ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂ.ಜಿ. ರಸ್ತೆಯಲ್ಲಿ ತಪ್ಪಿದ ಭಾರೀ ಅಗ್ನಿ ಅವಘಡ: ಐವರು ಪ್ರಾಣಾಪಾಯದಿಂದ ಪಾರು

|
Google Oneindia Kannada News

ಬೆಂಗಳೂರು, ಸೆ. 14: ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಾಗಿ ಅಶೋಕನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಜಯನಗರದ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ 22 ವರ್ಷ ವಯಸ್ಸಿನ ಯುವತಿ ಭಾನುವಾರ ಅಶೋಕ್ ನಗರದ ಲಾಂಗ್ ಫೋರ್ಡ್ ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಳು. ಅಕ್ಕಿತಿಮ್ಮನಹಳ್ಳಿಯ ಗಣೇಶ ದೇವಸ್ಥಾನ ಸಮೀಪ ಹೋಗುವಾಗ ಹಿಂಬದಿಯಿಂದ ಬಂದಿರುವ ಕಿರಾತಕನೊಬ್ಬ, ಯುವತಿಯನ್ನು ಸಾರ್ವಜನಿಕವಾಗಿ ತಬ್ಬಿಕೊಂಡಿದ್ದಾನೆ. ಅಲ್ಲದೇ ದೇಹದ ಅಂಗಾಂಗ ಹಿಡಿದುಕೊಂಡು ಹಾಡ ಹಗಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಯುವತಿ ಕಿರುಚಾಡಿದ್ದನ್ನು ನೋಡಿ ಸ್ಥಳೀಯರು ಸಹಾಯ ಮಾಡಿದ್ದಾರೆ. ಅಷ್ಟರಲ್ಲಿ ಪುಂಡ ಪರಾರಿಯಾಗಿದ್ದಾನೆ.

ಯುವತಿ ಹೇಳಿಕೆ: ಘಟನೆ ಸಂಬಂಧ ಯುವತಿ ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿ ಪತ್ತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ ಸಾರ್ವಜನಿಕವಾಗಿ ಹಾಡ ಹಗಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಆರೋಪಿಯ ನಡೆದುಕೊಂಡು ಹೋಗುವ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ಶೋಧ ನಡೆಸಲಾಗುತ್ತದೆ. ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Bengaluru crime roundup: Five people have escaped from fire accident

ಅಗ್ನಿ ಅವಘಡದಲ್ಲಿ ಐವರು ಪಾರು: ಎಂ.ಜಿ ರಸ್ತೆಯ ಅಜೆಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಿಂದ ಐವರು ಬಚಾವ್ ಆಗಿದ್ದಾರೆ. ನಾಗೇಶ್, ಮಹೇಂದ್ರ , ಸತ್ಯ ಪ್ರಕಾಶ್, ದಿನೇಶ್ ಹಾಗೂ ಅಭಿಷೇಕ್ ಪ್ರಾಣಾಪಾಯದಿಂದ ಪಾರಾಗಿದ್ದು ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಅವಘಡದಲ್ಲಿ ಆಟೋ ಮತ್ತು ಜೀಪ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಹೋಟೆಲ್‌ನ ಪೀಠೋಪಕರಣ ಸುಟ್ಟು ಕರಕಲಾಗಿದೆ.

Bengaluru crime roundup: Five people have escaped from fire accident

ಕಿಟಕಿಯಿಂದ ಜಿಗಿದು ಜೀವ ರಕ್ಷಣೆ: ಹೋಟೆಲ್‌ನ ಎರಡನೇ ಮಹಡಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ದಟ್ಟ ಹೊಗೆಗೆ ಉಸಿರಾಡಲು ಆಗದೇ ಎರಡನೇ ಮಹಡಿಯಿಂದ ಜಿಗಿದು ಜೀವ ರಕ್ಷಣೆ ಮಾಡಿಕೊಂಡಿದ್ದಾರೆ. ಓರ್ವ ಕಿಟಕಿ ಮೂಲಕ ಕೆಳಗೆ ಜಂಪ್ ಮಾಡಿ ಪ್ರಾಣ ರಕ್ಷಣೆ ಮಾಡಿಕೊಂಡಿರುವುದಾಗಿ ಅಗ್ನಿ ಶಾಮಕ ಪೊಲೀಸರು ತಿಳಿಸಿದ್ದಾರೆ.

Bengaluru crime roundup: Five people have escaped from fire accident


ದೊಡ್ಡ ಅವಘಡ ಮಿಸ್: ಅಜೆಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಯಾರೂ ತಂಗಿರಲಿಲ್ಲ. ಹೋಟೆಲ್ ಕಟ್ಟಡ ನವೀಕರಣವಾಗುತ್ತಿರುವ ಕಾರಣ ಯಾರೂ ಇರಲಿಲ್ಲ. ಕಟ್ಟಡ ಮಾಲೀಕರು ಆಪ್ತರು ಇದ್ದರು. ಹೋಟೆಲ್ ಅಜೆಂತಾ ಟ್ರಿನಿಟಿ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಇತ್ತು. ಅಗ್ನಿ ಶಾಮಕ ಸಿಬ್ಬಂದಿ ಸ್ವಲ್ಪ ಯಾಮಾರಿದ್ರೂ ಪೆಟ್ರೋಲ್ ಬಂಕ್ ಸ್ಫೋಟಿಸುತ್ತಿತ್ತು. ಬೆಂಕಿ ಎಲ್ಲೂ ಹರಡದಂತೆ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪೆಟ್ರೋಲ್ ಬಂಕ್‌ಗೆ ವ್ಯಾಪಿಸುತ್ತಿದ್ದ ಬೆಂಕಿ ನಂದಿಸದೇ ಹೋಗಿದ್ದಲ್ಲಿ ಅನೇಕಾ ಮನೆಗಳಿಗೆ ಅವಘಡ ಆಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

Bengaluru crime roundup: Five people have escaped from fire accident

ಹೋಟೆಲ್ ಬಂದ್ ಆಗಿತ್ತು: ಅಜೆಂತಾ ಟ್ರಿನಿಟಿ ಹೋಟೆಲ್ ನವೀಕರಣ ಹಿನ್ನೆಲೆಯಲ್ಲಿ ರೂಮ್ ಬುಕ್ಕಿಂಗ್‌ನ್ನು ರದ್ದು ಮಾಡಲಾಗಿತ್ತು. ಹೋಟೆಲ್ ಮಾಲೀಕರು ಸೂಚನೆ ನಿಡಿದ ಮೇರೆಗೆ ಅವರ ಆಪ್ತ ಸ್ನೇಹಿತರಿಗೆ ಮಾತ್ರ ರೂಮ್ ನೀಡಲಾಗಿತ್ತು. ಹೋಟೆಲ್ ಐವರು ಸಿಬ್ಬಂದಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಈ ವೇಳೆ ಪಾರ್ಕಿಂಗ್ ಸಮೀಪ ನಿಲ್ಲಿಸಿದ್ದ ಕಾರು ಸ್ಫೋಟಿಸಿ ಬೆಂಕಿ ಕಾಣಿಸಿಕೊಂಡಿದೆ. ಬುಲೆರೋ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಿಂದಲೇ ಅವಘಡ ಸಂಭವಿಸಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
An incident of sexual harassment of a young girl by a stranger, Five people have escaped from fire accident in MG Road in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X