Cyber Fraud Alert: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಅಧಿಕಾರಿಗೆ 5.14 ಕೋಟಿ ರೂ. ವಂಚನೆ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿನ ಬಹುರಾಷ್ಟ್ರೀಯ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಅತ್ಯಧಿಕ ಲಾಭ ಆಸೆಗೆ ಹೂಡಿಕೆ ಆಮೀಷ ಒಡ್ಡಿದವರ ಮಾತು ಕೇಳಿ ಬರೋಬ್ಬರಿ 5.14 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ನೀಡಿದ್ದಾರೆ. ಆನ್‌ಲೈನ್ ಹೂಡಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಕಳೆದ ವರ್ಷ 2025ರ ನವೆಂಬರ್‌ನಲ್ಲಿ 'LKP VIP' ಎಂಬ ವಾಟ್ಸಾಪ್ ಗ್ರೂಪ್ ಮೂಲಕ ಇವರನ್ನು ಈ ವಂಚನೆಗೆ ಒಳಗಾದ ಎಂಎನ್‌ಸಿ ಕಂಪನಿಯ ಅಧಿಕಾರಿಯನ್ನು ಸಂಪರ್ಕಿಸಲಾಗಿತ್ತು. ದೀಪಾ ಮತ್ತು ದಿನೇಶ್ ಎಂಬುವವರು ತಾವು ಹೂಡಿಕೆ ತಜ್ಞರೆಂದು ನಂಬಿಸಿ, 'LKPNHWL' ಎಂಬ ನಕಲಿ ಮೊಬೈಲ್ ಆಪ್ ಡೌನ್‌ಲೋಡ್ ಮಾಡಲು ತಿಳಿಸಿದ್ದರು. ವಂಚಕರು ಹೇಳಿದ್ದನ್ನು ನಂಬಿಕ ಇವರು ಹಣ ಕಳೆದುಕೊಂಡಿದ್ದಾರೆ.

Cyber Fraud Alert Online Investment Fraud Leaves Bengaluru Executive Rs 5 14 Crore Lost

ದೀಪಾ ಮತ್ತು ದಿನೇಶ್ ಕೆ ವಾಘೇಲಾ ಅವರು ಅಧಿಕಾರಿಯನ್ನು ಸಂಪರ್ಕಿಸಿದರು, ಅವರು ನಕಲಿ ಗುರುತಿನ ಚೀಟಿ ತೋರಿಸಿ ನಂಬಿಸಿದ್ದರು. ನಂಬಿದ ಅಧಿಕಾರಿಯು ನವೆಂಬರ್ 12 ರಿಂದ ಜನವರಿ 7ರ ನಡುವೆ ವರೆಗೆ ಆಪ್ ಮೂಲಕ ವಂಚಕರು ಹೇಳಿದಂತೆ ಹಣ ವರ್ಗಾಯಿಸಿದ್ದಾರೆ. ಒಟ್ಟು 5,14,85,000 ರೂಪಾಯಿ ಹಣ ವರ್ಗಾಯಿಸಿದ್ದರು. ಹಣ ಕಟ್ಟಿದ ಬಳಿಕ ಈ ಆಪ್‌ನಲ್ಲಿ ನಿಮ್ಮ ಹಣವು 19 ಕೋಟಿ ರೂಪಾಯಿಗೆ ಬೆಳೆದಿದೆ ಎಂದು ತೋರಿಸಲಾಗಿದೆ.

ಹಣ ಪಡೆಯಲು ₹2 ಕೋಟಿ ತೆರಿಗೆ ಕಟ್ಟಿ

ಹಣ ಮೂರರಷ್ಟು ಬೆಳೆದಿದೆ ಎಂದು ಅಧಿಕಾರಿ ವಿತ್‌ಡ್ರಾ ಮಾಡಿಕೊಳ್ಳಲು ಹೋದಾಗ, "2 ಕೋಟಿ ರೂ. ತೆರಿಗೆ ಪಾವತಿಸಿ" ಬೇಕೆಂದು ವಂಚಕರು ತಿಳಿಸಿದ್ದಾರೆ. ಇದನ್ನು ನೋಡಿದ ಅಧಿಕಾರಿಗೆ ಆಘಾತವಾಗಿದೆ. ಅನುಮಾನ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನವರಿ 12ರಂದು ಎಫ್‌ಐಆರ್‌ ದಾಖಲಿಸಲಾಗಿದೆ.

