Actor Darshan: 'ದಾಸ'ನ ಜೊತೆ ಕಾಣಿಸಿಕೊಂಡ ಪ್ರಮುಖ ಕೊಲೆ ಆರೋಪಿ: ಡಿ ಬಾಸ್‌ಗೆ ಹೊಸ ಸಂಕಷ್ಟ?
ಬೆಂಗಳೂರು, ಮಾರ್ಚ್ 24: ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಪ್ರಕಣರದಲ್ಲಿ ಜಾಮೀನು ಪಡೆದು ಜೈಲಿನಿಮದ ಹೊರ ಬಂದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದ್ದು, ದರ್ಶನ್ ಮತ್ತೆ 'ಡೆವಿಲ್' ಸಿನಿಮಾದಲ್ಲಿ ಪಾಲ್ಗೊಂಡಿದ್ದು, ಫ್ಯಾನ್ಸ್ ಕುಣಿದಾಡಿದ್ದರು. ಇದೀಗ ನಟ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಖಾಕಿ ಅಲರ್ಟ್ ಆಗಿದ್ದು, ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೌದು, ನಟ ದರ್ಶನ್ ಕೇರಳ ಕಣ್ಣೂರಿನ ಪ್ರಸಿದ್ಧ ದೇವಾಲಯಕ್ಕೆ ಭಾನುವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಈ ವೇಳೆ ನಟ ದರ್ಶನ್ ಅವರು ಕೊಲೆ ಆರೋಪಿಯೊಬ್ಬರ ಜೊತೆಗೆ ಹೋಗಿದ್ದಾರೆ. ಇದರ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ನಟ ದರ್ಶನ್ ದೇಗುಲ ಭೇಟಿ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿದೆ.

ನಟ ದರ್ಶನ್ ತೂಗುದೀಪ್ ಕೇರಳದ ಕಣ್ಣೂರಿನ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಸೇರಿದಂತೆ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ಅವರ ಪುತ್ರ ವಿನೀಶ್, ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ನಟ ಧನ್ವೀರ್ ಗೌಡ ಸಹ ಅವರೊಂದಿಗೆ ಇದ್ದಾರೆ. ಬಹು ದಿನಗಳ ಬಳಿಕ ಕುಟುಂಬ ಸಮೇತರಾಗಿ ದೇಗುಲ ಭೇಟಿ ಕೊಟ್ಟ ದರ್ಶನ್ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿ ಪ್ರಜ್ವಲ್ ರೈ ಇದ್ದಾನೆ.
ಯಾರು ಕೊಲೆ ಆರೋಪಿ ಪ್ರಜ್ವಲ್ ರೈ ?
ಈ ಕೊಲೆ ಆರೋಪಿ ಅಸಲಿಗೆ ರೇಣುಕಾಸ್ವಾಮಿ ಪ್ರಕರಣದ ಆರೋಪಿಯಲ್ಲ. ಬದಲಾಗಿ ಈತ ನಟ ದರ್ಶನ್ ರೀತಿಯಲ್ಲಿ ಪ್ರಮುಖ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 2017ರಲ್ಲಿ ನಡೆದಿದ್ದ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೈ ಜೊತೆಗೆ 11ಮಂದಿ ಬಂಧನವಾಗಿತ್ತು. ಅದೇ ಪ್ರಜ್ವಲ್ ರೈ ನಟ ದರ್ಶನ್ ಜೊತೆಗೆ ಕೇರಳ ಕಣ್ಣೂರಿಗೆ ಭೇಟಿ ನೀಡಿದ್ದಾನೆ. ದೇಗುಲ ಪ್ರವೇಶಿಸುವ ವಿಡಿಯೋದಲ್ಲಿ ನಟ ದರ್ಶನ್ ಜೊತೆಗೆ ಪ್ರಜ್ವಲ್ ರೈ ಸಹ ಕಾಣಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಬ್ಬರು ಕೊಲೆ ಆರೋಪಿಗಳಿಂದ ಶತ್ರು ಸಂಹಾರ ಪೂಜೆ
ಇಬ್ಬರು ಕೊಲೆ ಪ್ರಕರಣಗಳ ಆರೋಪಿಗಳು ಒಟ್ಟಿಗೆ ಹೋಗಿ ದೇಗುಲ ಪೂಜೆ ಮಾಡಿಸಿದ್ದಾರೆ. ತಮ್ಮ ನೆಚ್ಚಿನ ನಟ ಡಿ ಬಾಸ್ ದರ್ಶನ್ ಇನ್ಮುಂದೆ ಸಿನಿ ರಂಗದಲ್ಲಿ ಬ್ಯುಸಿ ಆಗಲಿದ್ದಾರೆ. ಅದರೊಂದಿಗೆ ಪ್ರಕರಣ ಕುರಿತು ವಿಚಾರಣೆ, ಇನ್ನಿತರ ಕಾನೂನು ಸವಾಲುಗಳನ್ನು ನಿರ್ವಹಿಸುತ್ತಾರೆ. ಇನ್ನೂ ಅವರ ಜೀವನ ಮತ್ತೆ ಮೊದಲಿನಂತೆ ಸುಗಮವಾಗಲಿದೆ ಎಂದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿತ್ತು. ಆದರೆ ಈ ಕೊಲೆ ಆರೋಪಿಯೊಂದಿಗಿನ ದೇಗುಲ ಭೇಟಿಯಿಂದ ಅವರಿಗೆ ತೊಂದರೆ ಎದುರಾಗುತ್ತಾ? ಎಂಬ ಆತಂಕ ಸಹ ಅಭಿಮಾನಿಗಳಲ್ಲಿದೆ.
ಜೈಲಲ್ಲೂ ರೌಡಿಗಳ ಜೊತೆ ದರ್ಶನ್ ಸಹವಾಸ
ಏಕೆಂದರೆ ಈ ಹಿಂದೆ ಜೈಲಿನಲ್ಲಿದ್ದಾಗ ವಿಲ್ಸನ್ ಗಾರ್ಡನ್ ನಾಗಾ ಸೇರಿದಂತೆ ಕೆಲವು ರೌಡಿ ಶೀಟರ್ ಗಳ ಜೊತೆಗೆ ಸ್ನೇಹ ಬೆಳೆಸಿದ್ದರಿಂದ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಎದುರಾಗಿತ್ತು. ಜೈಲಲ್ಲಿ ಅವರೊಟ್ಟಿಗೆ ಕೂತಿರುವ ಫೋಟೋ ವೈರಲ್ ಆಗಿತ್ತು. ವೈಯಕ್ತಿಕವಾಗಿ ನಟ ದರ್ಶನ್‌ಗೆ ಅದರಿಂದ ಸಾಕಷ್ಟು ಸಮಸ್ಯೆ ಎದುರಾಗಿತ್ತು.
ಇದೀಗ ದರ್ಶನ್ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಎಂದಿನಂತೆ ಸಿನಿಮಾ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಶತ್ರು ಸಂಹಾರ ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದಾಗ ಅವರೊಂದಿಗೆ ಬೇರೆ ಕೊಲೆಯ ಆರೋಪಿ ಜೊತೆಗಿರುವುದು ಮತ್ತೆ ಸಮಸ್ಯೆ ತರಬಹುದು ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಸ್ಪಷ್ಟನೆ ಕೇಳಬಹುದು, ನೋಟಿಸ್ ನೀಡಬಹುದು ಎಂಬ ಮಾತುಗಳು ಕೇಳಿ ಬಂದಿವೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications