11 ಆರ್‌ಸಿಬಿ ಅಭಿಮಾನಿಗಳ ಸಾವು: ಹೆಸರಿನಲ್ಲಿ ಮಾತ್ರ ಉಪ್ಪು: ಗುಣದಲ್ಲಿ ಸಕ್ಕರೆ, ಆರ್‌ಸಿಬಿ ಆಟಗಾರ ಹೇಳಿದ್ದೇನು ?!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತದ ಬಗ್ಗೆ ವಿದೇಶಿ ಕ್ರಿಕೆಟ್ ಪ್ಲೇಯರ್ ಹಾಗೂ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರು ಟ್ವೀಟ್ ಮಾಡಿದ್ದು. ಈ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಐಪಿಎಲ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಬೆಂಗಳೂರು ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿತ್ತು. ಇದರಲ್ಲಿ ಪ್ರಾರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರ ಪ್ರದರ್ಶನವೂ ಅಮೋಘವಾಗಿತ್ತು. ಇದೀಗ ಬೇರೆ ಯಾವುದೇ ಆರ್‌ಸಿಬಿ ಆಟಗಾರರೂ ಮಾಡದ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಈ ರೀತಿಯ ಪೋಸ್ಟ್‌ವೊಂದನ್ನು ಖುದ್ದು ವಿರಾಟ್ ಕೊಹ್ಲಿ ಅವರು ಸಹ ಮಾಡಿಲ್ಲ ಅಂತಲೇ ಹೇಳಲಾಗುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರ ಭಾಗದಲ್ಲಿ ಸಂಭಿವಿಸಿದ ಕಾಲ್ತುಳಿತದಲ್ಲಿ ಬರೋಬ್ಬರಿ 11 ಜನ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ದೇಶ - ವಿದೇಶದ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. ಸುದೀರ್ಘ 18 ವರ್ಷಗಳ ನಂತರ ನಡೆದ ಈ ಸಂಭ್ರಮಾಚರಣೆಯಲ್ಲಿ 11 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ವಿರಾಟ್ ಕೊಹ್ಲಿ ಅವರು ಒಂದೇ ಸಾಲಿನ ಪೋಸ್ಟ್ ಮಾಡಿದ್ದು. ಈ ದುರಂತಕ್ಕೆ ನನ್ನ ಹೃದಯ ಒಡೆದಿದೆ ಎಂದಷ್ಟೇ ಹೇಳಿದ್ದರು. ಅಲ್ಲದೇ ವಿರಾಟ್ ಕೊಹ್ಲಿ ಅವರು ಸಾಂತ್ವನ ಹೇಳಲಿಲ್ಲ. ಕೋಟ್ಯಾಂತರ ರೂಪಾಯಿಯ ಒಡೆಯ ಪರಿಹಾರವನ್ನು ಘೋಷಿಸಬಹುದಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ ವಿರಾಟ್ ಕೊಹ್ಲಿ ಅವರು ಲಂಡನ್ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಸುದ್ದಿ ಸಹ ಬರುತ್ತಿವೆ. ಈ ನಡುವೆ ಸಾಲ್ಟ್ ಮಾತುಗಳು ವೈರಲ್ ಆಗುತ್ತಿವೆ.

ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲ್ಟ್ ಅವರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಘಟನೆ ಅತ್ಯಂತ ದುರಂತ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾವು ನಿಮ್ಮೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದೆವು. ಇಂದು ನಾವು ನಿಮ್ಮ ದುಃಖದಲ್ಲೂ ಪಾಲುದಾರರು. ಪ್ರೀತಿಪಾತ್ರರನ್ನು ಕಳೆದುಕೊಂಡವರು ಹಾಗೂ ಗಾಯಗೊಂಡಿರುವ ಎಲ್ಲರಿಗೂ ನನ್ನ ಹೃದಯ ಮಿಡಿಯುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.












Click it and Unblock the Notifications