• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

8 ವರ್ಷದ ಈ ಪೋರ ಸಾಫ್ಟ್‌ವೇರ್ ಕಂಪನಿ ಸಿಇಓ

By Kiran B Hegde
|

ನವದೆಹಲಿ, ನ. 13: ಭಾರತ ಮೂಲದ ಮಕ್ಕಳು ಅಮೆರಿಕದಲ್ಲಿ ಸ್ಪೆಲ್ಲಿಂಗ್ ಬಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇದೀಗ ಅವರ ಸಾಲಿಗೆ ಮತ್ತೋರ್ವ ಬಾಲಕ ಸೇರಿದ್ದಾನೆ.

ಭಾರತ ಮೂಲದ ಎಂಟು ವರ್ಷದ ಬಾಲಕ 'ರೆಯುಬೆನ್ ಪೌಲ್' ಈ ಸಾಧಕ ಬಾಲಕ. ತನ್ನ ವಯಸ್ಸಿಗೆ ಮೀರಿದ ಪ್ರೌಢಿಮೆಯಿಂದ ಆತ ತನ್ನದೇ ಪಾಲುದಾರಿಕೆಯ ಒಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನಕ್ಕೇರಿದ್ದಾನೆ. ಅಲ್ಲದೆ, ಗುರುವಾರ ನವದೆಹಲಿಯಲ್ಲಿ ಆರಂಭವಾದ ಸೈಬರ್ ಭದ್ರತಾ ಸಮ್ಮೇಳನವಾದ ಗ್ರೌಂಡ್ ಜೀರೋ ಸಮಿತ್‌ನಲ್ಲಿ ಮಾತನಾಡುವ ಅವಕಾಶ ಪಡೆದಿದ್ದಾನೆ.

ರೆಯುಬೆನ್ ಪೌಲ್ ಶುಕ್ರವಾರ 'ಯುವ ಸಮುದಾಯಕ್ಕೆ ಸೈಬರ್ ಭದ್ರತಾ ಕೌಶಲ್ಯ ಕಲಿಸಬೇಕಾದ ಅಗತ್ಯ' ಕುರಿತು ಮಾತನಾಡಲಿದ್ದಾನೆಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿರುವ ಮಾಜಿ ಸೇನಾ ಜನರಲ್ ವಿ.ಕೆ. ಸಿಂಗ್ ಕೂಡ ಮಾತನಾಡುವರು.

ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ರಾಯುಬೆನ್ ಪೌಲ್, "ನಾನು ಕೇವಲ ಒಂದು, ಒಂದುವರೆ ವರ್ಷದ ಹಿಂದೆ ಕಂಪ್ಯೂಟರ್ ಲಾಂಗ್ವೇಜ್ ಕಲಿಯಲು ಆರಂಭಿಸಿದೆ. ಈಗ ನನ್ನ ಪ್ರೊಜೆಕ್ಟ್‌ಗಳನ್ನು ನಾನೇ ಚಿತ್ರಿಸಿಕೊಳ್ಳಬಲ್ಲೆ" ಎಂದು ತಿಳಿಸಿದ್ದಾನೆ.

ರಾಯುಬೆನ್‌ಗೆ ಆತನ ತಂದೆಯೇ ಗುರು. ತಂದೆ ಮಾನೋ ಪೌಲ್‌ ಅವರಿದ ಆಬ್ಜೆಕ್ಟ್ ಸಿ ಪ್ರೋಗ್ರಾಮಿಂಗ್ ಲಾಂಗ್ವೇಜ್ ಕಲಿತು, ಈಗ ಆಪಲ್‌ಗೆ ಐಓಎಸ್‌ಗಾಗಿ ಸ್ವಿಫ್ಟ್ ಪ್ರೋಗ್ರಾಮಿಂಗ್ ಕಲಿಯುತ್ತಿದ್ದಾನೆ. ಆಗಸ್ಟ್‌ನಲ್ಲಿ ತಂದೆಯ ಪಾಲುದಾರಿಕೆಯಲ್ಲಿ ಆರಂಭಿಸಿದ ತನ್ನದೇ ಸಂಸ್ಥೆಯಲ್ಲಿ ಪ್ರುಡೆಂಟ್ ಗೇಮ್ಸ್ ಆರಂಭಿಸಿದ. ಆ ಕಂಪನಿಗೆ ರಾಯುಬೆನ್ ಸಿಇಓ ಕೂಡ ಹೌದು.

ಮಗನ ಕುರಿತು ಪ್ರತಿಕ್ರಿಯಿಸಿರುವ ಮಾನೋ ಪೌಲ್, "ರಾಯುಬೆನ್‌ನ ನಾಲ್ಕನೇ ಬಾರಿ ಸಮ್ಮೇಳನದಲ್ಲಿ ಮಾತನಾಡುತ್ತಿದ್ದಾನೆ. ಇಲ್ಲಿ ಮಕ್ಕಳಲ್ಲಿ ಸೈಬರ್ ಭದ್ರತೆ ಕುರಿತು ಮೂಡಿಸಬೇಕಾದ ಜಾಗೃತಿ ಮಾತನಾಡಲಿದ್ದು, ವೈಟ್ ಪೇಜ್ ಹಾಕಿಂಗ್ ಕುರಿತು ಡೆಮೊ ನೀಡಲಿದ್ದಾನೆ" ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian origin 8 year old boy Reuben Paul will speak in a cyber security summit organised in New Delhi. His father said that Reuben will talk about the need to create awareness about cyber security among young kids as well as demo white page hacking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more