ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ನಲ್ಲಿ ಭಾರಿ ಮೊತ್ತದ ಹಣ, ಚಿನ್ನದ ಬಿಸ್ಕತ್ತು ಪತ್ತೆ
ಬೆಂಗಳೂರು, ಜುಲೈ 21: ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದ್ದು ಆದಾಯ ತೆರಿಗೆ ಇಲಾಖೆ ಹೆಚ್ಚಿನ ತನಿಖೆ ಮಾಡುತ್ತಿದೆ.
ಗುಜರಾತ್ ಮೂಲದ ಫೈನಾನ್ಸಿಯರ್ ಹಾಗೂ ಉದ್ಯಮಿ ಅವಿನಾಶ್ ಎಂಬುವರು ಬಳಸುತ್ತಿದ್ದ ಮೂರು ಲಾಕರ್‌ಗಳಲ್ಲಿ 3.9 ಕೋಟಿ ನಗದು, ಹಲವು ಚಿನ್ನದ ಬಿಸ್ಕತ್ತುಗಳು, ಒಡವೆಗಳು ಹಾಗೂ ಕೋಟ್ಯಂತರ ಮೌಲ್ಯದ ಆಸ್ತಿಯ ದಾಖಲೆಗಳು ದೊರೆತಿವೆ.
ಬೌರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಒಟ್ಟು 126 ಲಾಕರ್‌ಗಳಿವೆ, ಇವುಗಳನ್ನು ಯಾರೂ ಸರಿಯಾಗಿ ಬಳಸುತ್ತಿರಲಿಲ್ಲ, ಹಾಗಾಗಿ ಆಡಳಿತ ಮಂಡಳಿಯು ಎಲ್ಲಾ ಲಾಕರ್ ಮಾಲೀಕರಿಗೆ ಪತ್ರ ಬರೆದು ಲಾಕರ್ ಪರಿಶೀಲಿಸುವಂತೆ ತಿಳಿಸಿತ್ತು. ಹೀಗಾಗಿ ಎಲ್ಲಾ ಲಾಕರ್‌ಗಳ ಮಾಲೀಕರು ಲಾಕರ್ ತೆರೆಯಲು ಬಂದಿದ್ದರು ಆದರೆ ಮೂರು ಲಾಕರ್‌ಗಳ ಮಾಲೀಕರು ಮಾತ್ರ ಬಂದಿರಲಿಲ್ಲ.

ಇದರಿಂದ ಮತ್ತೆ ನೊಟೀಸ್ ನೀಡಿದ ಆಡಳಿತ ಮಂಡಳಿ ಸಮಯದ ಗಡುವು ನೀಡಿ, ಗಡುವು ಮುಗಿಯುವದರ ಒಳಗೆ ಬಂದು ಲಾಕರ್ ತೆಗೆದುಕೊಳ್ಳುವಂತೆ ತಿಳಿಸಿತ್ತು. ಗಡುವು ಮುಗಿದ ನಂತರ ನಾವೇ ಲಾಕರ್ ತೆಗೆಯುವುದಾಗಿಯೂ ಹೇಳಿತ್ತು.
ಲಾಕರ್‌ಗಳ ಮಾಲೀಕ ಅವಿನಾಶ್ ಬರದ ಕಾರಣ ತಾವೇ ಲಾಕರ್ ಒಡೆದ ಆಡಳಿತ ಸಿಬ್ಬಂದಿ ಅವಕ್ಕಾಗುವಂತೆ ಭಾರಿ ಮೊತ್ತದ ಹಣ ಹಾಗೂ ಚಿನ್ನದ ಬಿಸ್ಕೆಟ್‌ಗಳು ಕಣ್ಣಿಗೆ ಬಿದ್ದಿವೆ. ಕೂಡಲೇ ಆಡಳಿತ ಮಂಡಳಿಯು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದೆ.
ಲಾಕರ್‌ನಲ್ಲಿ ಸಿಕ್ಕ ಹಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆದಾಯ ತೆರಿಗೆ ಅಧಿಕಾರಿಗಳು, ಈ ಲಾಕರ್ ಅವಿನಾಶ್ ಅವರದ್ದೆಯಾ ಅಥವಾ ಬೇರೆ ಯಾರಾದರೂ ಬಳಸುತ್ತಿದ್ದರಾ ಎಂದು ತನಿಖೆ ಮಾಡುತ್ತಿದೆ.












Click it and Unblock the Notifications