• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ

By Nayana
|

ಬೆಂಗಳೂರು, ಜು.16: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಂತಿದ್ದ ವೈಟ್‌ ಟಾಪಿಂಗ್‌ ಕಾಮಗಾರಿಗೆ ಮತ್ತೆ ಆರಂಭವಾಗಲಿದೆ. ಮುಖ್ಯ ಕಾರ್ಯದರ್ಶಿ ವಿಜಯ್‌ಭಾಸ್ಕರ್‌ ಅವರು ಇತ್ತೀಚೆಗೆ ಬಿಬಿಎಂಪಿ ಮತ್ತು ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆಸಿದ್ದ ಸಮನ್ವಯ ಸಮಿತಿ ಸಭೆ ಯಶಸ್ವಿಯಾಗಿದ್ದು, ವೈಟ್‌ ಟಾಪಿಂಗ್‌ ಕಾಮಗಾರಿ ಪುನರಾರಂಭಿಸಲು ಪೊಲೀಸರು ಸಮ್ಮತಿ ದೊರೆತಿದೆ.

ಹಾಗಾಗಿ ಅರೆಮರೆಯಾಗಿರುವ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಇನ್ನೊಂದು ವಾರದಲ್ಲಿ ಮತ್ತೆ ಆರಂಭಿಸಲು ಬಿಬಿಎಂಪಿ ಮುಂದಾಗಿದೆ. ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಬಿಬಿಎಂಪಿ 29 ಪ್ರಮುಖ ರಸ್ತೆಗಳು ಹಾಗೂ 6 ಜಂಕ್ಷನ್‌ ಗಳಲ್ಲಿ ಮೊದಲ ಹಂತದಲ್ಲಿ ವೈಟ್‌ ಟಾಪಿಂಗ್‌ ಮಾಡಲು ನಿರ್ಧರಿಸಿತ್ತು. ಕಳೆದ ವರ್ಷ ಆರಂಭಿಸಲಾದ ವಿವಿಧ ರಸ್ತೆಗಳ ವೈಟ್‌ ಟಾಪಿಂಗ್ ಕಾಮಗಾರಿಗಳನ್ನು ವಿಧಾನಸಭೆ ಚುನಾವಣೆ ವೇಳೆಗೆ ಪೂರ್ಣಗೊಳಿಸಬೇಕೆಂದಿದ್ದ ಪಾಲಿಕೆ ಲೆಕ್ಕಾಚಾರ ತಲೆಕೆಳಗಾಗಿದೆ.

ಚುನಾವಣೆ ಮುಗಿದರೂ ಆರಂಭವಾಗದೆ ಅರ್ಧಕ್ಕೆ ನಿಂತ ವೈಟ್‌ ಟಾಪಿಂಗ್ ಕಾಮಗಾರಿ

ರಸ್ತೆಯ ಅಂಚಿನಲ್ಲಿ ಉಳಿದಿರುವ ಜಾಗದಲ್ಲಿ ಸ್ಲ್ಯಾಬ್‌ಗಳನ್ನು ಅಳವಡಿಸುವ ಕಾರ್ಯ ಬಾಕಿ ಇದೆ.ಏಕಕಾಲಕ್ಕೆ ಕಾಮಗಾರಿ ಕೈಗೆತ್ತಿಕೊಂಡ ಕಾರಣ ಹಾಗೂ ಕಾಮಗಾರಿ ನಡೆಯುವ ರಸ್ತೆಗಳಿಗೆ ಸಮರ್ಪಕ ಪರ್ಯಾಯ ರಸ್ತೆಗಳಿಲ್ಲದ ಕಾರಣ, ವೈಟ್‌ ಟಾಪಿಂಗ್‌ ಕಾಮಗಾರಿ ನಗರಾದ್ಯಂತ ಸಂಚಾರ ದಟ್ಟಣೆ ಹೆಚ್ಚುವಂತೆ ಮಾಡಿತ್ತು.

CS intervention successful: White topping work will continue again

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಮಧ್ಯಪ್ರವೇಶದೊಂದಿಗೆ ಇದೀಗ ನೆನಗುದಿಗೆ ಬಿದ್ದಿದ್ದ ವೈಟ್‌ ಟಾಪಿಂಗ್ ಕಾಮಗಾರಿ ಪುನರಾರಂಭಕ್ಕೆ ಕಾಲಕೂಡಿ ಬಂದಿದೆ. ಮೊದಲ ಹಂತದಲ್ಲಿ 93.47 ಕಿ.ಮೀ ರಸ್ತೆ ಟಾಪಿಂಗ್‌ ಕಾಮಗಾರಿ ಹಮ್ಮಿಕೊಂಡಿತ್ತು.

ನಗರದ ಹೊರ ವರ್ತುಲ ರಸ್ತೆ ಸೇರಿ ಒಟ್ಟು 29 ರಸ್ತೆಗಳನ್ನು ಬಿಬಿಎಂಪಿ ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಸಿಇದೆ. ಅದರಲ್ಲಿ ಒಟ್ಟು 972.69 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಒಟ್ಟು 93.47 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Chief secretary TM Vijay Bhaskrar has solved issues between BBMP and Bangalore police regarding traffic control during white topping work which was taken by the BBMP. The work was hampered after lack of coordination between two authorities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more