ನೆಲಮಂಗಲದಲ್ಲಿ ಎಂಎಸ್ಐಎಲ್ ಮದ್ಯ ಮಳಿಗೆಗೆ ಖನ್ನ: ಹಣ ದೋಚಿ ಎಸ್ಪೇಪ್

ಬೆಂಗಳೂರು, ಜ. 12: ನೆಲಮಂಗಲದಲ್ಲಿ ಎಂಎಸ್ಐಎಲ್ ಶೆಟರ್ ಮುರಿದು ಮದ್ಯ ಮತ್ತು ನಗದು ಕಳ್ಳತನ. ಯಲಹಂಕ ರೈಲ್ವೇ ಬ್ರಿಡ್ಜ್ ಸಮೀಪ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವು. ಆನೇಕಲ್‌ನಲ್ಲಿ ದಿನಕ್ಕೆ ಐದು ಬೈಕ್ ಕಳ್ಳತನ, ಸಚಿವ ಎಸ್. ಟಿ. ಸೋಮಶೇಖರ್ ಪುತ್ರ ನಿಶಾಂತ್ ಬ್ಲಾಕ್ ಮೇಲ್ ಪ್ರಕರಣದಲ್ಲಿ ಬಂಧಿತ ಅರೋಪಿ ರಾಹುಲ್ ಭಟ್ ಕಸ್ಟಡಿ ಅವಧಿ ಅಂತ್ಯ. ಇವು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ಎಂಎಸ್ಐಎಲ್ ಮಳಿಗೆ ಬಿಡದ ಖದೀಮರು:

ನೆಲಮಂಗಲ ತಾಲೂಕಿನ ಅಮಾನಿಕೆರೆಯಲ್ಲಿ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ಶೆಟರ್ ಮುರಿದು ಎರಡು ಲಕ್ಷ ರೂ. ಮೌಲ್ಯದ ಮದ್ಯ ಮತ್ತು 30 ಸಾವಿರ ನಗದು ಹಣ ದೋಚಿರುವ ಘಟನೆ ನಡೆದಿದೆ.

ಅಮಾನಿಕೆರೆಯಲ್ಲಿರುವ ಎಂಎಸ್ಐಎಲ್ ಮಳಿಗೆಗೆ ನುಗ್ಗಿರುವ ಖದೀಮರು ಸಿಸಿಟಿವಿ ಡಿವಿಆರ್ ಕೂಡ ಕದ್ದೊಯ್ದಿದ್ದಾರೆ. ಕಳ್ಳತನ ಮಾಡುವ ಮುನ್ನ ಕೈಗಳಿಗೆ ಹ್ಯಾಂಡ್ ಗ್ಲೌಸ್ ಧರಿಸಿದ್ದು, ಪೊಲೀಸರಿಗೆ ಸುಳಿವು ಸಿಗದಂತೆ ಮದ್ಯದ ಅಂಗಡಿಯನ್ನು ಉಡೀಸ್ ಮಾಡಿದ್ದಾರೆ. ಬೆಳಗ್ಗೆ ಹೋಗಿ ನೋಡಿದಾಗ ಕಳ್ಳತನ ಅಗಿರುವುದು ಬೆಳಕಿಗೆ ಬಂದಿದ್ದು, ಅಬಕಾರಿ ಪೊಲೀಸರು ಮತ್ತು ತ್ಯಾಮಗುಂಡ್ಲು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೇಸು ದಾಖಲಿಸಿಕೊಂಡು ಅರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Bengaluru Crime News Roundup (12 Jan 2022) : Liquor, Cash Stolen from MSIL Shop, Young Girl Dies in Accident

ಅಪಘಾತದಲ್ಲಿ ಯುವತಿ ಸಾವು:

ಯಲಹಂಕ ಸಮೀಪದ ರೈಲ್ವೇ ಬ್ರಿಡ್ಜ್ ಬಳಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು 25 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಗಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ಬಂದ ದ್ವಿಚಕ್ರ ವಾಹನ ಯುವತಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಯುವತಿ ಸಾವನ್ನಪ್ಪಿದ್ದು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಲಹಂಕ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆನೇಕಲ್ ನಲ್ಲಿ ಬೈಕ್ ಗಳ ಸರಣಿ ಕಳವು :

