ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಲೇಬೇಕು: ಪರಮೇಶ್ವರ್

By Nayana
|
Google Oneindia Kannada News

ಬೆಂಗಳೂರು, ಜು.21: ವಿಧಾನಸಭಾ ಚುನಾವಣೆಯಲ್ಲಾದ ಲೋಪಗಳನ್ನು ಸರಿದೂಗಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲರೂ ಸನ್ನದ್ಧರಾಗಿ, ಕನಿಷ್ಠ 20 ಸ್ಥಾನಗಳನ್ನು ಕರ್ನಾಟಕದಿಂದ ಗೆಲ್ಲಿಸಿಕೊಡುವ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ‌ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ನೀಡಿದರು.

ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯಲ್ಲಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಳ್ಳೆಯ ಆಡಳಿತ, ಕಾರ್ಯಕ್ರಮ ಎಲ್ಲ‌ಕೊಟ್ಟಿದ್ದರೂ ಎಲ್ಲೋ ಒಂದು ಕಡೆ ನಾವು ಎಡವಿದ್ದೇವಡ. ನಮ್ಮ ಹಿಂದಿನ ಸರಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ‌ ಕೂಡ ಕೇಳಿಬಂದಿರಲಿಲ್ಲ. ಉತ್ತಮ ಆಡಳಿತವನ್ನು ನೀಡಿದ್ದೆವು. 125 ಸ್ಥಾನ ಗೆದ್ದೇ ಗಡಲ್ಲುತ್ತೇವೆ ಎಂಬ ವಿಶ್ವಾಸವಿತ್ತು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಸಿದ್ದರಾಮಯ್ಯ ಸ್ಪಷ್ಟನೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಸಿದ್ದರಾಮಯ್ಯ ಸ್ಪಷ್ಟನೆ

ಈಬಾರಿ ಆ ತಪ್ಪುಗಳು ಮರುಕಳಿಸಬಾರದು. ನಮ್ಮ ಯುವನಾಯಕ ರಾಹುಲ್‌ಗಾಂಧಿ ಅವರ ಮೇಲೆ ಇಡೀ ದೇಶದ ಜವಾಬ್ಧಾರಿ ಬಿದ್ದಿದೆ. ನೆನ್ನೆ ಸಂಸತ್‌ನಲ್ಲಿ ಅವರ ಮಾತುಗಳು ಹೆಚ್ಚು ಪ್ರಸ್ತುತವಾಗಿತ್ತು.‌ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಇವರ ಆಡಳಿತ ನಮ್ಮೆಲ್ಲರಿಗೂ ಬೇಕು ಎಂದರು.

DCM Parameshwar says Cong should win at least 20 constituencies in the state

ಕಳೆದ ವಿಧಾನಸಭಾ ಚುನಾವಣೆಯಲ್ಲಿ‌ ಮೊದಲ ಬಾರಿಗೆ ಬೂತ್ ಮಟ್ಟದ ಸಮಿತಿ ರಚಿಸಿದ್ದೆವು. ಈ ಬಾರಿ ಈ‌ಸಮಿತಿಗಳನ್ನು ಇನ್ನಷ್ಟು ಬಲಿಷ್ಠವಾಗಿ ಬಳಸಿಕೊಳ್ಳಬೇಕು. ಕಳೆದ ಎಂಟು ವರ್ಷದಿಂದ ಕೆಪಿಸಿಸಿ ಅಧ್ಯಕ್ಷನಾಗಿ ಸಾಕಷ್ಟು ಏಳು ಬೀಳು ಕಂಡು, ಪಕ್ಷದಲ್ಲಿ ಸಮತೋಲನ ಕಾಯ್ದುಕೊಂಡಿದ್ದೇನೆ.

ಈಗ ಹೊಸ ನಾಯಕತ್ವ ಬಂದಿದೆ. ಇಬ್ಬರೂ ಯುವ ನಾಯಕರೇ ಪಕ್ಷದ ಜವಾಬ್ಧಾರಿ ವಹಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ರಾಜ್ಯಸ ಚಿತ್ರಣ ಗೊತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ‌ ನಮ್ಮ‌ ನಿರೀಕ್ಷೆಯಂತೆ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.‌ಈ ಚುನಾವಣೆಯಲ್ಲಿ ಜಯ ಗಳಿಸುವ‌ ಮೂಲಕ‌ ಪಕ್ಷದ ಅಸ್ತಿತ್ವವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಕರೆ ನೀಡಿದರು.

ನೂತನ ಅಧ್ಯಕ್ಷರು ಹೊಸ ಸಮಿತಿಗಳನ್ನು ರಚಿಸುವ ಮೂಲಕ ಎಲ್ಲರಿಗೂ ಕೆಲಸ ಕಾರ್ಯಗಳನ್ನು ಹಂಚಬೇಕು. ಕಾಂಗ್ರೆಸ್‌ನ ಪ್ರತಿ ಕಾರ್ಯಕರ್ತನಿಗೂ ಪಕ್ಷದಲ್ಲಿ ಸ್ಥಾನ ದೊರಕುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪಕ್ಷಕ್ಕಾಗಿ ದುಡಿಯಬೇಕು ಎಂದು ಹೇಳಿದರು.

English summary
Depity chief minister Dr.G. Parameshwar said that Congress should win at least 20 constituencies in the state in upcoming parliament elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X