850 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಡಾನ್ ದಾವೂದ್ ಇಬ್ರಾಹಿಂ ಉಡೀಸ್... India vs Pakistan
ಭಾರತೀಯ ಸೇನೆ ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಭಾರತ ಮಾತೆಯ ಕಿರೀಟ ಕಾಶ್ಮೀರದ ಮೇಲೆ ದಾಳಿ ಮಾಡಿದ್ದ ಪಾಪಿ ಪಾಕಿಸ್ತಾನದ ಉಗ್ರರ ರುಂಡ ಚಂಡಾಡಿದೆ. ಇದೇ ಸಮಯದಲ್ಲಿ ಭಾರತ & ಪಾಕಿಸ್ತಾನ ನಡುವೆ ಘೋರ ಯುದ್ಧ ಆರಂಭವಾಗುವ ಭಯ ಕೂಡ ಆವರಿಸಿದೆ. ಹೀಗಿದ್ದಾಗಲೇ, 850 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಡಾನ್ ದಾವೂದ್ ಇಬ್ರಾಹಿಂ ಉಡೀಸ್...
ಭಾರತೀಯ ಸೇನೆ ಇಂದು ತಡರಾತ್ರಿ ಪಾಕಿಸ್ತಾನ ನೆಲವನ್ನು ಪೀಸ್, ಪೀಸ್ ಮಾಡಿ ಹಾಕಿದೆ. ಪಾಕಿಸ್ತಾನ ಉಗ್ರರ ಕಾರ್ಖಾನೆ ಆಗಿ ಪದೇ ಪದೇ ಅಲ್ಲಿಂದಲೇ ಉಗ್ರರು ನುಸುಳಿ ಬರ್ತಾ ಇದ್ದಾರೆ. ಈಗಲೂ ಪಾಕಿಸ್ತಾನದ ಮೂಲಕ ನುಗ್ಗಿ ಬಂದಿದ್ದ ಉಗ್ರರು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ದಾಳಿ ನಡೆಸಿ 26 ಜನರ ಕೊಲೆ ಮಾಡಿದ್ದರು. ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆಯಲ್ಲಿ ಭಾರತ ಸೇನೆ ಇಂದು ಸೇಡು ತೀರಿಸಿಕೊಂಡಿದೆ...

ಡಾನ್ ದಾವೂದ್ ಇಬ್ರಾಹಿಂ ಉಡೀಸ್...
ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ನಟೋರಿಯಸ್ ಡಾನ್, ಜಾಗತಿಕ ಮಟ್ಟದಲ್ಲಿ ಹಲವು ಕೃತ್ಯ ಎಸಗಿರುವ ಆರೋಪ ಹೊಂದಿರುವ ಡಾನ್ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಸರ್ಕಾರ ಜಾಗ ಕೊಟ್ಟು ಆಶ್ರಯ ನೀಡಿದೆ ಎಂಬ ಆರೋಪ ಇತ್ತು. ಭಾರತ ಕೂಡ ಡಾನ್ ದಾವೂದ್ ಇಬ್ರಾಹಿಂ ವಿಚಾರವಾಗಿ ಪಾಕಿಸ್ತಾನಕ್ಕೆ ಹಲವು ಬಾರಿ ವಾರ್ನಿಂಗ್ ಕೂಡ ನೀಡುತ್ತಾ ಬಂದಿದೆ. ಹೀಗಿದ್ದಾಗಲೇ, 850 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಡಾನ್ ದಾವೂದ್ ಇಬ್ರಾಹಿಂ ಉಡೀಸ್...
