ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ 2 ಎಫ್‌ಐಆರ್, ಏನಿದು ಪ್ರಕರಣ?

|
Google Oneindia Kannada News

Recommended Video

BS Yeddyurappa gets temporary relief in land denotification case | Oneindia Kannada

ಬೆಂಗಳೂರು, ಅ.18 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಎರಡು ಎಫ್‌ಐಆರ್ ದಾಖಲು ಮಾಡಿದೆ. ನಿಯಮ ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಲಾಗಿದೆ.

 ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ

ಡಾ.ಡಿ.ಅಯ್ಯಪ್ಪ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಜೂನ್‌ನಲ್ಲಿ ನೀಡಿದ್ದ ದೂರಿನ ಅನ್ವಯ ಎರಡು ಎಫ್‌ಐಆರ್ ದಾಖಲಾಗಿದೆ. 2009 ರಿಂದ 2012ರ ನಡುವೆ ಅಕ್ರಮ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಇಂದು ವಿಚಾರಣೆಗೆ ಹಾಜರಾಗಬೇಕು ಎಂದು ಯಡಿಯೂರಪ್ಪಗೆ ಸಮನ್ಸ್ ನೀಡಲಾಗಿದೆ.

De-notification cases : ACB registered two FIRs against B.S. Yeddyurappa

ಈ ಎರಡು ಪ್ರಕರಣಗಳಲ್ಲಿ ಯಡಿಯೂರಪ್ಪ ಮತ್ತು ಎಂಟು ಅಧಿಕಾರಿಗಳು ಆರೋಪಿಗಳಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ ಕೈಬಿಡಲು ತೀರ್ಮಾನಿಸಲಾಗಿತ್ತು. ಅಲ್ಲಿನ ಜಮೀನನ್ನು ಡಿನೋಟಿಫೈ ಮಾಡಲಾಗಿತ್ತು. ಹಳೆಯ ಪ್ರಕರಣಕ್ಕೆ ಮರುಜೀವ ನೀಡಿ ಹೊಸ ಎಫ್‌ಐಆರ್ ದಾಖಲು ಮಾಡಲಾಗಿದೆ.

ಯಡಿಯೂರಪ್ಪಗೆ ಹಿನ್ನಡೆ, ಡಿನೋಟಿಫಿಕೇಷನ್ ಕೇಸ್ ಮತ್ತೆ ವಿಚಾರಣೆಗೆಯಡಿಯೂರಪ್ಪಗೆ ಹಿನ್ನಡೆ, ಡಿನೋಟಿಫಿಕೇಷನ್ ಕೇಸ್ ಮತ್ತೆ ವಿಚಾರಣೆಗೆ

ಏನಿದು ಪ್ರಕರಣ? : ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ನಿಯಮ ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂಬುದು ಆರೋಪ.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿ, ಅವಲಹಳ್ಳಿ ಗ್ರಾಮದ ಸರ್ವೆ ನಂಬರ್ 109/1ರಲ್ಲಿನ 3ಎಕರೆ ಜಮೀನನ್ನು ಡಿನೋಟಿಕೇಷನ್ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ 20ದೂರುಗಳು ದಾಖಲಾಗಿವೆ. ಇವುಗಳಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದು, 18 ದೂರುಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಯಡಿಯೂರಪ್ಪಗೆ ಮತ್ತೆ 5 ಡಿನೋಟಿಫಿಕೇಷನ್ ಕಂಟಕಯಡಿಯೂರಪ್ಪಗೆ ಮತ್ತೆ 5 ಡಿನೋಟಿಫಿಕೇಷನ್ ಕಂಟಕ

ಪ್ರಕರಣದಲ್ಲಿ ಆರೋಪಿಗಳು : ಈ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ, ಬಿಡಿಎ ಭೂ ಸ್ವಾಧೀನ ವಿಭಾಗದ ಉಪ ಆಯುಕ್ತ ಗೌರಿ ಶಂಕರ, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಪ್ರೇಮಚಂದ್ರ, ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಬಸವರಾಜು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಸುಭೀರ್ ಹರಿಸಿಂಗ್ ಆರೋಪಿಗಳು.

English summary
Karnataka Anti Corruption Bureau (ACB) registered two FIRs against B.S. Yeddyurappa in connection with land de-notification cases. B.S. Yeddyurappa chief ministerial candidate of BJP for 2018 assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X