ಲಂಚ ಕೇಳಿದ ತಿಲಕ್ ನಗರ ಠಾಣೆ ಇನ್ಸ್‌ಪೆಕ್ಟರ್ ಅಮಾನತು
ಬೆಂಗಳೂರು, ಅಕ್ಟೋಬರ್ 05 : ವೈನ್ ಶಾಪ್ ವಿರುದ್ಧ ಕೇಸು ದಾಖಲಿಸದೇ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು ಗೊಂಡಿದ್ದಾರೆ. ಬೆಂಗಳೂರಿನ ತಿಲಕ್ ನಗರ ಠಾಣೆ ಇನ್ಸ್‌ಪೆಕ್ಟರ್ ತನ್ವೀರ್ ಸೇಠ್ ಅಮಾನತುಗೊಂಡವರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ತ್ವನೀರ್ ಸೇಠ್ ಅವರನ್ನು ಅಮಾನತು ಮಾಡಿದ್ದಾರೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆಯಂತೆ ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಇನ್ಸ್‌ಪೆಕ್ಟರ್ ತನ್ವೀರ್ ಸೇಠ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಅವುಗಳನ್ನು ಗಮನಿಸಿ ಗೃಹ ಸಚಿವರ ಗಮನಕ್ಕೆ ತರಲಾಗಿತ್ತು. ಇಲಾಖಾ ಮಟ್ಟದಲ್ಲಿ ನಡೆಸಿದ ರಹಸ್ಯ ತನಿಖೆಯಲ್ಲಿ ಅಕ್ರಮಗಳು ಸಾಬೀತಾಗಿತ್ತು. ಆದ್ದರಿಂದ, ಅಮಾನತು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ವೈನ್ ಶಾಪ್ ಮಾಲೀಕ ಸೇರಿದಂತೆ ಮೂವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದ ತನ್ವೀರ್ ಸೇಠ್, ಅಕ್ರಮವಾಗಿ ಅವರನ್ನು ಒಂದು ದಿನ ಠಾಣೆಯಲ್ಲಿಟ್ಟುಕೊಂಡಿದ್ದರು. 2 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರು ಎಲ್ಲಾ ಪೊಲೀಸರಿಗೆ 20 ಅಂಶಗಳ ವಿಚಾರವನ್ನು ತಿಳಿಸಿದ್ದರು. ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.












Click it and Unblock the Notifications