ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಕಾಮಗಾರಿ; 40 ಅಡಿ ಎತ್ತರದಿಂದ ಕುಸಿದು ಬಿದ್ದ ಕ್ರೇನ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24; ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. 40 ಅಡಿ ಎತ್ತರದಿಂದ ಕ್ರೇನ್ ಕುಸಿದು ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ.

ಭಾನುವಾರ ಮುಂಜಾನೆ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಕೆಲಸ ಮಾಡುವಾಗಲೇ ಕ್ರೇನ್ ಕುಸಿದಿದೆ. ಭಾನುವಾರ ಆಗಿದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಆದ್ದರಿಂದ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ.

'ಊರ್ಜಾ' ಬಳಿಕ ಮೆಟ್ರೋ ಸುರಂಗ ಕೊರೆದು ಹೊರಬಂದ 'ವಿಂದ್ಯಾ' 'ಊರ್ಜಾ' ಬಳಿಕ ಮೆಟ್ರೋ ಸುರಂಗ ಕೊರೆದು ಹೊರಬಂದ 'ವಿಂದ್ಯಾ'

ಮೆಟ್ರೋ ಸೆಗ್ಮೆಂಟ್ ಜೋಡಣೆ ಮಾಡುತ್ತಿದ್ದ ಕ್ರೇನ್ ಅರ್ಧಕ್ಕೆ ತುಂಡಾಗಿದ್ದು ಸುಮಾರು 40 ಅಡಿ ಎತ್ತರಿಂದ ಕೇನ್ ಕೆಳಗೆ ಉರುಳಿದೆ. ಈ ಸಮಯದಲ್ಲಿ ಕೆಲಸ ಮಾಡುತ್ತದ್ದ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದರು. ಈ ಘಟನೆ ಹಲವಾರು ಗಂಟೆಗಳ ಕಾಲ ನಿರ್ಮಾಣ ಸ್ಥಳದಲ್ಲಿ ಆತಂಕ ಮೂಡಿಸಿತ್ತು.

ಅಕ್ಟೋಬರ್; ನಮ್ಮ ಮೆಟ್ರೋ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯಅಕ್ಟೋಬರ್; ನಮ್ಮ ಮೆಟ್ರೋ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯ

Crane Collapse

ಸಿಲ್ಕ್ ಬೋರ್ಡ್-ಕೆ. ಆರ್. ಪುರಂ ಮಾರ್ಗದ ಕಾಮಗಾರಿ ವೇಳೆ ಈ ಘಟನೆ ನಡೆದಿದೆ. ಲಾಂಚಿಂಗ್ ಗಾರ್ಡ್ ಎಂಬ ಮೆಷಿನ್ ಅರ್ಧಕ್ಕೆ ತುಂಡಾಗಿ ಕೆಳಕ್ಕೆ ಕುಸಿದಿದೆ. ಸರಿಯಾದ ಸಮಯಕ್ಕೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?

ಘಟನೆ ಬಗ್ಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್ ಪ್ರತಿಕ್ರಿಯೆ ನೀಡಿದ್ದಾರೆ, "ಫೇಸ್ 2 ಕಾಮಗಾರಿ ವೇಳೆ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ನಾಲ್ಕು ಲಾಂಚರ್‌ಗಳ ಮೂಲಕ ಕಾಮಗಾರಿ ಕೈಗೊಳ್ಳಲಾಗಿತ್ತು" ಎಂದರು.

"ಘಟನೆ ಕುರಿತು ತನಿಖೆ ನಡೆಸಲು ಸೂಚಿಸಲಾಗಿದೆ. ಕಟ್ ಆಗಿರುವ ಲಾಂಚರ್ ಮತ್ತೆ ಬಳಕೆ ಮಾಡಲು ಸಾಧ್ಯವಿಲ್ಲ. ಈ ಘಟನೆಯಿಂದ ಕಾಮಗಾರಿ 15 ದಿನ ವಿಳಂಬವಾಗುವ ಸಾಧ್ಯತೆ ಇದೆ" ಎಂದು ಹೇಳಿದರು.

