CoWIN: ಕೋವಿನ್ ಪೋರ್ಟ್‌ನಲ್ಲಿನ ನಾಗರಿಕರ ದತ್ತಾಂಶ ಸುರಕ್ಷಿತವಾಗಿದೆ: ಆರೋಗ್ಯ ಸಚಿವಾಲಯ ಸ್ಪಷ್ಟನೆ
ಬೆಂಗಳೂರು, ಜೂನ್ 12: ಸರ್ಕಾರಿ ನಿರ್ವಹಣೆಯಲ್ಲಿರುವ ಕೋವಿನ್ (CoWIN) ಪೋರ್ಟಲ್ನಲ್ಲಿನ ದೇಶದ ಉನ್ನತ ನಾಯಕರು ಸೇರಿದಂತೆ ನಾಗರಿಕರ ಆಧಾರ್, ಪ್ಯಾನ್ ಸೇರಿದಂತೆ ವೈಯಕ್ತಿಕ ಮಾಹಿತಿ ಟೆಲಿಗ್ರಾಮ್ ನಲ್ಲಿ ಲಭ್ಯವಾಗುವಂತೆ ಸೋರಿಕೆ ಮಾಡಲಾಗಿದೆ ಎಂದು ವರದಿ ಆಗಿತ್ತು. ಈ ಕುರಿತು ಕೇಂದ್ರ ಸರ್ಕಾರ ಸೋಮವಾರ ಪ್ರತಿಕ್ರಿಯಿಸಿದೆ.
ರಾಜಕೀಯ ನಾಯಕರು ಸೇರಿದಂತೆ ದೇಶದ ಪ್ರಜೆಗಳು ಸರ್ಕಾರ ಕೋವಿನ್ ಪೋರ್ಟ್‌ನಲ್ಲಿ ನೋಂದಣಿಯಾಗಿದ್ದರು. ಜನ ಪಡೆದ ಲಸಿಕೆ ಡೋಸ್, ಅವರ ಆಧಾರ್, ಪ್ಯಾನ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಗಳು ಟೆಲಿಗ್ರಾಮ್‌ನಲ್ಲಿ ಬಹಿರಂಗವಾಗಿದೆ ಎಂದು ವರದಿ ಆಗಿತ್ತು. ಇದೆಲ್ಲವು ಆಧಾರ ರಹಿತವಾಗಿದೆ. ಇದರಲ್ಲಿ ಹುರುಳಿಲ್ಲ ಎಂದು ತಿಳಿಸಿತಲ್ಲದೇ, ಕೋವಿನ್‌ಲ್ಲಿರುವ ಜನರ ಮಾಹಿತಿ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿದೆ.

ಟೆಲಿಗ್ರಾಮ್‌ನಲ್ಲಿ ಕೋವಿನ್ ನಲ್ಲಿ ನೋಂದಣಿಯಾದ ಜನರ ವೈಯಕ್ತಿಕ ಮಾಹಿತಿವುಳ್ಳ ಸ್ಕ್ರೀನ್ ಶಾಟ್ ಫೋಟೊ ಹರಿದಾಡಿದ್ದವು. ಟೆಲಿಗ್ರಾಮ್ ಬೊಟ್‌ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಸಂಖ್ಯೆ ನಮೂದಿಸಿದರೆ ಅವರ ಆಧಾರ್, ಪ್ಯಾನ್, ಲಸಿಕೆ ಡೋಸ್ ಪಡೆದರ ಮಾಹಿತಿಗಳು ಬಹಿರಂಗವಾಗುತ್ತಿದೆ. ಇದು ಕೋವಿನ್‌ನಲ್ಲಿರುವ ಮಾಹಿತಿ ಎಂದು ಪೋಸ್ಟ್‌ಗಳು ವೈರಲ್ ಆಗಿದ್ದವು.
