ಕ್ರಾಫ್ಟ್ಸ್ ವಿಲ್ಲಾದಿಂದ 'ಅನುಸ್ವರ' ಕಲೆಕ್ಷನ್ ಬಿಡುಗಡೆ, ಪ್ರಣೀತಾ ಮಿಂಚಿಂಗ್

ಬೆಂಗಳೂರು, 22: ಅತ್ಯಂತ ಜನಪ್ರಿಯ ಹಾಗೂ ಬೃಹತ್ ಆನ್ ಲೈನ್ ಎಥ್ನಿಕ್ ಮಳಿಗೆಯಾಗಿರುವ ಕ್ರಾಫ್ಟ್ಸ್ ವಿಲ್ಲಾ ಹಾಗೂ ಮಹಿಳೆಯರ ಉತ್ಪನ್ನಗಳ ಅತಿದೊಡ್ಡ ತಾಣವಾದ ಫೆಮಿನಾ ಜಂಟಿಯಾಗಿ ಕ್ರಾಫ್ಟ್ಸ್ ವಿಲ್ಲಾದ ಆಂತರಿಕ ಉತ್ಪನ್ನವಾದ "ಅನುಸ್ವರ'ವನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿವೆ.

ಕಲಾಂಕರಿ, ಇಕಾಟ್, ಬ್ಲಾಕ್ ಪ್ರಿಂಟ್ ಹಾಗೂ ಇಂಡಿಗೊಗಳಿಂದ ಪ್ರಭಾವಿತವಾಗಿ ಈ ಸಂಗ್ರಹ ರೂಪುಗೊಂಡಿದೆ. 'ಅನುಸ್ವರ'ದ ಅನಾವರಣವು ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಮಿಸು ಮಳಿಗೆಯಲ್ಲಿ ನಡೆಯಿತು. ಹಲವರ ಸಮ್ಮುಖದಲ್ಲಿ ಸಂಗ್ರಹ ಹೇಗೆ ಕಾಣಿಸುತ್ತದೆ ಎಂಬುದಕ್ಕೆ ಆಕರ್ಷಕ ಫ್ಯಾಷನ್ ಶೋ ಕೂಡ ನಡೆಯಿತು. ಈ ಶೋನಲ್ಲಿ ನಟಿ ಪ್ರಣಿತಾ ಸುಭಾಷ್ ವಿಶೇಷ ಆಕರ್ಷಣೆಯಾಗಿ ಕಂಡರು.[ಲ್ಯಾಕ್ಮೆ ಫ್ಯಾಷನ್ ಷೋಗೆ ಬಾಲಿವುಡ್ ನಟಿಯರ, ಮಾಡೆಲ್ ಗಳ ರಂಗು]

ಅನುಸ್ವರ ದೇಶದ ಬಹುಸಂಖ್ಯೆಯ ಕರಕುಶಲ ಕಲೆಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಇದರಿಂದಾಗಿ ಸಾಂಪ್ರದಾಯಿಕ ನೋಟ ಹಾಗೂ ಅನುಭವವನ್ನು ಒದಗಿಸುತ್ತದೆ. ಗ್ರಾಹಕರು ನಿತ್ಯ ಬಳಕೆ ಅಥವಾ ವಿಶೇಷ ಸಂದರ್ಭದಲ್ಲಿ ಬಳಸಬಹುದಾದ ಆಯ್ಕೆಗಳನ್ನು ಇಲ್ಲಿ ಪಡೆಯಬಹುದು.

ಇದರಲ್ಲಿ ನಾಲ್ಕು ಆಯ್ಕೆಯ ಸಂಗ್ರಹಗಳಿದ್ದು, ಇಕಾಟ್ ಇಲ್‍ಸ್ಟ್ರೇಷನ್, ಕಲಂಕರಿ ಟೇಲ್ಸ್, ಸಮ್ಮರ್ ಹ್ಯೂಸ್ ಹಾಗೂ ಇಂಡಿಗೊ ಇಂಪ್ರೆಷನ್ಸ್. ಈ ನಾಲ್ಕನೇ ಸಂಗ್ರಹವಾದ ಇಂಡಿಗೊ ಇಂಪ್ರೆಷನ್ಸ್ ಮಾತ್ರ 2017ರ ಮೇ ತಿಂಗಳಿಂದ ಮಾರಾಟಕ್ಕೆ ಲಭ್ಯವಿರಲಿದೆ.

ಈ ಉತ್ಪನ್ನವು ಮಹಿಳೆಯರಿಗೆ ವಿಶೇಷ ಅವಕಾಶ ಒದಗಿಸಿದ್ದು, ವಿಶಿಷ್ಟ ನೋಟವನ್ನು ಹೊಂದಲು ಹಾಗೂ ಗುಂಪಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಕಚೇರಿಯಿರಬಹುದು ಅಥವಾ ನೂರಾರು ಮಂದಿ ಸೇರಿರುವ ಕಾರ್ಯಕ್ರಮ ಇರಬಹುದು. ಮನ ಸೂರೆಗೊಳಿಸುವ ಫ್ಯಾಷನ್ ಲುಕ್ ಒದಗಿಸುತ್ತದೆ.

ನಿತ್ಯದ ಬಳಕೆಗೂ ಸೂಕ್ತ

ನಿತ್ಯದ ಬಳಕೆಗೂ ಸೂಕ್ತ

ಕೇವಲ ವಿವಾಹ, ಉತ್ಸವಗಳ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಈ ಮಾದರಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವುದಿಲ್ಲ. ನಿತ್ಯದ ಬಳಕೆಗೂ ಉಪಯೋಗಿಸುತ್ತಿದ್ದಾರೆ. ಆಧುನಿಕ ಭಾರತೀಯ ನಾರಿಯರ ಇಂದಿನ ಅಗತ್ಯವನ್ನು ಅನುಸ್ವರ ಯಶಸ್ವಿಯಾಗಿ ತುಂಬಿಕೊಡಲಿದೆ. ಇದರ ಜತೆ ಹೆಚ್ಚುವರಿಯಾಗಿ ಕರಕುಶಲ ಪ್ರೇರಿತ ಪಾರಂಪರಿಕ ಫ್ಯಾಷನ್ ಆಗಿ ಲಭಿಸುತ್ತಿದೆ.

ಕೈಗೆಟಕುವ ಬೆಲೆಯಲ್ಲಿ

ಕೈಗೆಟಕುವ ಬೆಲೆಯಲ್ಲಿ

ಅನುಸ್ವರ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಕ್ರಾಫ್ಟ್ಸ್ ವಿಲ್ಲಾದ ಮನಿಷ್ ಕಲ್ರಾ, "ಅನುಸ್ವರವು ಕ್ರಾಫ್ಟ್ಸ್ ವಿಲ್ಲಾದ ಮೂರನೇ ಆಂತರಿಕ ಉತ್ಪನ್ನ. ಈಗಾಗಲೇ ಅವನ್ಯ ಹಾಗೂ ಜರೋಂಖಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಅನುಸ್ವರದ ಮೂಲಕ ನಮ್ಮ ಗುರಿ ಏನೆಂದರೆ, ಉತ್ತಮ ಗುಣಮಟ್ಟ ಹಾಗೂ ಕೈಗೆಟುಕುವ ಬೆಲೆಯಲ್ಲಿ ವಿಶಿಷ್ಟ ವಿನ್ಯಾಸದ ಉಡುಪನ್ನು ನಮ್ಮ ಗ್ರಾಹಕರಿಗೆ ತಲುಪಿಸುವುದಾಗಿದೆ" ಎಂದರು.

ಕರಕುಶಲತೆ ಪ್ರೀತಿಸುವವರಿಗೆ ಸೂಕ್ತ

ಕರಕುಶಲತೆ ಪ್ರೀತಿಸುವವರಿಗೆ ಸೂಕ್ತ

ಈ ಉಡುಪು ವೃತ್ತಿನಿರತ ಮಹಿಳೆಯರಿಗೆ ಅದರಲ್ಲೂ ಸೌಮ್ಯ ಸ್ವಭಾವದವರಿಗೆ ಹೇಳಿ ಮಾಡಿಸಿದಂತಿದೆ. ಅಲ್ಲದೇ ಕಲೆ ಹಾಗೂ ಕರಕುಶಲತೆಯನ್ನು ಪ್ರೀತಿಸುವವರಿಗೆ ಸೂಕ್ತ. ಈ ಹೊಸ ಸರಣಿಯು ಹೆಚ್ಚಿನ ಆದಾಯವನ್ನು ತಂದುಕೊಡಲಿವೆ ಅಲ್ಲದೇ ದೀರ್ಘಾವಧಿ ನಮ್ಮ ಉತ್ಪನ್ನಕ್ಕೆ ಮೌಲ್ಯ ತಂದುಕೊಡಲಿವೆ ಎಂದರು.

