ಹೆಚ್ಚುತ್ತಿರುವ ಕೊರೊನಾ: ಬಿಬಿಎಂಪಿ ನೌಕರರಿಗೆ ರಜೆ ರದ್ದು
ಬೆಂಗಳೂರು, ಮೇ 22: ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಆತಂಕದಲ್ಲಿ ಬಿಬಿಎಂಪಿ ತನ್ನ ವ್ಯಾಪ್ತಿಯ ಎಲ್ಲ ನೌಕರರ ರಜೆ ರದ್ದು ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
Recommended Video
BMTC ಯಲ್ಲಿ ಓಡಾಡೋಕೆ ಈ ನಿಯಮ ಅನುಸರಿಸಲೇ ಬೇಕು..? | Rules & Regulation
ಮೇ 23 ರಿಂದ 25 ರವರೆಗೆ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ನೌಕರರು ಕೆಲಸ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸೋಮವಾರ ರಂಜಾನ್ ಪ್ರಯುಕ್ತ ಸಾರ್ವತ್ರಿಕ ರಜಾ ದಿನವೂ ನೌಕರರು ಕೆಲಸ ಮಾಡಬೇಕಾಗುತ್ತದೆ.
ಎಲ್ಲ ಸಿಬ್ಬಂದಿ ಮೂರು ದಿನ ಕೆಲಸ ಮಾಡುವುದಲ್ಲದೇ, ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಒಟ್ಟು 261 ಜನರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಇದರಲ್ಲಿ 132 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 9 ಜನ ಮೃತಪಟ್ಟಿದ್ದಾರೆ. 121 ಸಕ್ರಿಯ ಪ್ರಕರಣಗಳು ಕಂಡು ಬಂದಿವೆ.












Click it and Unblock the Notifications