ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ರಿಯಲ್ ಎಸ್ಟೇಟ್‌ ಯೋಜನೆಗೆ ತಡೆ ಹಾಕಿದ ಕೋವಿಡ್!

|
Google Oneindia Kannada News

ಬೆಂಗಳೂರು, ನವೆಂಬರ್ 09 : ಕೋವಿಡ್ ಪರಿಸ್ಥಿತಿ ಎಲ್ಲಾ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿದೆ. ಬೆಂಗಳೂರು ನಗರದಲ್ಲಿ ಹೊಸ ರಿಯಲ್ ಎಸ್ಟೇಟ್ ಯೋಜನೆಗಳ ನೋಂದಣಿಯಲ್ಲಿ ಭಾರಿ ಇಳಿಕೆಯಾಗಿದೆ. ಹೊಸದಾಗಿ ಕಟ್ಟಿದ ಅಪಾರ್ಟ್‌ಮೆಂಟ್ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ.

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ವರದಿಯಂತೆ 2020ರ ಅಕ್ಟೋಬರ್ 30ರ ತನಕ ಹೊಸ ಯೋಜನೆ ನಿರ್ಮಾಣಕ್ಕಾಗಿ ಕೇವಲ 537 ಅರ್ಜಿ ಬಂದಿವೆ. 2019ರಲ್ಲಿ 850, 2018ರಲ್ಲಿ 1063 ಅರ್ಜಿಗಳು ಬಂದಿದ್ದವು.

 ರಿಯಲ್ ಎಸ್ಟೇಟ್‌ಗೆ ಚೇತರಿಕೆ ನೀಡಲು ಎಸ್‌ಬಿಐ ಆನ್‌ಲೈನ್ ಹೋಮ್ ಕಾರ್ನಿವಲ್ ರಿಯಲ್ ಎಸ್ಟೇಟ್‌ಗೆ ಚೇತರಿಕೆ ನೀಡಲು ಎಸ್‌ಬಿಐ ಆನ್‌ಲೈನ್ ಹೋಮ್ ಕಾರ್ನಿವಲ್

ಹೊಸದಾಗಿ ಕಟ್ಟಿದ ಅಪಾರ್ಟ್‌ಮೆಂಟ್‌ಗಳನ್ನು ಜನರು ಖರೀದಿ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ, ನೂತನ ಯೋಜನೆಗಳನ್ನು ಆರಂಭಿಸಲು ಸಹ ಬಿಲ್ಡರ್‌ಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ಕಾರ್ಮಿಕರ ಕೊರತೆ ಇದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್‌ಡಿಐಗೆ ಅನುಮತಿ ನೀಡಲು ಚಿಂತನೆರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್‌ಡಿಐಗೆ ಅನುಮತಿ ನೀಡಲು ಚಿಂತನೆ

Decrease In New Real Estate Projects

ಈಗ ಪೂರ್ಣಗೊಂಡಿರುವ ಯೋಜನೆಗಳು ಮಾರಾಟವಾದ ಬಳಿಕ ಹೊಸ ಯೋಜನೆಗಳನ್ನು ಆರಂಭಿಸಲು ಬಿಲ್ಡರ್‌ಗಳು ಬಯಸುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿಯೇ ಹೊಸ ನಿರ್ಮಾಣ ಚಟುವಟಿಕೆ ಆರಂಭವಾಗುವ ನಿರೀಕ್ಷೆ ಇದೆ.

ಕೋವಿಡ್-19 ಬಳಿಕ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಬೂಮ್! ಕೋವಿಡ್-19 ಬಳಿಕ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಬೂಮ್!

ಅಪಾರ್ಟ್‌ಮೆಂಟ್ ಮಾರಾಟವಾಗದೆ ಇರುವುದರಿಂದ ಬ್ಯಾಂಕ್, ಖಾಸಗಿ ವ್ಯಕ್ತಿಗಳ ಕೈಯಲ್ಲಿ ಸಾಲ ಪಡೆದು ಹೂಡಿಕೆ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ಣಗೊಂಡಿರುವ ಯೋಜನೆ ಮಾರಾಟವಾದರೆ ಹೊಸ ಯೋಜನೆಗಳತ್ತ ಅವರು ಗಮನಹರಿಸಲಿದ್ದಾರೆ.

2017ರಿಂದ 2019ರ ತನಕ ರಿಯಲ್ ಎಸ್ಟೇಟ್ ಉದ್ಯಮ ಉತ್ತುಂಗದಲ್ಲಿತ್ತು. ಹಲವಾರು ಹೊಸ ಯೋಜನೆಗಳು ಬೆಂಗಳೂರು ನಗರದಲ್ಲಿ ಆರಂಭವಾದವು. ಆದರೆ, ಕೋವಿಡ್ ಪರಿಸ್ಥಿತಿ ಕಾರಣ ಉದ್ಯಮ ಒಂದು ವರ್ಷ ಹಿಂದಕ್ಕೆ ಹೋಗಿದೆ ಎಂದು ಅಂದಾಜಿಸಲಾಗುತ್ತಿದೆ.

Recommended Video

ಚುನಾವಣೆ ಸೋಲೇ ವಿಚ್ಛೇದನಕ್ಕೆ ಕಾರಣನಾ? | Melaina to divorce Donald Trump? | Oneindia Kannada

ಲಾಕ್ ಡೌನ್ ಘೋಷಣೆಯಾದ ಬಳಿಕ ಹಲವಾರು ಜನರು ಊರಿಗೆ ಮರಳಿದದರು. ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಹೋಗಿದ್ದರಿಂದ ನಿರ್ಮಾಣ ಚಟುವಟಿಕೆ ಸಹ ಸ್ಥಗಿತವಾಯಿತು. 2021ರಲ್ಲಿ ಕ್ಷೇತ್ರ ಚೇತರಿಕೆ ಕಾಣುವ ವಿಶ್ವಾಸದಲ್ಲಿ ಬಿಲ್ಡರ್‌ಗಳು ಇದ್ದಾರೆ.

English summary
Karnataka Real Estate Regulatory Authority data said that 537 new applications submit for the new real estate projects in Bengaluru city. Developers busy in unsold complete projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X