ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ 'ಡೇರ್ ಡೆವಿಲ್ ಮುಸ್ತಫಾ' ಚಿತ್ರತಂಡ: ಕಾರಣವಿದು

ಬೆಂಗಳೂರು, ಜೂನ್. 12: ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರ 'ಡೇರ್ ಡೆವಿಲ್ ಮುಸ್ತಫಾ' ಚಿತ್ರತಂಡ ಭಾನುವಾರ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿದೆ. ಸಮಾಜದಲ್ಲಿನ ಕೋಮುದ್ವೇಷವನ್ನು ಬಯಲಿಗೆಳೆಯುವ ಮತ್ತು ಕೋಮು ಸೌಹಾರ್ದತೆಯನ್ನು ಸಾರುವ ಪ್ರಯತ್ನ ಈ ಸಿನಿಮಾ ಎನ್ನಲಾಗುತ್ತಿದೆ.

ಶಶಾಂಕ್ ಸೋಗಾಲ ನಿರ್ದೇಶನದ 'ಡೇರ್ ಡೆವಿಲ್ ಮುಸ್ತಫಾ' ಈ ಚಿತ್ರವು ಮೇ 19 ರಂದು ತೆರೆಗೆ ಬಂದಿದೆ. ಭಾನುವಾರ ಚಿತ್ರತಂಡ ಕರ್ನಾಟಕ ಸಿಎಂ ಅವರನ್ನು ಭೇಟಿ ಮಾಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಏಕೆ ಬೇಕು ಎಂದು ತಿಳಿಸಿದ್ದಾರೆ.

Dare Devil Mustafa team meets CM Siddaramaiah

"ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಾಲ್ಕನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಮ್ಮ #daredevilmusthafa ಚಿತ್ರ ನೋಡಲು ಮನವಿ ಮಾಡಿದೆವು. ಈಗಾಗಲೇ ನಾವೇ ಸ್ವಯಂ ಪ್ರೇರಿತರಾಗಿ ಟಿಕೆಟ್ ಬೆಲೆ ಕಮ್ಮಿ ಮಾಡಿದ್ದೇವೆ. ಇದರ ಮೇಲೆ ತೆರಿಗೆ ವಿನಾಯಿತಿ ಸಿಕ್ಕರೆ ಹೆಚ್ಚಿನ ಜನರಿಗೆ ತಲುಪಲು ಸಹಾಯವಾಗುತ್ತದೆ ಎಂದು ಕೋರಿದೆವು" ಎಂದು ನಿರ್ದೇಶಕ ಶಶಾಂಕ್ ಸೋಗಾಲ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಖ್ಯಾತ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಸ್ಕ್ರಿಪ್ಟ್ ಆಧರಿಸಿ ಶಶಾಂಕ್ ನಿರ್ದೇಶನದ 'ಡೇರ್ ಡೆವಿಲ್ ಮುಸ್ತಫಾ' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ ಎಂದು ಕರ್ನಾಟಕದ ಸಿಎಂ ಕಚೇರಿ ಟ್ವೀಟ್ ಮಾಡಿದೆ. ಆದರೆ, ತೆರಿಗೆ ವಿನಾಯಿತಿ ಕುರಿತು ಇನ್ನೂ ನಿರ್ಧಾರವಾಗಿಲ್ಲ.

"ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬರಹಾಧಾರಿತ ಶಶಾಂಕ್ ನಿರ್ದೇಶನದ "ಡೇರ್ ಡೆವಿಲ್ ಮುಸ್ತಫಾ"ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಚಿತ್ರತಂಡದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಮನವಿ ಮಾಡಿದರು. ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಅವರು ತಂಡದಲ್ಲಿದ್ದರು" ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.

Dare Devil Mustafa team meets CM Siddaramaiah

ಈ ಹಿಂದೆ, ಬಿಜೆಪಿ ಆಡಳಿತವಿದ್ದಾಗ ರಾಜ್ಯದಲ್ಲಿ ಕಾಶ್ಮೀರ್ ಫೈಲ್ಸ್‌ನಂತಹ ಚಲನಚಿತ್ರಗಳಿಗೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟರ್‌ನಲ್ಲಿ ವಿವಾದಾತ್ಮಕ ಚಿತ್ರವನ್ನು ಶ್ಲಾಘಿಸಿದ್ದರು. ಚಲನಚಿತ್ರಕ್ಕೆ ನಮ್ಮ ಬೆಂಬಲವನ್ನು ನೀಡಲು ಮತ್ತು ಅದನ್ನು ವೀಕ್ಷಿಸಲು ನಮ್ಮ ಜನರನ್ನು ಪ್ರೋತ್ಸಾಹಿಸಲು, ನಾವು ಕರ್ನಾಟಕದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.

ಹಿಂದಿನ ಬಿಜೆಪಿ ಸರ್ಕಾರವು ಇತ್ತೀಚೆಗೆ ವಿಧಾನಸಭೆ ಚುನಾವಣೆಗೆ ಮೊದಲು ಬಿಡುಗಡೆಯಾದ ಬಾಲಿವುಡ್ ಚಲನಚಿತ್ರ 'ದಿ ಕೇರಳ ಸ್ಟೋರಿ'ಯ ವಿಶೇಷ ಪ್ರದರ್ಶನವನ್ನು ಶಾಲಾ ಮಕ್ಕಳಿಗೆ ಏರ್ಪಡಿಸಿತ್ತು. 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+