ಆನೇಕಲ್ ಪಟ್ಟಣದಲ್ಲಿ ಸರಣಿ ಬೈಕ್ ಗಳು ಕಳ್ಳತನವಾಗುತ್ತಿವೆ. ಕಳೆದ ಒಂದು ವಾರದಲ್ಲಿ ಐದು ಬೈಕ್ ಕಳ್ಳತನ ಆಗಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಬೈಕ್ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ. ರತ್ರಿ ಸಮಯದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದು, ಪೊಲೀಸರಿಗೆ ತಲೆ ಬಿಸಿ ಉಂಟಾಗಿದೆ. ಸರಣಿ ಬೈಕ್ ಕಳ್ಳತನ ಪ್ರಕರಣಗಳಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕೈಗರಿಕಾ ಪ್ರದೇಶ ಇರುವ ಕಾರಣ ನಿಲ್ಲಿಸಿದ ಬೈಕ್ ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಈ ಕುರಿತು ಸರಣಿ ಪ್ರಕರಣಗಳು ದಾಖಲಾಗುತ್ತಿವೆ.

ರಾಹುಲ್ ಭಟ್ ಪೊಲೀಸ್ ಕಸ್ಟಡಿ ಅಂತ್ಯ:

ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಅವರ ಪುತ್ರ ರಾಹುಲ್ ಭಟ್ ಪೊಲೀಸ್ ಕಸ್ಟಡಿ ಜ. 12 ಕ್ಕೆ ಅಂತ್ಯವಾಗಲಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಜ. 8 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ರಾಹುಲ್ ಭಟ್ ನನ್ನು ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದರು.

ವಿಚಾರಣೆ ವೇಳೆ ನನಗೆ ಏನೂ ಗೊತ್ತೇ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ತೆ ರಾಹುಲ್ ಭಟ್ ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Recommended Video

      ಪ್ರೊ ಕಬ್ಬಡಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದೆ ಈ ತಂಡ ! | Oneindia Kannada

      ಇಂಡಿ ಶಾಸಕರ ಪುತ್ರಿಯಿಂದ ಇಂಗ್ಲೆಡ್ ಸಿಮ್ ಒಟಿಪಿ ಪಡೆದಿದ್ದ ರಾಹುಲ್ ಭಟ್ ನಿಶಾಂತ್ ಗೆ ಸಂಬಂಧಿಸಿದ ವಿಡಿಯೋ ಕಳುಹಿಸಿದ್ದಾನೆ. ಇಂಡಿ ಶಾಸಕರ ಪುತ್ರಿಯ ಹೆಸರಿನಲ್ಲಿರುವ ಸಿಮ್ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಆ ಬಳಿಕ ಯುವತಿಯ ಸ್ನೇಹಿತ ರಾಕೇಶ್ ಅಪ್ಪಣ್ಣ ಅವರನ್ನು ವಿಚಾರಣೆ ನಡೆಸಿ ರಾಹುಲ್ ಭಟ್ ಬಗ್ಗೆ ಮಾಹಿತಿ ಪಡೆದಿದ್ದರು. ಅಷ್ಟರಲ್ಲಿ ರಾಹುಲ್ ಭಟ್ ದುಬೈಗೆ ತೆರಳಿದ್ದ. ದುಬೈನಿಂದ ಏರ್‌ಪೋರ್ಟ್ ಗೆ ಬರುವ ವೇಳೆ ಸಿಸಿಬಿ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಇಮಿಗ್ರೇಷನ್ ಅಧಿಕಾರಿಗಳು ರಾಹುಲ್ ಭಟ್‌ನನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ಸಿಸಿಬಿ ಪೊಲೀಸರು ರಾಹುಲ್ ಭಟ್ ನನ್ನು ವಿಚಾರಣೆಗೆ ಒಳಪಡಿಸಿದ್ದರು. ಕಳೆದ ಐದು ದಿನಗಳಿಂದ ವಿಚಾರಣೆ ನಡೆಸಿದ್ದು, ಪ್ರಕರಣ ಕುರಿತು ಯಾವುದೇ ಸಂಗತಿ ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ ಮತ್ತೊಮ್ಮೆ ರಾಹುಲ್ ಭಟ್ ನನ್ನು ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+