"ವಂಚನೆಯ ಪ್ರಮುಖ ಭಾಗವೆಂದರೆ ಬಲಿಪಶುಗಳಿಗೆ ಆರಂಭದಲ್ಲಿ ತಾವು ಲಾಭ ಗಳಿಸುತ್ತಿದ್ದೀರಿ ಎಂದು ಮನವೊಲಿಸಲು ಚಾಕಚಕ್ಯತೆಯಿಂದ ಮಾಡಿದ ನಕಲಿ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಇಲ್ಲಿ ಯಾವುದೇ ಕಾಗದದ ವಹಿವಾಟುಗಳು ನಡೆದಿರುವುದಿಲ್ಲ. ಆದ್ದರಿಂದ ಇಂತಹ ವಂಚನೆ, ಕರೆಗಳು, ಸಂದೇಶಗಳಿಂದ ಜಾಗರೂಕರಾಗಿರುವಂತೆ ಪೊಲೀಸರು ಹೇಳಿದ್ದಾರೆ.

ವೃದ್ಧರಿಗೆ 95 ಲಕ್ಷ ರೂ. ವಂಚನೆ

ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರು ಇತ್ತೀಚೆಗೆ ವೃದ್ಧರಿಗೆ ಇಂಥದ್ದೆ ವಂಚನೆ ಮಾಡಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 69 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ಸಾರ್ವಜನಿಕ ಹಾಗೂ ಸುರಕ್ಷಿತ ವೇದಿಕೆಯಲ್ಲಿ ಹೂಡಿಕೆ ಮಾಡುತ್ತಿದ್ದೇನೆ ಎಂದು ನಂಬಿ 95 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ವಹಿವಾಟುಗಳನ್ನು ವಂಚಕರು ಅನುಮಾನ ಬಾರದಂತೆ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರು ನಕಲಿ ಅಪ್ಲಿಕೇಶನ್‌ಗಳನ್ನು ಬಳಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವೃದ್ಧರು 75 ಲಕ್ಷ ರೂಪಾಯಿ ಹೂಡಿಕೆಯಿಂದ 1.33 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ ಎಂದು ನಕಲಿ ಆಪ್‌ನಲ್ಲಿ ತೋರಿಸಲಾಗಿದೆ. ಅವರು ಸಹ ಅಧಿಕಾರಿಯಂತೆ ಹಣ ಪಡೆಯಲು ಮುಂದಾದಾಗ 18 ಲಕ್ಷ ರೂ. ತೆರಿಗೆ ಪಾವತಿಸುವಂತೆ ಕೇಳಲಾಗಿದೆ. ಬಳಿಕವೇ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

ಸುಧಾ ಮೂರ್ತಿ ಆನ್‌ಲೈನ್ ವಂಚನೆ ವಿಡಿಯೋ, ಜಾಗೃತಿ

ಇತ್ತೀಚೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಡೀಪ್‌ ಫೇಕ್ ವಿಡಿಯೋ ಮಾಡಿ, ಹಣ ಪಾವತಿಸಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ವಂಚಕರು ನಂಬಿಸಿದ್ದರು. ಅವರೇ ವಿಡಿಯೋದಲ್ಲಿ ಮಾತನಾಡಿ ಹಣ ಹೂಡಿಕೆ ಮಾಡಲು ಪ್ರೋತ್ಸಾಹ ನೀಡಿರುವಂತೆ ವಿಡಿಯೋ ಸೃಷ್ಟಿಸಿದ್ದರು. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿ ಸುದ್ದಿಯಾಗಿತ್ತು. ವಿಡಿಯೋ ನೋಡಿದ ಕೆಲವರು ಹಣ ಕಟ್ಟಿ ಮೋಸ ಹೋಗಿದ್ದಾರೆ. ಎಚ್ಚೆತ್ತ ಸುಧಾಮೂರ್ತಿ ಅವರು ಕೂಡಲೇ ಇಂತಹ ವಂಚಕರ ಜಾಲಕ್ಕೆ ಬೀಳದಂತೆ, ಫೇಕ್ ವಿಡಿಯೋ ನಂಬದಂತೆ ಜಾಗೃತಿ ಮೂಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+