ನನಗಿಂತ ನಿರ್ಗತಿಕರು ಬೇರೆ ಯಾರಿದ್ದಾರೆ? ಫುಡ್ ಡೆಲಿವರಿ ಬಾಯ್ ಹೇಳಿದ ಆ ಒಂದು ಮಾತು ಎಲ್ಲರ ಮನಕಲುಕುತ್ತಿದೆ

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳೇ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಹಗಲು-ರಾತ್ರಿ ಎನ್ನದೆ ನಮಗೆ ಬೇಕಾದಾಗ ಮನೆಯ ಬಾಗಿಲಿಗೆ ಬಿಸಿ ಬಿಸಿ ಊಟ ತಲುಪಿಸುವ ಡೆಲಿವರಿ ಬಾಯ್ಸ್ ನಮ್ಮ ಆಪ್ತಮಿತ್ರರು. ಆದರೆ, ನಮ್ಮ ಒಂದು ಸಣ್ಣ ನಿರ್ಲಕ್ಷ್ಯ ಈ ಕಾರ್ಮಿಕರ ಬದುಕಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮಹಿ ಮಿಶ್ರಾ ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಒಂದು ಘಟನೆಯೇ ಉದಾಹರಣೆ.

ಮಧ್ಯರಾತ್ರಿ 3 ಗಂಟೆಯ ಫುಡ್ ಡೆಲಿವರಿ

ಬೆಳಗಿನ ಜಾವ 3 ಗಂಟೆಯ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿರುವ ಹೊತ್ತಿನಲ್ಲಿ ಡೆಲಿವರಿ ಬಾಯ್ ಒಬ್ಬನ ಮೊಬೈಲ್‌ಗೆ ಫುಡ್ ಆರ್ಡರ್ ಬರುತ್ತದೆ. ತಕ್ಷಣವೇ ಎಚ್ಚೆತ್ತುಕೊಂಡ ಆತ, ಚಳಿಯನ್ನೂ ಲೆಕ್ಕಿಸದೆ ರೆಸ್ಟೋರೆಂಟ್‌ಗೆ ತೆರಳಿ ಗ್ರಾಹಕರು ಆರ್ಡರ್ ಮಾಡಿದ ಆಹಾರವನ್ನ ಪಡೆದುಕೊಂಡು ಅವರು ನೀಡಿದ್ದ ವಿಳಾಸಕ್ಕೆ ಧಾವಿಸುತ್ತಾನೆ.

Delivery Boy Canceled 3 AM Order Highlights The Hardships Of Gig Workers A Touching Real Story

ಗ್ರಾಹಕರ ಮನೆ ಬಾಗಿಲಿಗೆ ತಲುಪಿದ ಆತ, ಊಟ ಸ್ವೀಕರಿಸುವಂತೆ ತಿಳಿಸಲು ಸತತವಾಗಿ ಕರೆ ಮಾಡುತ್ತಾನೆ. ಆದರೆ, ಗ್ರಾಹಕರು ಫೋನ್ ಸ್ವೀಕರಿಸುವುದಿಲ್ಲ. ನಡುರಸ್ತೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಕಾದು ಸುಸ್ತಾದ ಆತನಿಗೆ ಕೊನೆಗೂ ನಿರಾಸೆಯಾಗುತ್ತದೆ. ಗ್ರಾಹಕರು ಫೋನ್ ರಿಸೀವ್ ಮಾಡದ ಕಾರಣ ಆ ಆರ್ಡರ್ ಅನಿವಾರ್ಯವಾಗಿ ಕ್ಯಾನ್ಸಲ್ ಆಗುತ್ತದೆ.

ಕ್ಯಾನ್ಸಲ್ ಆದ ಫುಡ್ ಆರ್ಡರ್ ನಿಯಮಗಳು

ಸಾಮಾನ್ಯವಾಗಿ ಫುಡ್ ಡೆಲಿವರಿ ಕಂಪನಿಗಳಲ್ಲಿ ಒಂದು ಕಟ್ಟುನಿಟ್ಟಿನ ನಿಯಮವಿರುತ್ತದೆ. ಒಂದು ವೇಳೆ ಗ್ರಾಹಕರು ಆರ್ಡರ್ ಸ್ವೀಕರಿಸದೆ ಕ್ಯಾನ್ಸಲ್ ಆದರೆ, ಆ ಆಹಾರವನ್ನು ಕಸದ ಬುಟ್ಟಿಗೆ ಎಸೆಯಬಾರದು. ಬದಲಾಗಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಅಥವಾ ಅಗತ್ಯವಿರುವವರಿಗೆ ದಾನ ಮಾಡಬೇಕು ಎಂಬುದು ಕಂಪನಿಯ ಪಾಲಿಸಿ. ಈ ಡೆಲಿವರಿ ಬಾಯ್ ವಿಚಾರದಲ್ಲೂ ಇದೇ ನಿಯಮ ಅನ್ವಯವಾಗುತ್ತದೆ. ಆದರೆ ಆತ ಆ ಆಹಾರವನ್ನು ಬೇರೆಯವರಿಗೆ ನೀಡದೆ ತಾನೇ ತಿನ್ನಲು ಮುಂದಾಗುತ್ತಾನೆ.

