ಐಪಿಎಲ್ 7 : ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಬೆಂಗಳೂರು, ಜೂ.3: ಕಿತ್ತಳೆ ಟೋಪಿ ನಿಗೂಢತೆ ಕಳಚಿದ ಕೊಡಗಿನ ಕುವರ ರಾಬಿನ್ ಉತ್ತಪ್ಪ ಆರೇಂಜ್ ಕ್ಯಾಪ್ ಧರಿಸಿ ಐಪಿಎಲ್ 7ರಲ್ಲಿ ಹೊಸ ಸಾಧನೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಬೆಂಗಳೂರಿಗರು ಭಾನುವಾರ ನಡೆದ ಐಪಿಎಲ್ 7 ಫೈನಲ್ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಕರ್ನಾಟಕದ ಆಟಗಾರರಿಗೆ ಈ ವರ್ಷ ನಾಲ್ಕು ಪ್ರಶಸ್ತಿ ಗೆದ್ದ ಸಂಭ್ರಮ ಮನೆ ಮಾಡಿದೆ.
ಫೈನಲ್ ತನಕ ವೀರಾವೇಷದ ಹೋರಾಟ ತೋರಿದ ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕಿಂಗ್ ಖಾನ್ ಶಾರುಖ್ ರಿಂದ ಕೂಡಾ ಪ್ರಶಂಸೆ ಸಿಕ್ಕಿದೆ. ಎರಡನೇ ಬಾರಿ ಐಪಿಎಲ್ ಕಪ್ ಗೆದ್ದ ಕೋಲ್ಕತ್ತಾ ತಂಡದ ಆಟಗಾರರಿಗೆ ಮಂಗಳವಾರ ಕೋಲ್ಕತ್ತಾದಲ್ಲಿ ಅಭಿನಂದನೆ ಸಮಾರಂಭ ಏರ್ಪಾಟಾಗಿದೆ.[ಶ್ರೇಷ್ಠ XI ಒನ್ ಇಂಡಿಯಾ ಆಯ್ಕೆ]
ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ಇಂಡಿಯನ್ ಪ್ರಿಮಿಯರ್ ಲೀಗ್ ಹಣದ ಹೊಳೆಯನ್ನು ಹರಿಸುವುದು ಸುಳ್ಳಲ್ಲ. ಇದೇ ಕಾರಣಕ್ಕೋ ಏನೋ ಕೆಲ ಆಟಗಾರರು ದೇಶಕ್ಕಿಂತ ಕ್ಲಬ್ ಪರವೇ ಆಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಅದೇನೆ ಇರಲಿ ಯುವ ಆಟಗಾರರಿಗೆ ಈ ಬಾರಿಯ ಐಪಿಎಲ್ ಒಳ್ಳೆ ಅವಕಾಶ ನೀಡಿತ್ತು.

ಐಪಿಎಲ್ 7 ಟೂರ್ನಿಯ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ :
ಚಾಂಪಿಯನ್ಸ್: ಕೋಲ್ಕತ್ತಾ ನೈಟ್ ರೈಡರ್ಸ್, ಶಾರುಖ್ ಖಾನ್ ಸಹ ಒಡೆತನ
ರನ್ನರ್ ಅಪ್: ಕಿಂಗ್ಸ್ XI ಪಂಜಾಬ್, ಪ್ರೀತಿ ಜಿಂಟಾ ಸಹ ಒಡೆತನ
ಚಾಂಪಿಯನ್ ತಂಡಕ್ಕೆ ಸಿಕ್ಕ ನಗದು ಬಹುಮಾನದ ಮೊತ್ತ: 15 ಕೋಟಿ ರು.
ಎರಡನೇ ಸ್ಥಾನ ಪಡೆದ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ: 10 ಕೋಟಿ ರು
ಆರೇಂಜ್ ಕ್ಯಾಪ್(ಹೆಚ್ಚು ರನ್ ಗಳಿಕೆ) : ರಾಬಿನ್ ಉತ್ತಪ್ಪ(ಕೆಕೆಆರ್, 660 ರನ್)
ಪರ್ಪಲ್ ಕ್ಯಾಪ್ (ಹೆಚ್ಚು ವಿಕೆಟ್ ಗಳಿಕೆ): ಮೋಹಿತ್ ಶರ್ಮ (ಸಿಎಸ್ ಕೆ, 23 ವಿಕೆಟ್)
ಶ್ರೇಷ್ಠ ಮೌಲ್ಯಯುತ ಆಟಗಾರ : ಗ್ಲೆನ್ ಮ್ಯಾಕ್ಸ್ ವೆಲ್(KXIP, 286 ಅಂಕಗಳು)
ಫೇರ್ ಪ್ಲೇ ಪ್ರಶಸ್ತಿ : ಚೆನ್ನೈ ಸೂಪರ್ ಕಿಂಗ್ಸ್
ಉದಯೋನ್ಮುಖ ಆಟಗಾರ: ಅಕ್ಷರ್ ಪಟೇಲ್ (KXIP, 17 ವಿಕೆಟ್)
ಅತಿ ಹೆಚ್ಚು ಸಿಕ್ಸರ್ : ಮ್ಯಾಕ್ಸ್ ವೆಲ್ (36)
ಅತಿ ಹೆಚ್ಚು ಬೌಂಡರಿ : ರಾಬಿನ್ ಉತ್ತಪ್ಪ (74)
ಕ್ಯಾಚ್ ಆಫ್ ದಿ ಟೂರ್ನಮೆಂಟ್ : ಕೀರಾನ್ ಪೊಲ್ಲಾರ್ಡ್ (ಮುಂಬೈ ಇಂಡಿಯನ್ಸ್)
ಮ್ಯಾನ್ ಆಫ್ ದಿ ಫೈನಲ್ : ಮನೀಶ್ ಪಾಂಡೆ (ಕೆಕೆಆರ್)












Click it and Unblock the Notifications