ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಒನ್ ವೇನಲ್ಲಿ ವಾಹನ ಓಡಿಸಿದರೆ ಕ್ರಿಮಿನಲ್ ಕೇಸ್

|
Google Oneindia Kannada News

Recommended Video

Bengaluru city traffic police booking criminal cases against drivers who drive in one-ways | Oneway

ಬೆಂಗಳೂರು, ಫೆಬ್ರವರಿ 10 : ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘಟನೆ ತಡೆಯಲು ಪೊಲೀಸರು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಒನ್ ವೇಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಲು ಕಠಿಣ ಕ್ರಮವನ್ನು ಜಾರಿಗೊಳಿಸುತ್ತಿದ್ದಾರೆ.

ಹೌದು, ಒನ್ ವೇನಲ್ಲಿ ವಾನ ಓಡಿಸಿ ಸಿಕ್ಕಿ ಬಿದ್ದರೆ ಪೊಲೀಸರು ಇನ್ನು ಮುಂದೆ ವಾಹನವನ್ನು ವಶಕ್ಕೆ ಪಡೆಯಲಿದ್ದಾರೆ. ಸವಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಿದ್ದಾರೆ. ಈಗಾಗಲೇ ಹಲವು ಪ್ರಕರಣದಲ್ಲಿ ವಾಹನ ವಶಕ್ಕೆ ಪಡೆಯಲಾಗಿದೆ.

ಸಂಚಾರಿ ಪೊಲೀಸರ ಅನಧಿಕೃತ ತಪಾಸಣೆ, ಪೊಲೀಸರಿಂದ ದಾಳಿ! ಸಂಚಾರಿ ಪೊಲೀಸರ ಅನಧಿಕೃತ ತಪಾಸಣೆ, ಪೊಲೀಸರಿಂದ ದಾಳಿ!

ಫೆಬ್ರವರಿ 4ರಂದು ಎಲೆಕ್ಟ್ರಾನಿಕ್ ಸಿಟಿ ಟೋಲ್ ಸಮೀಪ ಒನ್ ವೇ ನಲ್ಲಿ ಬಂದ ಬೈಕ್ ಸವಾರನ ವಿರುದ್ಧ ಐಪಿಸಿ 1860 (ಸೆಕ್ಷನ್ 279) ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ವಾಹನವನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 ಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರ ಸಂಚಾರಿ ನಿಯಮ ಉಲ್ಲಂಘನೆ ದಂಡ ತಪ್ಪಿಸಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಬುಲೆಟ್‌ ಸವಾರ

Criminal Cases Against Who Travel On One Way

ಇಷ್ಟು ದಿನ ಒನ್ ವೇನಲ್ಲಿ ಸಂಚಾರ ನಡೆಸಿದರೆ ಪೊಲೀಸರು ದಂಡ ವಿಧಿಸುತ್ತಿದ್ದರು. ವಾಹನವನ್ನು ಬಿಟ್ಟು ಕಳಿಸುತ್ತಿದ್ದರು. ಆದರೆ, ಈಗ ವಾಹನ ವಶಕ್ಕೆ ಪಡೆದು ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಪ್ರಕರಣ ದಾಖಲಾಗಿ ಎಫ್‌ಐಆರ್ ಆದರೆ, ನ್ಯಾಯಾಲಯದ ಮುಂದೆ ಆತ ಹಾಜರಾಗಬೇಕು.

Infographics: ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕೃತ ದರInfographics: ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕೃತ ದರ

ಬೆಂಗಳೂರು ನಗರದಲ್ಲಿ ಒನ್ ವೇನಲ್ಲಿ ಸಂಚಾರ ನಡೆಸುವುದು ಕೆಲವು ಸವಾರರಿಗೆ ಫ್ಯಾಷನ್ ಆಗಿ ಬಿಟ್ಟಿದೆ. ಬೇಗ ತಲುಪಬೇಕು ಎಂದು ಒನ್ ವೇನಲ್ಲಿ ನುಗ್ಗಿ ಎದುರಿನಿಂದ ಬರುವ ಸವಾರರ ಪ್ರಾಣಕ್ಕೂ ಕುತ್ತು ತರುತ್ತಿದ್ದಾರೆ.

ಫೆಬ್ರವರಿ 3ರಂದು ಎಲೆಕ್ಟ್ರಾನಿಕ್ ಸಿಟಿ ಸಮೀಪ ಟೆಂಪೋ ಟ್ರಾವೆಲರ್ ಒನ್ ವೇಯಲ್ಲಿ ಬರುತ್ತಿತ್ತು. ಅದನ್ನು ವಶಕ್ಕೆ ಪಡೆದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಮೊದಲು ಸರ್ವೀಸ್ ರೋಡ್‌ಗಳನ್ನು ಸರಿಪಡಿಸಿ ಎಂದು ವಾಹನ ಸವಾರರು ಒತ್ತಾಯ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಒನ್‌ ವೇನಲ್ಲಿ ನುಗ್ಗಿ ಬಂದ ಬೈಕ್ ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದರು. ಕ್ರಿಮಿನಲ್ ಪ್ರಕರಣ ದಾಖಲಿಸುವ ನಿಯಮದಿಂದಾಗಿ ಒನ್ ವೇನಲ್ಲಿ ನುಗ್ಗುವ ಅಭ್ಯಾಸಕ್ಕೆ ತಡೆ ಬೀಳಲಿದೆಯೇ? ಕಾದು ನೋಡಬೇಕು.

English summary
Bengaluru city traffic police booking criminal cases against drivers who travel on the wrong-side of one-ways and also seizing the vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X