ಡೆಲಿವರಿ ಕಾರ್ಮಿಕರ ಕಷ್ಟ, ಬಿಚ್ಚಿಟ್ಟ ಮಾತು

ಆಹಾರವನ್ನು ತಾನೇ ತಿನ್ನುತ್ತಿರುವಾಗ, ಆತ ನಗುತ್ತಲೇ ಹೇಳಿದ ಒಂದು ಮಾತು ನಿಜಕ್ಕೂ ಎಲ್ಲರ ಹೃದಯ ಕಲಕುವಂತಿದೆ. "ನಾನು ಶ್ರೀಮಂತನಾಗಿದ್ದರೆ, ಬೆಳಗಿನ ಜಾವ 3 ಗಂಟೆಯಲ್ಲಿ ನನ್ನ ನಿದ್ದೆ ಕೆಡಿಸಿಕೊಂಡು ಬೇರೆಯವರಿಗೆ ಆಹಾರ ತಲುಪಿಸಲು ಬರುತ್ತಿರಲಿಲ್ಲ. ನನಗಿಂತ ನಿರ್ಗತಿಕರು ಅಥವಾ ಕಷ್ಟದಲ್ಲಿರುವವರು ಬೇರೆ ಯಾರು ಇದ್ದಾರೆ?" ಎಂದು ಆತ ಪ್ರಶ್ನಿಸುತ್ತಾನೆ.

ಈ ಮಾತು ಕೇವಲ ಆತನೊಬ್ಬನದ್ದಲ್ಲ, ಬದಲಾಗಿ ತಮ್ಮ ಕುಟುಂಬದ ಹೊಟ್ಟೆ ತುಂಬಿಸಲು ನಿದ್ದೆ, ವಿಶ್ರಾಂತಿ ಲೆಕ್ಕಿಸದೆ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರ ನಿಜವಾದ ಪರಿಸ್ಥಿತಿ. ಈ ಮಾತುಗಳು ನಮ್ಮ ಕಣ್ಣು ತೆರೆಸುವಂತಿವೆ.

ಡೆಲಿವರಿ ಬಾಯ್ಸ್ ಬಗ್ಗೆ ಗೌರವವಿರಲಿ

ನಾವು ನಮ್ಮ ಅನುಕೂಲಕ್ಕಾಗಿ ಮಧ್ಯರಾತ್ರಿಯಲ್ಲಿ ಫುಡ್ ಆರ್ಡರ್ ಮಾಡುತ್ತೇವೆ. ಆದರೆ ಆ ಆರ್ಡರ್ ತಲುಪಿಸಲು ಬರುವ ವ್ಯಕ್ತಿಗಳು ತಮ್ಮ ನಿದ್ದೆ, ಆರೋಗ್ಯ ಹಾಗೂ ಕುಟುಂಬದ ಜೊತೆಗಿನ ಸಮಯವನ್ನು ತ್ಯಾಗ ಮಾಡಿರುತ್ತಾರೆ ಎಂಬುದನ್ನ ನಾವು ಮರೆಯಬಾರದು.

ಹೀಗಾಗಿ, ಆರ್ಡರ್ ಮಾಡಿದ ನಂತರ ದಯವಿಟ್ಟು ಫೋನ್ ಕರೆಗಳನ್ನ ಸ್ವೀಕರಿಸಿ. ನಿಮ್ಮ ಒಂದು ಸಣ್ಣ ಸ್ಪಂದನೆ ಆ ಕಾರ್ಮಿಕನ ಇಡೀ ರಾತ್ರಿಯ ಶ್ರಮಕ್ಕೆ ಸಾರ್ಥಕತೆ ತಂದುಕೊಡುತ್ತದೆ. ಡೆಲಿವರಿ ಮಾಡುವವರ ಕಷ್ಟಗಳನ್ನ ಅರ್ಥಮಾಡಿಕೊಳ್ಳೋಣ, ಅವರ ಶ್ರಮವನ್ನ ಗೌರವಿಸೋಣ ಎಂದು ಮಹಿ ಮಿಶ್ರಾ ತಮ್ಮ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ಇದು ಕೇವಲ ಒಂದು ಕಥೆಯಲ್ಲ, ನಮ್ಮ ಸಮಾಜದ ಮುಖವಾಡ ಕಳಚುವ ನಿಜವಾದ ಚಿತ್ರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+