ಬಿಬಿಎಂಪಿ ವಾರ್ಡ್‌ಗಳ ಪುನರ್‌ವಿಂಗಡಣೆ ಕಾರ್ಯ ಅವೈಜ್ಞಾನಿಕ: ಬಿಎನ್‌ಪಿ ದೂರು
ಬೆಂಗಳೂರು ಜೂನ್ 9: ಹಳತಾದಾದ 2011 ರ ಜನಗಣತಿಯ ಬದಲಿಗೆ 2021 ರ ಮತದಾರರ ಪಟ್ಟಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಸರಿಸಿದ್ದರೆ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳು ತಲಾ ಒಂದು ವಾರ್ಡ್‌ನಾದರೂ ಕಳೆದುಕೊಳ್ಳುತ್ತಿದ್ದವು.
ನಗರದ ವಾರ್ಡ್ ಗಳ ಅಧ್ಯಯನ ನಡೆಸಿದ್ದು, 243 ವಾರ್ಡ್ ಗಳಿಗೆ ಗಡಿ ಗುರುತಿಸುವ ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಕಾರ್ಯವನ್ನು ಅವೈಜ್ಞಾನಿಕ ಎಂದು ಬೆಂಗಳೂರು ನವನಿರ್ಮಾಣ ಪಕ್ಷವು(ಬಿಎನ್ ಪಿ) ದೂರಿದೆ.
ಪ್ರಸ್ತುತ ನಗರದಲ್ಲಿ ಒಟ್ಟು 198 ವಾರ್ಡ್ ಗಳಿವೆ. ಇದನ್ನು 243 ವಾರ್ಡ್ ಗಳಿಗೆ ವಿಸ್ತರಿಸಲು 2011 ರ ಜನಗಣತಿಯ ಆಧಾರದಲ್ಲಿ ವಾರ್ಡ್ ಗಳ ಗಡಿಗಳನ್ನು ಗುರುತಿಸುವ ಕಾರ್ಯವನ್ನು ವಾರ್ಡ್ ಪುನರ್ ವಿಂಗಡಣಾ ಸಮಿತಿಯು ವಹಿಸಿತ್ತು.
"ಕಳೆದ 10 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆಯು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಮುಖ್ಯವಾಗಿ ಬೆಂಗಳೂರು ಹೊರವಲಯದಲ್ಲಿ ಜನಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ. ಆದರೆ ನಗರದ ಕೇಂದ್ರ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗಿ ಬೆಳೆದಿಲ್ಲ. ಹೀಗಾಗಿ ವಾರ್ಡ್ ಗಳ ಸಂಖ್ಯೆಯಲ್ಲಿ ನಮಗೆ ಅಸಮತೋಲನ ಕಾಣಲಿದೆ, "ಎಂದು ಬಿಎನ್ ಪಿ ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಹೇಳಿದರು.
"ವಾರ್ಡ್ ಗಳ ಪುನರ್ ವಿಂಗಡನೆಗೆ ಚುನಾವಣೆ ಆಯೋಗ ಬಿಡುಗಡೆ ಮಾಡಿರುವ 2021 ರ ಮತದಾರರ ಪಟ್ಟಿಯನ್ನು ಏಕೆ ಬಳಸಲಿಲ್ಲ ಎಂಬುದು ಆಶ್ಚರ್ಯವಾಗುತ್ತದೆ. ವಾರ್ಡ್ ಗಳ ಮಟ್ಟದಲ್ಲಿ ಸರಿಯಾದ ಜನಸಂಖ್ಯೆ ಎಷ್ಟಿದೆ ಎಂದು ಅದರಿಂದ ತಿಳಿದುಬರುತ್ತಿತ್ತು,'' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತದಾರರ ಪಟ್ಟಿ ಅನುಸರಿಸಲು ಒತ್ತಾಯ
ಪ್ರಸ್ತುತ ಯಶವಂತಪುರ, ಯಲಹಂಕ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಪ್ರತಿ ವಾರ್ಡ್ ಅತಿ ಹೆಚ್ಚು ಅಂದರೆ ಸುಮಾರು 95,000 ಮತದಾರರನ್ನು ಹೊಂದಿದೆ. ಬ್ಯಾಟರಾಯನಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳು ಕೂಡ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಶಿವಾಜಿನಗರ, ರಾಜಾಜಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ಪ್ರತಿ ವಾರ್ಡ್ 30,000 ಕ್ಕಿಂತ ಕಡಿಮೆ ಮತದಾರರನ್ನು ಹೊಂದಿದೆ. ಇತ್ತೀಚಿನ ಮತದಾರರ ಪಟ್ಟಿಯನ್ನು ಅನುಸರಿಸಿ ವಾರ್ಡ್‌ಗಳನ್ನು ಪುನರ್ ವಿಂಗಡನೆ ಮಾಡುವುದು ಹೆಚ್ಚು ಸೂಕ್ತ ಎಂದು ಬಿಎನ್ ಪಿ ಪಕ್ಷ ಒತ್ತಾಯಿಸಿದೆ.

ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಹೆಚ್ಚು ವಾರ್ಡ್
ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 5 ವಾರ್ಡ್‌ಗಳು ಇತ್ತು. ಪುನರ್ ವಿಂಗಡಣೆ ನಂತರ ವಾರ್ಡ್‌ಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಅದೇ ರೀತಿ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 6 ವಾರ್ಡ್‌ಗಳು ಇದ್ದಿದ್ದು, ಈಗ 14 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 4 ವಾರ್ಡ್‌ಗಳು ಇದ್ದಿದ್ದು, ಈಗ 11 ವಾರ್ಡ್‌ಗಳಿಗೆ ಏರಿಕೆಯಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 4 ವಾರ್ಡ್‌ಗಳು ಇದ್ದಿದ್ದು, ಈಗ 13 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 4 ವಾರ್ಡ್‌ಗಳು ಇದ್ದಿದ್ದು, ಈಗ 12 ವಾರ್ಡ್‌ಗಳಿಗೆ ಏರಿಕೆಯಾಗಿದೆ.

ಯಥಾಸ್ಥಿತಿಯಲ್ಲಿ ಉಳಿದ ಕೆಲವು ಕ್ಷೇತ್ರಗಳು
ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ಜಯನಗರ, ಹೆಬ್ಬಾಳ, ಪುಲಕೇಶಿನಗರ, ರಾಜಾಜಿನಗರ ಮತ್ತು ಶಾಂತಿನಗರ ವಿಧಾನಸಭೆ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಯಥಾಸ್ಥಿತಿಯಲ್ಲಿ ಉಳಿಯಲಿವೆ. ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಆರಕ್ಕೆ ಇಳಿಯಲಿದೆ. ಯಲಹಂಕ, ವಿಜಯನಗರ, ಪದ್ಮನಾಭನಗರ ಮತ್ತು ಬಸವನಗುಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಒಂದು ವಾರ್ಡ್ ಸೇರ್ಪಡೆಯಾಗಲಿದೆ.

ಜನಸಂಖ್ಯೆ 34,750 ಇರುವಂತೆ ವಾರ್ಡ್ ವಿಂಗಡಣೆ
"2011ರ ಜನಗಣತಿಯ ಆಧಾರದಲ್ಲಿ ವಾರ್ಡ್ ಪುನರ್ ವಿಂಗಡಣೆ ಕಾರ್ಯ ಕೈಗೊಳ್ಳಲಾಗಿದೆ. ಪ್ರತಿಯೊಂದು ವಾರ್ಡ್ ನಲ್ಲಿ ಜನಸಂಖ್ಯೆ ಸುಮಾರು 34,750 ಇರುವಂತೆ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಲಾಗಿದೆ ಎಂದು ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಕಾರ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ











Click it and Unblock the Notifications