24 ದಾಳಿ ನಡೆಸಿ ಪಾಪಿ ಪಾಕಿಸ್ತಾನವನ್ನ ಇದೀಗ ಭಾರತೀಯ ಸೇನೆ ಉಡೀಸ್ ಮಾಡಿದೆ, ಈ ಮೂಲಕ 70ಕ್ಕೂ ಹೆಚ್ಚು ಉಗ್ರರು ಉಡೀಸ್ ಆಗಿದ್ದಾರೆ ಎನ್ನಲಾಗಿದೆ. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ ಒಟ್ಟು 24 ಪ್ರದೇಶಗಳ ಮೇಲೆ ಈ ರೀತಿ ಭಾರಿ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿ ಉಗ್ರರ ಬಿಡಾರಗಳನ್ನ ಉಡೀಸ್ ಮಾಡಿಬಿಟ್ಟಿದೆ ಭಾರತೀಯ ಸೇನೆ. ಪದೇ, ಪದೇ ಭಾರತದ ಒಳಗೆ ನುಸುಳಿ ಬರುತ್ತಿದ್ದ ಉಗ್ರರ ಜಾಗವನ್ನೇ ಗುರುತು ಮಾಡಿಕೊಂಡಿದ್ದ ಭಾರತೀಯ ಸೇನೆ ಅಧಿಕಾರಿಗಳು, ಪಕ್ಕಾ ಪ್ಲಾನ್ ಮಾಡಿ ಇದೀಗ ದಾಳಿ ನಡೆಸಿದ್ದಾರೆ. ಹಾಗೇ ಈ ದಾಳಿ ನಂತರ ಪಾಕಿಸ್ತಾನ ನಲುಗಿ ಹೋಗಿದ್ದು, ಪಾಕಿಸ್ತಾನದ ಕೋಟಿ ಕೋಟಿ ಜನ ಈಗ ಯುದ್ಧ ಭಯದಲ್ಲಿ ಇದ್ದಾರೆ. ಹಾಗೇ ಡಾನ್ ದಾವೂದ್ ಇಬ್ರಾಹಿಂ ಕಥೆ ಏನಾಯ್ತು ಅಂದ್ರೆ...
ಡಾನ್ ದಾವೂದ್ ಇಬ್ರಾಹಿಂ ಕಥೆ...
70ಕ್ಕೂ ಹೆಚ್ಚು ಉಗ್ರರು ಪಾಕಿಸ್ತಾನದ ನೆಲದಲ್ಲಿ ಉಡೀಸ್ ಆಗಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಚರ್ಚೆ ಕೂಡ ಜೋರಾಗಿದೆ. ಇನ್ನೊಂದು ಕಡೆ ಭಾರತಕ್ಕೆ ಬೇಕಿದ ಮೋಸ್ಟ್ ವಾಂಟೆಡ್ ನಟೋರಿಯಸ್ ಡಾನ್ ದಾವೂದ್ ಇಬ್ರಾಹಿಂ ಕೂಡ ಇದೇ ದಾಳಿಯಲ್ಲಿ ಹತ್ಯೆ ಆಗಿರುವ ಚರ್ಚೆ ಶುರುವಾಗಿದೆ. 850 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಡಾನ್ ದಾವೂದ್ ಇಬ್ರಾಹಿಂ ಉಡೀಸ್ ಆಗಿದ್ದಾನಾ? ಎಂಬ ಚರ್ಚೆ ನಡೀತಾ ಇದ್ದು, ಹಲವು ಮೂಲಗಳ ಪ್ರಕಾರ ಇದು ಸತ್ಯ ಎನ್ನಲಾಗಿದೆ. ಆದರೂ ಡಾನ್ ದಾವೂದ್ ಇಬ್ರಾಹಿಂ ಭಾರತೀಯ ಸೇನೆ ದಾಳಿಯಲ್ಲಿ ಬಲಿಯಾಗಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಡಾನ್ ದಾವೂದ್ ಇಬ್ರಾಹಿಂ ಸಾವಿನ ಬಗ್ಗೆ ಕುತೂಹಲದ ಚರ್ಚೆ ಜೋರು ಜೋರಾಗಿದೆ.












Click it and Unblock the Notifications