Get Updates
Get notified of breaking news, exclusive insights, and must-see stories!

ಕ್ರೈಂ ರೌಂಡಪ್: ಸಿಗರೇಟ್‌ಗಾಗಿ ವಿದೇಶಿ ಪ್ರಜೆ ಕೊಲೆ? ಬಾಲಕನನ್ನು ಕೊಂದು ಪಾಪಿ ತಂದೆ?

ಬೆಂಗಳೂರು, ಡಿ. 13: ನೈಜೀರಿಯಾ ಮೂಲದ ವಿಕ್ಟರ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಸಿಗರೇಟ್‌ಗಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂಬ ಹೇಳಿಕೆ ಅನುಮಾನ ಮೂಡಿಸಿದೆ. ಮಾತು ಬರಲ್ಲ ಎಂಬ ಕಾರಣಕ್ಕೆ ಹತ್ತು ವರ್ಷದ ಕಂದಮ್ಮನನ್ನು ಸಂಪಿಗೆ ಹಾಕಿ ಕೊಲೆ ಮಾಡಿದ ಪಾಪಿ ತಂದೆ ನೇಣು ಹಾಕಿಕೊಂಡು ಆತನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ಬೆಂಗಳೂರು ನಗರದ ಇಂದಿನ ಕ್ರೈಂ ರೌಂಡಪ್.

ಮಾತು ಬರಲ್ಲ ಅಂತ ಮಗುವಿನ ಹತ್ಯೆ ಮಾಡಿದ ತಂದೆ: ವಿಕಲಾ ಚೇತನ ಮಗು ಎಂಬ ಕಾರಣಕ್ಕೆ ಹತ್ತು ವರ್ಷದ ಕಂದಮ್ಮನನ್ನು ನೀರಿನ ಸಂಪಿಗೆ ಹಾಕಿ ಕೊಲೆ ಮಾಡಿದ ಪಾಪಿ ತಂದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಪಂಗಿರಾಮನಗರ ನಿವಾಸಿ ಸುರೇಶ್ ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಹತ್ತು ವರ್ಷದ ಗಂಡು ಮಗುವಿಗೆ ಮಾತು ಬರುತ್ತಿರಲಿಲ್ಲ. ಕಿವಿಯೂ ಕೇಳಿಸುತ್ತಿರಲಿಲ್ಲ. ಇದರಿಂದ ಸುರೇಶ್ ಮನನೊಂದಿದ್ದ. ಇದೇ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ಆಗುತ್ತಿತ್ತು. ಸೋಮವಾರ ಬೆಳಗ್ಗೆ ಪತ್ನಿ ನಿದ್ದೆ ಏಳುವ ಮೊದಲೇ ತನ್ನ ಮಗುವನ್ನು ನೀರಿನ ಸಂಪ್‌ಗೆ ಬಿಸಾಡಿ ಪರಾರಿಯಾಗಿದ್ದಾನೆ. ಬೆಳಗ್ಗೆ ಪತ್ನಿ ಎದ್ದು ನೋಡುವಷ್ಟರಲ್ಲಿ ಮಗ ಸಾವನ್ನಪ್ಪಿದ್ದಾನೆ, ಸುರೇಶ್ ಕಣ್ಮರೆಯಾಗಿದ್ದ. ಈ ಕುರಿತು ಎಸ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುರೇಶ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

Bengaluru Crime Roundup: Foreign Citizen Victor Murder case: Banasawadi police arrested Three Accused

ಇತ್ತ ಮಗುವನ್ನು ಕೊಂದ ಬಳಿಕ ಸುರೇಶ್ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ರೈಲ್ವೇ ಹಳಿ ಪಕ್ಕದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುರೇಶ್ ಮೃತ ದೇಹ ಸಿಕ್ಕಿದ ಕೂಡಲೇ ಎಸ್.ಅರ್. ನಗರ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಈ ವೇಳೆ ಮಗುವನ್ನು ಕೊಂದು ಸುರೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ನೈಜೀರಿಯಾ ಮೂಲದ ವಿಕ್ಟರ್ ಕೊಲೆ:

ನೈಜೀರಿಯಾ ಮೂಲದ ಪ್ರಜೆಯ ಕೊಲೆ ರಹಸ್ಯವನ್ನು ಪತ್ತೆ ಮಾಡಿರುವ ಬಾಣಸವಾಡಿ ಪೊಲೀಸರು ಮೂವರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಗರೇಟ್ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಕೊಲೆ ಮಾಡಿರುವ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೊಲೆ ಸಂಬಂಧ ನೀಲಕಂಠ, ಅರುಣ್, ಫಿಲಿಪ್ ರಾಜ್ ಬಂಧಿತ ಆರೋಪಿಗಳು. ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಜೀರಿಯಾ ಮೂಲದ ವಿಕ್ಟರ್ ಹತ್ತು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ. ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಹೀಗಾಗಿ ಇಲ್ಲಿನ ಪೌರತ್ವ ಪಡೆದುಕೊಂಡಿದ್ದ. ಇನ್ನು ನೈಜೀರಿಯಾ ಮೂಲದ ಸಂಘಟನೆಯನ್ನು ವಿಕ್ಟರ್ ಪ್ರತಿನಿಧಿಸುತ್ತಿದ್ದ ಎನ್ನಲಾಗಿದೆ. ಜೆ.ಸಿ. ನಗರದಲ್ಲಿ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಲಾಕಪ್ ಡೆತ್ ವೇಳೆ ಇದೇ ವಿಕ್ಟರ್ ನೇತೃತ್ವದಲ್ಲಿ ನೈಜೀರಿಯಾ ಮೂಲದ ಪ್ರಜೆಗಳು, ವಿದ್ಯಾರ್ಥಿಗಳು ಜಮಾವಣೆಯಾಗಿದ್ದರು ಎನ್ನಲಾಗಿದೆ.

ಭಾನುವಾರ ಕಮ್ಮನಹಳ್ಳಿ ರಸ್ತೆಯಲ್ಲಿ ನಡೆದಕೊಂಡು ಬರುತ್ತಿದ್ದ ವಿಕ್ಟರ್‌ನನ್ನು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಇರಿದು ಕೊಲೆ ಮಾಡಿದ್ದರು. ಸ್ಥಳದಲ್ಲಿಯೇ ವಿಕ್ಟರ್ ಸಾವನ್ನಪ್ಪಿದ್ದ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಘಟನೆ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ನೀಲಕಂಠ, ಅರುಣ್ ಮತ್ತು ಫಿಲಿಪ್ ರಾಜ್‌ನನ್ನು ಬಂಧಿಸಿದ್ದಾರೆ. ಬೀಡಿ ಸಿಗರೇಟು ವಿಚಾರವಾಗಿ ಜಗಳ ನಡೆದು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಹೌದು ಎನಿಸಿದರೂ ವಿಕ್ಟರ್ ಕೊಲೆ ಹಿಂದೆ ಲೋಕಲ್ ಗಾಂಜಾ ಮಾಫಿಯಾ ಇದೆಯಾ ಎಂಬ ಆರೋಪ ಕೇಳಿ ಬರುತ್ತಿದೆ.

Bengaluru Crime Roundup: Foreign Citizen Victor Murder case: Banasawadi police arrested Three Accused

ಬಾಣಸವಾಡಿ ಹೇಳಿಕೇಳಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಯ ಕೇಂದ್ರ, ಇದರ ಜತೆಗೆ ಮಾದಕ ನಶೆ ಡೀಲಿಂಗ್ ಸೆಂಟರ್ ಹೌದು. ರಾಮಮೂರ್ತಿನಗರ, ಟಿಸಿ ಪಾಳ್ಯ, ಬಾಣಸವಾಡಿ, ಕಮ್ಮನಹಳ್ಳಿಯಲ್ಲಿ ನೆಲೆಸಿರುವುದು ಬಹುತೇಕ ನೈಜೀರಿಯಾ ಪ್ರಜೆಗಳು. ಇನ್ನು ಡ್ರಗ್ ರಾಕೆಟ್ ಜಾಲಕ್ಕೆ ಬಂದರೆ, ಮಧ್ಯ ರಾತ್ರಿಯಲ್ಲೂ ಪೊಲೀಸರ ಕಣ್ಣು ತಪ್ಪಿಸಿ ಮಾದಕ ವಸ್ತು ಸಾಗಣೆ ಮಾಡುವ ಜಾಲ ದೊಡ್ಡದಿದೆ. ವಿಕ್ಟರ್ ಇಲ್ಲಿನ ಯುವತಿಯನ್ನು ಮದುವೆಯಾಗಿದ್ದರೂ, ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ಗಳಿಗೆ ಸಹಾಯ ಮಾಡುತ್ತಿದ್ದ. ನೈಜೀರಿಯಾ ಪ್ರಜೆಗಳು ಹಬ್ಬಿಸಿರುವ ಡ್ರಗ್ ಮಾರಾಟ ಜಾಲದ ಮೇಲೆ ಲೋಕಲ್ ರೌಡಿಗಳು ಕಣ್ಣು ಹಾಕಿದ್ದರು.

Recommended Video

      ರುದ್ರಾಕ್ಷಿ ಮಾಲೆ ಧರಿಸಿ ಕಾಲಭೈರವನನ್ನು ಪ್ರಾರ್ಥಿಸಿದ ಮೋದಿ:ಮೋದಿ ನೋಡಲು ಜನಸಾಗರ | Oneindia Kannada

      ವಿದೇಶಿ ಪ್ರಜೆಗಳ ಎಂಟ್ರಿಯಿಂದ ಲೋಕಲ್ ಗಾಂಜಾ ವಹಿವಾಟಿಗೆ ಹೊಡೆತ ಬಿದ್ದು, ಅದರ ಪ್ರತಿಕಾರಕ್ಕೆ ದುರುದ್ದೇಶ ಪೂರ್ವಕವಾಗಿ ವಿದೇಶಿ ಡ್ರಗ್ ಪೆಡ್ಲರ್‌ಗಳಲ್ಲಿ ಭೀತಿ ಹುಟ್ಟಿಸಲು ಲೋಕಲ್ ಗುಂಡಾಗಳು ಕೊಲೆ ಮಾಡಿಸಿದರೇ ಎಂಬ ಅನುಮಾನ ವ್ಯಕ್ತವಾಗಿದೆ. ರಸ್ತೆ ಬದಿ ನಡೆದುಕೊಂಡು ಹೋಗುವ ವಿದೇಶಿ ಪ್ರಜೆ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕೊಲೆ ಮಾಡುತ್ತಾರೆ ಎಂದರೆ ಅದನ್ನು ಸುಮ್ಮನೆ ಪರಿಗಣಿಸಲು ಸಾಧ್ಯವಿಲ್ಲ. ಇದರ ಹಿಂದೆ ಬಲವಾದ ಕಾರಣ ಇರಲೇಬೇಕು. ಸಿಗರೇಟು ಕಟ್ಟು ಕಥೆ ಎಂದೇ ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಗೆ ಬರಲಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+