ಬೆಂಗಳೂರು: ದಲಿತ ಮಹಿಳೆಯ ಮೇಲೆ ಅಮಾನವೀಯ ಕೃತ್ಯ
ಬೆಂಗಳೂರು, ಜೂನ್ 13: ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಬೆನ್ನಲ್ಲೇ ಈಗ ನಗರದ ಹೊ ಭಾಗದಲ್ಲಿ ದಲಿತ ಮಹಿಳೆಯನ್ನು ಕೀಳಾಗಿ ನಡೆಸಿಕೊಂಡ ಅಮಾನವೀಯ ಘಟನೆ ವರದಿ ಆಗಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ಸಾಲವನ್ನು ವಾಪಸ್ ಮಾಡಲಿಲ್ಲವೆಂದು ಹೀಗೆ ಸಾರ್ವಜನಿಕವಾಗಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.
ಹಲ್ಲೆಗೆ ಒಳಗಾಗಿರುವ ಮಹಿಳೆಯದ್ದು ಮೂಲತಃ ಕೊಳ್ಳೆಗಾಲ ಎನ್ನಲಾಗಿದ್ದು, ತನ್ನ ಮಗಳೊಂದಿಗೆ ಕೊಡಿಗೇಹಳ್ಳಿಯಲ್ಲಿ ವಾಸವಿದ್ದು ಜೀವನೋಪಾಯಕ್ಕಾಗಿ ಸಣ್ಣ ಹೋಟೆಲ್ ಒಂದನ್ನು ನಡೆಸುತ್ತಿದ್ದರು.

ಹೊಟೆಲ್ ನಡೆಸಲು ರಾಜಮ್ಮ ಕೈಸಾಲ ಪಡೆದಿದ್ದರು, ಆದರೆ ವ್ಯಾಪಾರ ಕೈಕೊಟ್ಟ ಕಾರಣ ಸಾಲ ತೀರಿಸಲಾಗಿರಲಿಲ್ಲ, ಸಾಲಗಾರರ ಕಾಟ ಹೆಚ್ಚಾಗಿದ್ದ ಕಾರಣ ಅವರು ಒಂದು ತಿಂಗಳು ಊರು ಬಿಟ್ಟಿದ್ದರು. ಇಂದು ಬೆಳಿಗ್ಗೆ ವಾಪಸ್ ಬಂದಾಗ ಸಾಲಗಾರರು ಹೀಗೆ ಕಂಬಕ್ಕೆ ಕಟ್ಟಿದ್ದಾರೆ.
ಬೆಳಿಗ್ಗೆಯೇ ರಾಜಮ್ಮನನ್ನು ಕಂಬಕ್ಕೆ ಕಟ್ಟಲಾಗಿದೆ, ಅವಾಚ್ಯವಾಗಿ ಬೈದು, ಹಿಂಸೆ ನೀಡಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಘಟನೆ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications