ಬಣ್ಣದ ಲೋಕದಲ್ಲಿ 'ಡಾನ್‌' ಆಗಿ ಮೆರೆದ 'ಡಿ ಬಾಸ್‌': ದರ್ಶನ್ ಟಾಪ್‌ 'ರೌಡಿಸಂ' ಚಿತ್ರಗಳು

ಬಣ್ಣದ ಲೋಕವೇ ಹಾಗೆ ಯಾರ ಕೈಯಲ್ಲಿ ಯಾವದಾದರೂ ಪಾತ್ರವನ್ನು ಮಾಡಿಸಿ ಬಿಡುತ್ತದೆ. ತಾನು ಎತ್ತರಕ್ಕೆ ಬೆಳೆಯ ಬೇಕು ಎಂಬ ಆಸೆ ಹೊಂದಿರುವ ವ್ಯಕ್ತಿ, ಯಾವುದೇ ಕ್ಯಾರೇಕ್ಟರ್‌ ಆದರೂ ಸಹ ಅದಕ್ಕೆ ಜೀವ ತುಂಬುವ ಕೆಲಸ ಮಾಡುತ್ತಾರೆ. ಅದು ಯಾವುದೇ ಪಾತ್ರ ಇರಲಿ ನೈಜ ನಟನೆಯ ಮೂಲಕ ಅಭಿಮಾನಿಗಳ ಮನ ಗೆಲ್ಲುವುದೇ ಟಾರ್ಗೆಟ್‌..

ಆರಂಭದಲ್ಲಿ ಸಿಗುವ ಚಿಕ್ಕ ಚಿಕ್ಕ ಪಾತ್ರಗಳಿಂದಲೇ ಅಭಿಮಾನಿಗಳ ಬಳಗವನ್ನು ಗಳಿಸುತ್ತಲೇ ದೊಡ್ಡ ನಟರಾಗುತ್ತಾರೆ. ಹೀಗೆ ನೇಮ್‌-ಫೇಮ್‌ ಬಂದ ಮೇಲೆ ಒಂದೊಂದೇ ಚಿತ್ರಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಅವರ ಬಾಡಿ ಲ್ಯಾಂಗ್ವೇಜ್‌ ಹಾಗೂ ಮ್ಯಾನರೀಸಂ ನೋಡಿಕೊಂಡು ನಿರ್ದೇಶಕ ಕಥೆ ನಿರ್ಮಿಸುತ್ತಾರೆ. ಈ ಕಥೆಯನ್ನು ಕೇಳಿ ನಟ ಸೈ ಎನ್ನುವುದು. ಅಂದಹಾಗೆ ಇಷ್ಟೇಲ್ಲಾ ಪೀಠಿಕೆ ಹಾಕಲು ಕಾರಣವೂ ಇದೆ.

D Boss as Don in Big Screen Actor Darshan s Top Rowdyism Films

ನೈಜ ನಟನೆಯ ಕಲಾವಿದ

ಚಂದನ ವನದ ಸ್ಟಾರ್ ನಟ ದರ್ಶನ್, ತನ್ನ ನೈಜ ಅಭಿನಯ ಹಾಗೂ ತನ್ನ ಹಾವ ಭಾವದಿಂದಲೇ ಹೆಸರುವಾಸಿ. ಮೆಜೆಸ್ಟಿಕ್‌ ಚಿತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ತಮ್ಮ ಛಾಪು ಮೂಡಿಸಿದ ನಟ. ದರ್ಶನ್ ಪ್ರಜ್ವಲ್‌ ಆಗಿ, ದಾಸ್‌ ನಾಗಿ ಬೆಳ್ಳಿ ತೆರೆಯಲ್ಲಿ ಮರೆದು ಬಿಟ್ಟರು. ಇವರ ನಟನೆಯನ್ನು ಕಂಡು ಫ್ಯಾನ್ಸ್‌ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.

ಈ ಚಿತ್ರದಲ್ಲಿ ದಾಸ್‌ನಾಗಿ ಕಾಣಿಸಿಕೊಂಡು ಅಬ್ಬರಿಸಿದ್ದರು. ಇವರ ಕೈಯಲ್ಲಿ ಮಚ್ಚು, ಲಾಂಗ್‌ ಹಿಡಿದು ಎದುರಾಳಿಗಳ ವಿರುದ್ಧ ಹೋರಾಡುವ ದೃಶ್ಯ ಕಂಡ್ರಂತೂ ಫ್ಯಾನ್ಸ್‌ ಶಿಳ್ಳೆ ಹೊಡೆಯುತ್ತಿದ್ದರು. ಇವರ ಈ ಕ್ರೇಜ್‌ ಕಂಡೇ ಇವರಿಗೆ ಇಂತಹದ್ದೇ ಚಿತ್ರಗಳು ಸಾಲು ಸಾಲು ಸಿಕ್ಕವು.

