ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ'

By Mahesh
|
Google Oneindia Kannada News

ಬೆಂಗಳೂರು, ಮೇ.11:ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 18 ವರ್ಷಗಳ ಕಾಲ ಕಾನೂನು ಸಮರ ಅಂತಿಮ ಫಲಿತಾಂಶ ಹೊರ ಬಂದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳನ್ನು ನಿರ್ದೋಷಿಗಳು ಎಂದು ಹೈಕೋರ್ಟ್ ಜಡ್ಜ್ ಕುಮಾರಸ್ವಾಮಿ ಎಂದು ಎರಡು ಸಾಲಿನ ಆದೇಶ ನೀಡಿದ್ದಾರೆ.

ಜನತಾ ಪಾರ್ಟಿ ನಾಯಕರಾಗಿದ್ದ(ಈಗ ಬಿಜೆಪಿ ಸೇರಿರುವ) ಡಾ. ಸುಬ್ರಮಣ್ಯಂ ಸ್ವಾಮಿ ಅವರು ಜಯಲಲಿತಾ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ 66.65 ಕೋಟಿ ರು ಆಸ್ತಿಯನ್ನು ಅಕ್ರಮವಾಗಿ ಗಳಿಕೆ(1991 ರಿಂದ 1996ರ ಅವಧಿ) ಮಾಡಿರುವ ಆರೋಪ ಹೊರೆಸಿ ಕೇಸ್ ದಾಖಲಿಸಿದರು. ಅಲ್ಲಿಂದ ಇಂದಿನ ತನಕ ಜಯಲಲಿತಾ ಅವರಿಗೆ 'ಸ್ವಾಮಿ' ಭೀತಿ ಎದುರಾಗಿತ್ತು. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

DA Case: Jayalalithaa and four other accused acquitted from all charges,ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ

ಸೆ.27,2014ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ, ಶಶಿಕಲಾ, ಇಳವರಸಿ, ದಿನಕರನ್ ಅವರ ವಿರುದ್ದ ಮಾಡಲಾಗಿರುವ ಆರೋಪ ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ]

ಇದಾದ ಬಳಿಕ ಸುಪ್ರೀಂಕೋರ್ಟಿನಲ್ಲಿ ಜಾಮೀನು ಪಡೆದು ಪರಪ್ಪನ ಅಗ್ರಹಾರದಿಂದ ಚೆನ್ನೈನ ಪೊಯಿಸ್ ಗಾರ್ಡನ್ ನಿವಾಸಕ್ಕೆ ತೆರಳಿ ಸೈಲಂಟ್ ಆಗಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ 21 ದಿನಗಳನ್ನು ಕಳೆದ ಜಯಲಲಿತಾ ಅವರು ಅನಾರೋಗ್ಯಕ್ಕೆ ಟ್ರೀಟ್ ಮೆಂಟ್ ತೆಗೆದುಕೊಳ್ಳತೊಡಗಿದ್ದರು.

ಇತ್ತ ಸುಪ್ರೀಂಕೋರ್ಟ್ ಆದೇಶದ ಅನ್ವಯ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ಜ.5ರಂದು ವಿಚಾರಣೆ ಆರಂಭಿಸಿತು. ಈ ನಡುವೆ ಎಸ್ ಪಿಪಿ ನೇಮಕ ಗೊಂದಲ ಮತ್ತೊಮ್ಮೆ ವಿಚಾರಣೆ ವಿಳಂಬಗೊಳಿಸಿತು. ಕೊನೆಗೂ ಈಗ ಅಂತಿಮ ಘಟ್ಟ ತಲುಪಿ ಫಲಿತಾಂಶ ಮೇ.11ರ ಬೆಳಗ್ಗೆ ಜಯಾ ಪರವಾಗಿ ಹೊರಬಿದ್ದಿದೆ.

ಜಯಾ ಮುಂದಿನ ಸಿಎಂ

ಜಯಾ ಮುಂದಿನ ಸಿಎಂ

ಆಕ್ರಮ ಆಸ್ತಿ ಪ್ರಕರಣದಲ್ಲಿ ನಿರ್ದೋಷಿ ಎಂದು ಹೈಕೋರ್ಟ್ ಜಡ್ಜ್ ಸಿ.ಆರ್ ಕುಮಾರಸ್ವಾಮಿ ಅವರು ಎರಡು ಸಾಲಿನ ಆದೇಶ ನೀಡುತ್ತಿದ್ದಂತೆ ತಮಿಳುನಾಡಿನಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷ ನ್ಯಾಯಾಲಯ ನೀಡಿದ ನಾಲ್ಕು ವರ್ಷಗಳ ಶಿಕ್ಷೆ, 100 ಕೋಟಿ ರು ದಂಡ ಆದೇಶ ರದ್ದಾಗಿದೆ. ಜಯಾ ಇನ್ನು 10 ನಿಮಿಷದಲ್ಲೇ ಸಿಎಂ ಆಗುತ್ತಾರೆ ಎಂದು ಜಯಾ ವಕೀಲರು ಸಂಭ್ರಮದಿಂದ ಹೇಳಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಹೇಳಿಕೆ

ಜಯಲಲಿತಾ ಅವರಿಗೆ ನೀಡಿರುವ ಶಿಕ್ಷೆ ರದ್ದುಪಡಿಸಲು ಸಾಧ್ಯವಿಲ್ಲ. ಶಿಕ್ಷೆ ಪ್ರಮಾಣ ಕಡಿಮೆ ಅಥವಾ ಜಾಸ್ತಿಯಾಗಲಿದೆ.

ಜಯಾ ಪ್ರಮಾಣವಚನಕ್ಕೆ ಸಿದ್ಧತೆ

ಚೆನ್ನೈನಲ್ಲಿ ಜಯಾಲಲಿತಾ ಸಿಎಂ ಆಗಿ ಪ್ರಮಾಣವಚನಕ್ಕೆ ಸ್ವೀಕರಿಸಲು ಸಿದ್ಧತೆ ಆರಂಭಗೊಂಡಿದೆ. ಎಐಎಡಿಎಂಕೆ ಕಚೇರಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ದೆಹಲಿಯಲ್ಲಿ ಸಂಸದರಿಂದ ಜಯಾ ಪರಾಕ್

ಜಯಲಲಿತಾ ಪರ ದೆಹಲಿಯಲ್ಲಿ ಬಹುಪರಾಕ್ ಕೂಗಿದ ಎಐಎಡಿಎಂಕೆ ಸಂಸದರು.

English summary
Jayalalithaa DA Case: The Special Bench of Justice C.R. Kumaraswamy delivered verdict on the appeals in the disproportionate assets case. Jayalalithaa and four other accused acquitted from all charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X