ದೆಹಲಿ ಸಾಕಾಯ್ತು ಬೆಂಗಳೂರಿಗೆ ಬರ್ತೀನಿ ಎಂದ ನಾರ್ಥಿ; ಬೇಡಪ್ಪ ಬೇಡ ಈ ನಗರ ತುಂಬಿದೆ ಎಂದ ಕನ್ನಡಿಗರು!

ಬೆಂಗಳೂರು: ಬೆಂಗಳೂರಿಗೆ ಬರುವ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಉತ್ತರ ಭಾರತ ಹಾಗೂ ದೆಹಲಿಯಿಂದ ಬೆಂಗಳೂರು ನಗರಕ್ಕೆ ವಲಸೆ ಬರುತ್ತಿರುವ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ನಾರ್ಥಿಯೊಬ್ಬರು ದೆಹಲಿಯಲ್ಲಿ ತುಂಬಾನೇ ವಾಯುಮಾಲಿನ್ಯ; ಬೆಂಗಳೂರಿನಲ್ಲಿ ಗಾಳಿ ಚೆನ್ನಾಗಿದೆ ಬೆಂಗಳೂರಿಗೆ ಬರ್ತೀನಿ ಅಂತ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡಿಗರು ಈ ವಿಚಾರವಾಗಿ ತಿರುಗೇಟು ನೀಡಿದ್ದಾರೆ. ಬೆಂಗಳೂರು ತುಂಬಿದೆ, ದಯವಿಟ್ಟು ಬೆಂಗಳೂರಿಗೆ ಬರಬೇಡಿ ಅಂತ ಕಾಮೆಂಟ್ ಮಾಡಿದ್ದಾರೆ. ನಾರ್ಥಿ ವ್ಯಕ್ತಿ ಬೆಂಗಳೂರಿನ ಬಗ್ಗೆ ಹೇಳಿದ್ದೇನು, ಕನ್ನಡಿಗರು ಈ ವಿಚಾರಕ್ಕೆ ಹೇಗೆ ತಿರುಗೇಟು ನೀಡಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ನಾರ್ಥಿ Sikandar (@VinamreKasanaa) ಎನ್ನುವವರು, ನಾನು ಕನ್ನಡ ಕಲಿತು ಬೆಂಗಳೂರಿಗೆ ಸ್ಥಳಾಂತರವಾಗಲು ಸಂತೋಷಪಡುತ್ತೇನೆ. ಹೊಗೆಯಿಂದ ತುಂಬಿರುವ ದೆಹಲಿಯನ್ನು ಬಿಟ್ಟು ಬರಲು ಇದೊಂದು ಸಣ್ಣ ಅವಕಾಶವಷ್ಟೇ. ಭಾರತದಲ್ಲೇ ಅತ್ಯುತ್ತಮ ಗಾಳಿ ಗುಣಮಟ್ಟವನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಸಹ ಒಂದಾಗಿದೆ.

Delhi Pollution North Indian Plans to Move to Bengaluru Kannadigas Say No More Space Please Don t Come

ಬೆಂಗಳೂರಿನಲ್ಲಿ ಜನರು ತುಂಬಾ ಸ್ನೇಹಪರರು. ಹೊಸ ಆವಿಷ್ಕಾರಗಳಿಗೆ ಪೂರಕವಾದ ಹವಾಮಾನವೂ ಇಲ್ಲಿದೆ. ಆರೋಗ್ಯಕರ ಜೀವನ ಬಯಸುವವರು ಬೆಂಗಳೂರಿಗೆ ಬರುವುದೇ ಉತ್ತಮ ಆಯ್ಕೆ ಆಗಿದೆ. ಇಲ್ಲದಿದ್ದರೆ, ದೆಹಲಿಯ ಕಲುಷಿತ ಗಾಳಿಯಿಂದಾಗಿ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದೂ ಸಿಕಂದರ್ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

Delhi Pollution: ಬೆಂಗಳೂರು ತುಂಬಿದೆ ಬರಬೇಡಿ ಎಂದ ಕನ್ನಡಿಗರು!