ಈ ಮೂಲಕ ಲಸಿಕೆ ಹಾಕಿಸಿಕೊಂಡ ಫಲಾನುಭವಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಸರಳವಾಗಿ ರವಾನಿಸುವ ಮೂಲಕ ವೈಯಕ್ತಿಕ ಡೇಟಾವನ್ನು ಪಡೆಯಲು ಟೆಲಿಗ್ರಾಮ್ ಬೋಟ್ ಸಮರ್ಥವಾಗಿದೆ ಎಂದು ವರದಿಯಾಗಿದೆ. ಬಳಿಕ ಕೋವಿನ್ ಪೊರ್ಟಲ್‌ನಲ್ಲಿನ ಜನರ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿ ಚರ್ಚೆಗೆ ಬಂದಿತ್ತು. ಸದ್ಯ ಕೇಂದ್ರ ಸರ್ಕಾರ ಈ ಎಲ್ಲ ಆತಂಕ, ಅನುಮಾನಗಳಿಗೆ ಅಂತ್ಯ ಹಾಡಿದೆ.
𝗖𝗢𝗪𝗜𝗡 𝗗𝗮𝘁𝗮 𝗕𝗿𝗲𝗮𝗰𝗵 #CoWIN portal of Health Ministry @MoHFW_INDIA is Completely Safe with safeguards for Data Privacy.
— Ministry of Health (@MoHFW_INDIA) June 12, 2023
Adequate Security Measures are in place on Co-WIN portal, with Web Application Firewall, Anti-DDoS, SSL/TLS, regular vulnerability assessment,…
ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಪೋಸ್ಟ್‌ಗಳು, ಟೆಲಿಗ್ರಾಮ್ ಬೊಟ್‌ನ ಸ್ಕೀನ್ ಶಾಟ್‌ನಲ್ಲಿ ಮಾಹಿತಿ ಹಾಗೂ ಕೋವಿನ್‌ನಲ್ಲಿ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ನಮ್ಮ ಕೋವಿನ್ ಪೋರ್ಟಲ್‌ನಲ್ಲಿ ಮಾಹಿತಿ ಸುರಕ್ಷಿತವಾಗಿದೆ. ಡೇಟಾ ಸೋರಿಕೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಉನ್ನತ ನಾಯಕರ ಮಾಹಿತಿ ಸೋರಿಕೆ ವದಂತಿ
ಜನಸಾಮಾನ್ಯರ ಮಾಹಿತಿ ಜೊತೆಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಕೋವಿನ್ ಹೈಪವರ್ ಪ್ಯಾನೆಲ್‌ನ ಅಧ್ಯಕ್ಷ ರಾಮ್ ಸೇವಕ್ ಶರ್ಮಾ ಮತ್ತು ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ ಆಧಾರ್ ಪ್ಯಾನ್ ಮಾಹಿತಿ ಸಹ ಸೋರಿಕೆ ಆಗಿದೆ ಎಂದು ಸ್ಕ್ರೀನ್ ಶಾಟ್ ಫೋಟೊಗಳು ಓಡಾಡಿವೆ.
ನಾಗರಿಕರು ಮತ್ತು ಉನ್ನತ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಬಗ್ಗೆ ಪಶ್ಚಿಮ ಬಂಗಾಳದ ಟಿಎಂಸಿ ನಾಯಕರಾದ ಸಾಕೇತ್ ಗೋಖಲೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಡೇಟಾ ನಿಯಮ ಉಲ್ಲಂಘನೆಯಾಗಿದೆ. ಸರ್ಕಾರ ಜನರ ಮಾಹಿತಿ ಸಂರಕ್ಷಿಸಿ ಇಡಬೇಕು. ಅಲ್ಲಿಂದಲೇ ಮಾಹಿತಿ ಸೋರಿಕೆ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದರು.
ಸರ್ಕಾರದ ಕೋವಿನ್ ಪೋರ್ಟಲ್ ತಂತ್ರಜ್ಞಾನದ ಸಹಾಯದಿಂದ ಆಧುನಿಕ ಭದ್ರತೆ ಹೊಂದಿದೆ. ಈ ಕಾರಣದಿಂದ ಕೋವಿನ್ ಪೋರ್ಟ್‌ಲ್‌ನಿಂದ ಯಾರೊಬ್ಬರ ಮಾಹಿತಿ ಸಹ ಸೋರಿಕೆಯಾಗಲಿ, ಕಳ್ಳತನವಾಗಲಿ ಆಗಿಲ್ಲ ಎಂದು ಈ ಹಿಂದೊಮ್ಮೆ ಮಾಹಿತಿ ಸೋರಿಕೆ ಆರೋಪ ಕೇಳಿ ಬಂದಾಗ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications