‌, ಇಂಟೀರಿಯರ್‌ ಡಿಸೈನರ್‌ ಶೋಭಾ ರಮೇಶ್‌ ಉಪಸ್ಥಿತರಿದ್ದರು.

   English summary
   Demand for Ganesh Idol made of Various Metals increased said The Soak Market organiser at Karnataka Chitrakala Parishat, Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X