ಕ್ಲಾಸಿ ಹಾಗೂ ಆಧುನಿಕ ರೂಪ

ಕ್ಲಾಸಿ ಹಾಗೂ ಆಧುನಿಕ ರೂಪ

ನಟಿ ಪ್ರಣಿತಾ ಸುಭಾಷ್ ಅನುಸ್ವರದ ಆಕರ್ಷಕ ಸಂಗ್ರಹಗಳ ವಿಧವನ್ನು ಪರಿಚಯಿಸಿದರು. ಹೊಸ ಉತ್ಪನ್ನವನ್ನು ಅನಾವರಣಗೊಳಿಸಿ ಮಾತನಾಡಿ, "ಫ್ಯಾಷನ್ ಶೈಲಿಗಳು ಇಂದು ಸಾಕಷ್ಟು ಆರಾಮದಾಯಕವಾಗುತ್ತಿವೆ. ನನಗೆ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಉಡುಪುಗಳನ್ನು ಧರಿಸುವುದು ಅಂದರೆ ತುಂಬಾ ಇಷ್ಟ. ಇಂದು ಅನಾವರಣಗೊಂಡ ಉಡುಪುಗಳು ಆಕರ್ಷಕ ಶೈಲಿಯಲ್ಲಿದ್ದು, ಕ್ಲಾಸಿ ಹಾಗೂ ಆಧುನಿಕ ರೂಪ ಹೊಂದಿವೆ' ಎಂದರು.

ಮುಕ್ತ ಮನಸ್ಸಿನ ಯುವ ಭಾರತೀಯ ಮಹಿಳೆಯರಿಗೆ

ಮುಕ್ತ ಮನಸ್ಸಿನ ಯುವ ಭಾರತೀಯ ಮಹಿಳೆಯರಿಗೆ

ಫೆಮಿನಾ ಸಂಪಾದಕಿ ಹಾಗೂ ಮುಖ್ಯ ಸಮುದಾಯ ಅಧಿಕಾರಿ ತಾನ್ಯಾ ಚೈತನ್ಯ ಮಾತನಾಡಿ, "ಫೆಮಿನಾವು ಮುಕ್ತ ಮನಸ್ಸಿನ ಯುವ ಭಾರತೀಯ ಮಹಿಳೆಯರನ್ನು ಆಕರ್ಷಿಸಿದೆ. ಸಾರಸಂಗ್ರಹಿತ ಸದಭಿರುಚಿ ಉಳ್ಳ ವಿಶಿಷ್ಟ ಶೈಲಿಯನ್ನು ಇಷ್ಟಪಡುವ ವರ್ಗವನ್ನು ಹೊಂದಿದೆ. ಪಾಶ್ಚಿಮಾತ್ಯ ಸಮೂಹದ ಪ್ರಭಾವದಿಂದಾಗಿ ಬಳಸುವ ಉಡುಗೆಗಳಿಗೆ ಹೇಗೆ ಮಹಿಳೆ ಫಿಟ್ ಆಗುತ್ತಾಳೋ ಹಾಗೆಯೇ ಈ ಪಾರಂಪರಿಕ ಉಡುಗೆಗೂ ಫಿಟ್ ಆಗುತ್ತಾಳೆ.

ಯೋಗ್ಯ ಹಾಗೂ ಟ್ರೆಂಡಿ

ಯೋಗ್ಯ ಹಾಗೂ ಟ್ರೆಂಡಿ

"ಕ್ರಾಫ್ಟ್ಸ್ ವಿಲ್ಲಾ ಜತೆ ನಮ್ಮ ಸಹಯೋಗ ಮಹಿಳೆಯರಿಗೆ ತಮ್ಮ ವಾರ್ಡ್ ರೋಬ್ ಅನ್ನು ಇನ್ನಷ್ಟು ಧರಿಸಲು ಯೋಗ್ಯ ಹಾಗೂ ಟ್ರೆಂಡಿಯಾಗಿ ಮಾರ್ಪಡಿಸಲಿದೆ. ಅದೂ ಸಾಂಪ್ರದಾಯಿಕ ಶೈಲಿಯಿಂದ ಅನ್ನುವುದು ವಿಶೇಷ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+