ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Covid BF.7 Wave: ದೈನಂದಿದನ ಬೂಸ್ಟರ್ ಡೋಸ್ ವಿತರಣೆಯಲ್ಲಿ ಹೆಚ್ಚಳ: ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನಲ್ಲಿ ಕೊರೊನಾ ಅಲೆಯ ಭೀತಿ ಹೆಚ್ಚಾಗಿದ್ದು, ಜನರು ಜಾಗೃತರಾಗುತ್ತದ್ದಾರೆ. ಕೋವಿಡ್ ಬೂಸ್ಟರ್ ಡೋಸ್ (3) ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ನಗರದಲ್ಲಿ ಎರಡು ತಿಂಗಳ ನಂತರ ಮೊದಲ ಬಾರಿಗೆ ದೈನಂದಿನ ಕೋವಿಡ್ ಬೂಸ್ಟರ್ ಡೋಸ್‌ ನೀಡಿಕೆ ಸಂಖ್ಯೆಯು 1,000 ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ 9,000 ಡೋಸ್‌ಗಳನ್ನು ನೀಡಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ದೇಶ ಎಷ್ಟು ಸಿದ್ಧವಾಗಿದೆ? ಅಣಕು ಕಾರ್ಯಾಚರಣೆಯಲ್ಲಿ ಹೊರಬಿದ್ದ ಸತ್ಯಕೊರೊನಾ ವಿರುದ್ಧ ಹೋರಾಡಲು ದೇಶ ಎಷ್ಟು ಸಿದ್ಧವಾಗಿದೆ? ಅಣಕು ಕಾರ್ಯಾಚರಣೆಯಲ್ಲಿ ಹೊರಬಿದ್ದ ಸತ್ಯ

ಬಿಬಿಎಂಪಿ ಹಂಚಿಕೊಂಡ ಮಾಹಿತಿಯ ಪ್ರಕಾರ, 13.4 ಲಕ್ಷಕ್ಕೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಸ್ವೀಕರಿಸುವವರಲ್ಲಿ ಸುಮಾರು 1 ಲಕ್ಷ ಆರೋಗ್ಯ ಕಾರ್ಯಕರ್ತರು, 1.4 ಲಕ್ಷ ಮುಂಚೂಣಿ ಕಾರ್ಯಕರ್ತರು, 3.9 ಲಕ್ಷ ಹಿರಿಯ ನಾಗರಿಕರು ಮತ್ತು 18 ರಿಂದ 59 ವರ್ಷದೊಳಗಿನ 7 ಲಕ್ಷ ವಯಸ್ಕರು ಲಸಿಕೆ ಪಡೆದಿದ್ದಾರೆ.

Covid BF.7 Wave: Daily Booster Dose Distribution Has Increased In Bengaluru BBMP Said

ಶುಕ್ರವಾರ ಮತ್ತು ಸೋಮವಾರದ ನಡುವಿನ ನಾಲ್ಕು ದಿನದಲ್ಲಿ ನಗರದಲ್ಲಿ 9,138 ಡೋಸ್‌ಗಳನ್ನು ನೀಡಲಾಯಿತು. ಭಾನುವಾರವಷ್ಟೇ 4,044 ಡೋಸ್ ನೀಡಲಾಗಿದೆ. ಜುಲೈ 15 ಮತ್ತು ಸೆಪ್ಟೆಂಬರ್ 30ರ ನಡುವಿನ ಲಸಿಕಾಕರಣ ಡಿಮೆಯಾಯಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಮಾತ್ರವೇ ನಿತ್ಯ 1,000 ಡೋಸ್ ದಾಟಿತ್ತು ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎ.ಎಸ್.ಬಾಲಸುಂದರ್ ತಿಳಿಸಿದರು.

ನಿತ್ಯ 10ಸಾವಿರ ಬೂಸ್ಟರ್ ಡೋಸ್ ಪಡೆಯಬೇಕು

ಬೆಂಗಳೂರಿನಲ್ಲಿ ಡಿಸೆಂಬರ್ 19 ರಂದು ಕೇವಲ 28 ಜನರು ಮಾತ್ರ ಲಸಿಕೆ ತೆಗೆದುಕೊಂಡಿದ್ದರು. ಅದೇ ಡಿಸೆಂಬರ್ 22 ರಂದು ಲಸಿಕೆ ಪಡೆಯುವವರ ಸಂಖ್ಯೆ 319 ಕ್ಕೆ ಹೆಚ್ಚಾಯಿತು. ಜನರು ಕೋವಿಡ್ ಬೂಸ್ಟರ್ ಡೋಸ್ ಪಡೆಯುವಲ್ಲಿ ನಿರಾಸಕ್ತರಾಗಿದ್ದಾರೆ. ಹೀಗಾಗಿ ದೈನಂದಿನ ಕವರೇಜ್ 20 ರಿಂದ 350 ರ ನಡುವೆ ಇತ್ತು. ಇದೀಗ ಬಿಎಫ್.7 ಓಮಿಕ್ರಾನ್ ಉಪತಳಿ ಉಲ್ಬಣ ಮತ್ತು ಕೊರೊನಾ ಮತ್ತೊಂದು ಅಲೆಯ ಭಯ ಹೆಚ್ಚಾಗಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.

ಆದರೆ, ಆರೋಗ್ಯ ಇಲಾಖೆ ನಿರೀಕ್ಷೆ ಮತ್ತು ಸದ್ಯದ ಪರಿಸ್ಥಿತಿ ನೋಡಿದರೆ ಪ್ರತಿದಿನ ನೀಡಲಾಗುತ್ತಿರುವ ಬೂಸ್ಟರ್ ಡೋಸ್‌ಗ‌ಳ ಸಂಖ್ಯೆ ತೀರಾ ಕಡಿಮೆ ಎನ್ನಬಹದು. ಕಡಿಮೆ ಅವಧಿಯಲ್ಲಿ ನಗರದ ಒಟ್ಟು ಜನಸಂಖ್ಯೆ ಆಧಾರ ಪರಿಗಣಿಸಿದರೆ ನಿತ್ಯ ಕನಿಷ್ಠ 10,000 ಮಂದಿಗೆ ಬೂಸ್ಟರ್ ಡೋಸ್ ಪಡೆದರೆ ಈ ಸ್ಥಿತಿ ಉತ್ತಮ ಎನ್ನಬಹದು ಎಂದು ಬಿಬಿಎಂಪಿ ತಿಳಿಸಿದೆ.

Covid BF.7 Wave: Daily Booster Dose Distribution Has Increased In Bengaluru BBMP Said

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ತ್ರಿಲೋಕ್ ಚಂದ್ರ ಅವರು ಪ್ರತಿಕ್ರಿಯಿಸಿ, ಬಿಬಿಎಂಪಿಯು ಸದ್ಯ ದೈನಂದಿನ ಲಸಿಕಾಕರಣ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿದೆ. ಸುಮಾರು 1.2 ಲಕ್ಷ ಡೋಸ್‌ಗಳು ಎಕ್ಸಪೈರಿ ಜನವರಿ ಅಂತ್ಯದ ಕೊನೆಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

English summary
Covid BF.7 Wave: Daily booster dose distribution has increased in Bengaluru BBMP said Covid BF.7 Wave
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X