ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಖರೀದಿ; ಮಾಸ್ಕ್ ಧರಿಸದೇ 6 ಲಕ್ಷ ದಂಡ ಕಟ್ಟಿದ ಜನರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಕೋವಿಡ್ ನಿಯಮಗಳನ್ನು ಮರೆತು ಬೆಂಗಳೂರು ನಗರದ ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗಳಿಗೆ ಪ್ರವೇಶ ಮಾಡಿದ್ದರು. ಕಳೆದ 10 ದಿನದಲ್ಲಿ ಬಿಬಿಎಂಪಿ 25,000 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿದೆ.

ಅಕ್ಟೋಬರ್ 15 ರಿಂದ 25ರ ತನಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 6 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಿದೆ. ಮಾಸ್ಕ್ ಹಾಕದ ಕಾರಣಕ್ಕೆ ಸುಮಾರು 2 ಸಾವಿರ ಜನರು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ 200 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಾಸ್ಕ್ ಹಾಕ್ಕೊಳ್ಳಿ: ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ, ಮೂವರ ಬಂಧನ ಮಾಸ್ಕ್ ಹಾಕ್ಕೊಳ್ಳಿ: ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ, ಮೂವರ ಬಂಧನ

ಬಿಬಿಎಂಪಿ ವಿಶೇಷ ಆಯುಕ್ತ ಮೌನೀಷ್ ಮೌದ್ಗಿಲ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು. ತಮ್ಮ ಮತ್ತು ಕುಟುಂಬದ ಆರೋಗ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಎಫ್‌ಐಆರ್ ದಾಖಲು ಮಾಡದೇ ಬೇರೆ ದಾರಿಯಿಲ್ಲ" ಎಂದು ಹೇಳಿದ್ದಾರೆ.

ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಬರುತ್ತದೆಯೇ? ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಬರುತ್ತದೆಯೇ?

Dasara Festival BBMP Collected 6 Lakh Fine

ದಂಡ ವಿಧಿಸಲು ಬರುವ ಮಾರ್ಷಲ್‌ಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಂಡ ಸಂಗ್ರಹ ಮಾಡುವ ಬದಲು ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಜನರು ನಿಯಮಗಳನ್ನು ಪಾಲನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಮಾಸ್ಕ್ ಹಾಕದವರಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು? ಮಾಸ್ಕ್ ಹಾಕದವರಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಆದರೆ, ಮಾರುಕಟ್ಟೆಯಂತಹ ಪ್ರದೇಶದಲ್ಲಿ ಜನರು ಯಾವುದೇ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಬಿಬಿಎಂಪಿ ಹೇಳಿದೆ.

ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶದಲ್ಲಿ 1000 ರೂ. ದಂಡ ವಿಧಿಸಲಾಗುತ್ತಿತ್ತು. ಜನರ ಆಕ್ರೋಶಕ್ಕೆ ಮಣಿದ ಸರ್ಕಾರ ಕೊನೆಗೆ ಅದನ್ನು 250 ರೂ.ಗೆ ಇಳಿಕೆ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡವನ್ನು ವಿಧಿಸಲಾಗುತ್ತಿದೆ.

Recommended Video

UNLOCK 5.0 ಇದಿಷ್ಟೂ ನೀವು Follow ಮಾಡಲೇಬೇಕು | Oneindia Kannada

ಅಕ್ಟೋಬರ್ 26ರ ವರದಿಯಂತೆ ಬೆಂಗಳೂರು ನಗರದಲ್ಲಿ 1603 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 327376. ಸಕ್ರಿಯ ಪ್ರಕರಣಗಳ ಸಂಖ್ಯೆ 49224.

English summary
BBMP collected 6 lakh Rs fine from the people who not wearing a mask and not following social distancing during dasara festival in market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X