ಸಿಲ್ಕ್ ಬೋರ್ಡ್-ಕೆ. ಆರ್. ಪುರಂ ಮಾರ್ಗ; ನಮ್ಮ ಮೆಟ್ರೋ ಯೋಜನೆಯ ಫೇಸ್ 2ಎ ಯೋಜನೆಯಡಿ ಸಿಲ್ಕ್ ಬೋರ್ಡ್-ಕೆ. ಆರ್. ಪುರಂ ನಡುವೆ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. 19.45 ಕಿ. ಮಿ. ಮಾರ್ಗವಿದಾಗಿದೆ. ಇದರ ಯೋಜನಾ ವೆಚ್ಚ 4202 ಕೋಟಿ ರೂ.ಗಳು.

ಈ ಮಾರ್ಗದಲ್ಲಿ ಕೆ. ಆರ್. ಪುರಂ, ಮಹದೇವಪುರ, ಡಿಆರ್‌ಡಿಓ ಸ್ಪೋರ್ಟ್ ಕಾಂಪ್ಲೆಕ್ಸ್, ದೊಡ್ಡಾನೆಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್. ಎಸ್. ಆರ್. ಲೇಔಟ್, ಸಿಲ್ಕ್ ಬೋರ್ಡ್ ನಿಲ್ದಾಣಗಳು ಬರುತ್ತವೆ. ಕೆ. ಆರ್. ಪುರಂ ಮತ್ತು ಸಿಲ್ಕ್ ಬೋರ್ಡ್ ಇಂಟರ್ ಚೇಂಜ್ ನಿಲ್ದಾಣಗಳಿವೆ.

ಐಟಿ ಕಂಪನಿಗಳೇ ಹೆಚ್ಚಾಗಿರುವ ಮಾರ್ಗದಲ್ಲಿ ಸಾಗುವ ಮಾರ್ಗವಿದಾಗಿದೆ. ಟೆಂಡರ್ ಮತ್ತು ಮರು ಟೆಂಡರ್ ಕಾರಣದಿಂದಾಗಿ ಸಿಲ್ಕ್ ಬೋರ್ಡ್-ಕೆ. ಆರ್. ಪುರಂ ಮಾರ್ಗದ ಕಾಮಗಾರಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.

ಬಾವಿ ಪತ್ತೆಯಾಗಿತ್ತು; ಸೆಪ್ಟೆಂಬರ್ 30ರಂದು 'ಭದ್ರ' ಟಿಬಿಎಂಯಂತ್ರ ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆಯುವಾಗ ಹಳೆಯ ಬಾವಿ ಪತ್ತೆಯಾಗಿತ್ತು. ಕಟ್ಟಡದ ಕೆಲಭಾಗದಲ್ಲಿ ಬಾವಿ ಪತ್ತೆಯಾದ ಕಾರಣ ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿತ್ತು.

ಬೆಂಗಳೂರು ನಗರದಲ್ಲಿ ಗೊಟ್ಟಿಗೆರೆ-ನಾಗವಾರ ನಡುವಿನ ರೀಚ್-6 ಮಾರ್ಗ, ಡೇರಿ ವೃತ್ತದಿಂದ ನಾಗವಾರ ನಡುವೆ 13.9 ಕಿ. ಮೀ. ಸುರಂಗ ಮಾರ್ಗ ಸೇರಿದಂತೆ ವಿವಿಧ ಮಾರ್ಗಗಳ ಕಾಮಗಾರಿ ನಡೆಯುತ್ತಿದೆ.

Recommended Video

ಛೇ!!ಟೀಮ್ ಇಂಡಿಯಾ ಸೋತಿದ್ದಕ್ಕೆ ಪಾಕಿಸ್ತಾನ ಇಷ್ಟು ಕೆಳಮಟ್ಟಕ್ಕೆ ಇಳಿಬಾರ್ದಿತ್ತು | Oneindia Kannada

ಅಕ್ಟೋಬರ್ 20ಕ್ಕೆ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸೇವೆ ಆರಂಭವಾಗಿ ಬರೋಬ್ಬರಿ 10 ವರ್ಷಗಳಾಗಿವೆ. 2011ರ ಅಕ್ಟೋಬರ್ 20 ರಿಂದ ಇಲ್ಲಿಯವರೆಗೆ 60 ಕೋಟಿ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹಸಿರು ಮತ್ತು ನೇರಳೆ ಸೇರಿದಂತೆ ಒಟ್ಟು ಎರಡು ಮಾರ್ಗದಲ್ಲಿ ಪ್ರಸ್ತುತ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ.

English summary
Crane collapsed during Namma metro work at BTM Layout, Bengaluru. No one injured in the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X