ಇನ್ನು ಸಿಖಂದರ್ ಅವರ ಟ್ವೀಟ್‌ಗೆ ಕನ್ನಡಿಗರು ಗರಂ ಆಗಿದ್ದಾರೆ. ಬೆಂಗಳೂರು ವಲಸಿಗರಿಂದ ತುಂಬಿದೆ ದಯವಿಟ್ಟು ಬೆಂಗಳೂರಿಗೆ ಬರಬೇಡಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಮಲ್ಲ ಎನ್ನುವವರು ಬೆಂಗಳೂರು ತುಂಬಿದೆ. ಮೂಲಸೌಕರ್ಯಗಳು ಕುಸಿಯುತ್ತಿವೆ, ನೀರಿಲ್ಲ, ಸ್ಥಳವಿಲ್ಲ, ಗಂಟೆಗಟ್ಟಲೆ ಸಂಚಾರ, ಭಾಷಾ ಸಮಸ್ಯೆ, ಅತಿಯಾದ ವಲಸೆ ಹಾಗೂ ಸಾಮೂಹಿಕ ವಲಸೆ ಎಲ್ಲೆಡೆ ಜನರು ಎಂದಿದ್ದಾರೆ.

ದೆಹಲಿ ಒಂದು ಗ್ಯಾಸ್ ಚೇಂಬರ್, ಆದರೆ ಬೆಂಗಳೂರಿನಲ್ಲಿ ಅಸಮರ್ಪಕ ರಸ್ತೆ, ಮೂಲಸೌಕರ್ಯ, ನೀರಿನ ಸಮಸ್ಯೆ, ಕೆಲವು ಪ್ರದೇಶಗಳಲ್ಲಿ ನೀರು ನಿಲ್ಲುವುದು ಮತ್ತು ಭಾರೀ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಹೌದು, ಇಲ್ಲಿ ನೆಮ್ಮದಿ ಮತ್ತು ವಿಶ್ರಾಂತಿ ನೀಡುವ ಕೆಲವು ಸುಂದರ ಸ್ಥಳಗಳಿವೆ. ಇಲ್ಲಿನ ಜನರ ಸಂಸ್ಕೃತಿಯೂ ದೆಹಲಿ ಎನ್‌ಸಿಆರ್‌ನಲ್ಲಿರುವಂತೆ ಆಕ್ರಮಣಕಾರಿ ಮತ್ತು ಸ್ವಾರ್ಥಪರವಾಗಿರದೆ, ಹೆಚ್ಚು ಸ್ನೇಹಪರವಾಗಿದೆ. ಆದರೆ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ರಾಜಕೀಯ ಪಕ್ಷವೂ ಸಾಕಷ್ಟು ಹಣ ಹೂಡಿಕೆ ಮಾಡುತ್ತಿಲ್ಲ.

ಇಲ್ಲಿ ರಸ್ತೆ ತೆರಿಗೆ ತುಂಬಾ ಹೆಚ್ಚಿದೆ. ಆದರೆ ರಸ್ತೆಗಳ ಸ್ಥಿತಿ ಮಾತ್ರ ತೀರಾ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳಿವೆ. ರಾಜ್ಯದ ಗುರುತಿನ ರಾಜಕಾರಣವೂ ದಕ್ಷಿಣ ಕರ್ನಾಟಕದ ಜಿಲ್ಲೆಗಳ ಸುತ್ತಲೇ ಹೆಚ್ಚು ಕೇಂದ್ರೀಕೃತವಾಗಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ನೀವು ನಗರದ ಕೇಂದ್ರ ಭಾಗದಲ್ಲಿ (CBD) ವಾಸಿಸುತ್ತಿದ್ದರೆ, ಬೆಂಗಳೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಬಹುದು. ಆದರೆ ನಗರದ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದರೆ, ಬೆಂಗಳೂರಿನ ಬಗ್ಗೆ ಇರುವ ಆ ಒಳ್ಳೆಯ ಅಭಿಪ್ರಾಯ ಹೆಚ್ಚು ಕಾಲ ಉಳಿಯುವುದಿಲ್ಲ. ಹವಾಮಾನ ಮತ್ತು ಉಸಿರಾಡುವ ಗಾಳಿಯ ಕಾರಣದಿಂದಾಗಿ, ದೆಹಲಿ NCR ಗಿಂತ ಇಷ್ಟೆಲ್ಲಾ ಹೇಳಬೇಕಾಯಿತು ಅಂತಲೂ ಕೆಲವರು ಹೇಳಿದ್ದಾರೆ.

ಬೆಂಗಳೂರು ಒಂದು ಉತ್ತಮ ನಗರ, ಚಳಿಗಾಲದಲ್ಲಿ ಸರಾಸರಿ 100+ AQI ಮತ್ತು ತೀವ್ರ ನೀರಿನ ಕೊರತೆ ಇದೆ. ನನ್ನ ಸ್ನೇಹಿತರೊಬ್ಬರು ಮಾಸಿಕ 30,000+ ಬಾಡಿಗೆ ಪಾವತಿಸುವಾಗ ಸಂಕಷ್ಟ ಅನುಭವಿಸಿದ್ದರೂ ಎಂದು ಕೆಲವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+