ದಾಸ್‌ ನಟನೆಗೆ ಫ್ಯಾನ್ಸ್ ಫಿದಾ

ದರ್ಶನ ನಟನೆಯ ಕರಿಯಾ ಚಿತ್ರ ನಿಜಕ್ಕೂ ಅವರಿಗೆ ಹಾಗೂ ನಿರ್ದೇಶಕರಿಗೆ ಒಂದು ಬ್ರೇಕ್‌ ನೀಡಿದ್ದಂತೂ ಸುಳ್ಳಲ್ಲ. ಇನ್ನು 'ದಾಸ್' ಸಿನಿಮಾದಲ್ಲಿ ಅಂಡರ್‌ ವರ್ಲ್ಡ್‌ನ ಭಾಗವಾಗಿ ಸಾಮಾಜಿಕ ಕಾರ್ಯಗಳನ್ನು ಹೇಗೆ ಮಾಡುತ್ತಾರೆ ಎಂಬುದನ್ನು ತೋರಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

D Boss as Don in Big Screen Actor Darshan s Top Rowdyism Films

''ಕಿಟ್ಟಿ, ಕರಿಯಾ, ದಾಸ್‌, ಧರ್ಮ, ಕಲಾಸಿಪಾಳ್ಯ, ಶಾಸ್ತ್ರಿ, ಚಕ್ರವರ್ತಿ, ರಾಬರ್ಟ್‌'' ಈ ಚಿತ್ರಗಳಲ್ಲಿ ಅಂಡರ್‌ ವರ್ಲ್ಡ್‌ ಚಿತ್ರಗಳಲ್ಲಿ ನಟಿಸಿ ಅಬ್ಬರಿಸಿದ್ದಾರೆ. ಅಲ್ಲದೆ ಈ ಚಿತ್ರಗಳಲ್ಲಿ ರೌಡಿಗಳು ಹೇಗೆ ವರ್ತಿಸುತ್ತಾರೆ ಎಂಬುದನ್ನು ರೀಯಲ್‌ ಆಗಿ ತೋರಿಸಿದ್ದಾರೆ.

ಹೇಗಿದೆ ದರ್ಶನ್ ರಿಯಲ್ ಲೈಫ್?

ಇಷ್ಟೇಲ್ಲಾ ಚಿತ್ರಗಳಲ್ಲಿ ನೈಜ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ದರ್ಶನ ರಿಯಲ್ ಲೈಫ್‌ನಲ್ಲಿ ಕೊಂಚ ಚೇಂಜ್ ಆಗಿದ್ದಾರೆ ಎಂದೇ ಭಾವಿಸಿದ್ದರು. ಆದರೆ ದರ್ಶನ್ ಅವರ ಮೇಲೆ ಹೆಂಡತಿ ಆರೋಪ ಹೊರಿಸಿದಾಗ ಹಲವರ ಕಣ್ಣುಗಳು ಕೆಂಪಾದವು. ಈಗ ರೇಣುಕಾಸ್ವಾಮಿ ಕೊಲೆಯ ಪ್ರಕರಣದ ಆರೋಪದಡಿ ಇವರನ್ನು ಬಂಧಿಸಲಾಗಿದೆ. ಏನಪ್ಪಾ ಇದು ಇದೆಲ್ಲಾ ಎಲ್ಲಿಗೆ ಹೋಗಿ ನಿಲ್ಲುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ ಮಂಗಳವಾರ ಮೈಸೂರಿನಲ್ಲಿ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೂ ಇವರು ನಟಿಸಿದ ಚಿತ್ರಗಳಿಗೂ ಯಾವುದೇ ಸಂಬಂಧ ಇಲ್ಲ.

D Boss as Don in Big Screen Actor Darshan s Top Rowdyism Films

ಆದಾಗ್ಯೂ ದರ್ಶನ ಈ ಕೊಲೆಗೆ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ರೇಣುಕಾಸ್ವಾಮಿ ಅವರನ್ನು ನಾನು ಬೆದರಿಸಲು ಹೇಳಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+