ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮೃತ ದೇಹ ಹಸ್ತಾಂತರ ವೇಳೆ ಎಡವಟ್ಟು

|
Google Oneindia Kannada News

ಬೆಂಗಳೂರು, ಏಪ್ರಿಲ್ 19 : ಕೊರೋನಾ ಸೋಂಕಿಗೆ ಬಲಿಯಾದ ಇಬ್ಬರು ಮೃತ ದೇಹಗಳನ್ನು ಅದಲು ಬದಲು ಮಾಡಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮೃತ ದೇಹಗಳನ್ನು ಬೆಳಗ್ಗೆ ಸಂಬಂಧಿಕರಿಗೆ ವಹಿಸಿದ್ದಾರೆ. ಆದರೆ ಬಿಲ್‌ಗಳನ್ನು ಹಾಗೂ ಮೃತ ದೇಹ ಎರಡನ್ನು ಅದಲು ಬದಲು ಮಾಡಿ ಎಡವಟ್ಟು ಮಾಡಿದ್ದಾರೆ. ಪೋಷಕರು ಗಲಾಟೆ ನಡೆಸಿದ ಬಳಿಕ ಆಗಿರುವ ಪ್ರಮಾದವನ್ನು ತಪ್ಪಿಸಿ ಕ್ಷಮೆ ಕೇಳಿದ್ದಾರೆ.

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಲಕ್ಷ್ಮಮ್ಮ ಹಾಗೂ ಜಯಲಕ್ಷ್ಮಮ್ಮ ಎಂಬ ಇಬ್ಬರು ಮಹಿಳೆಯರು ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದರು. ದುರಾದೃಷ್ಟ ಇಬ್ಬರು ಮಹಿಳೆಯರೂ ಒಂದೇ ದಿನ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಎರಡು ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

ಆದರೆ, ಮೃತ ದೇಹಗಳು ಹಾಗೂ ಅವರಿಗೆ ಸಂಬಂಧಟ್ಟ ದಾಖಲೆಗಳು ಬದಲಾಗಿವೆ. ಸ್ವಲ್ಪ ದೂರಕ್ಕೆ ಹೋದ ಬಳಿಕ ಈ ವಿಷಯ ಗೊತ್ತಾಗಿ ಮೃತರ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಈ ಪ್ರಮಾದ ಆಗಿದ್ದು, ಬಳಿಕ ಸರಿ ಪಡಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಕಡೆಯಿಂದ ಆಗಿರುವ ಪ್ರಮಾದಕ್ಕೆ ಆಸ್ಪತ್ರೆ ಸಿಬ್ಬಂದಿ ಕ್ಷಮೆ ಕೇಳಿದ್ದಾರೆ.

Covid 19 Dead Body swapped: Rajarajeshwari hospital Doctors blunder

Recommended Video

'ಜನರು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರೆ, ಕಠಿಣ ಕ್ರಮದ ಅವಶ್ಯಕತೆ ಬರ್ತಿರಲಿಲ್ಲ' ಸಚಿವ ಸುಧಾಕರ್‌ | Oneindia Kannada

ಆನಂತರ ಸುಮ್ಮನಾಗಿ ಸಂಬಂಧಪಟ್ಟ ಮೃತ ದೇಹಗಳನ್ನು ಬದಲಿಸಿ ವಾರಸುದಾರರಿಗೆ ವಹಿಸಿದ್ದಾರೆ. ಕೊರೋನಾ ಎರಡನೇ ಭೀತಿ ಅಲೆ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಆಕ್ಸಿಜನ್ ಸಿಗುತ್ತಿಲ್ಲ. ಇಂಥ ಸಂಕಷ್ಟದಲ್ಲಿ ಇದೀಗ ಇಂತಹ ಅವಘಡಗಳು ಕೂಡ ಜರುಗಿರುವುದು ವಿಪರ್ಯಾಸ.

English summary
Doctors have blundered when they handed over the two dead bodies to parents, who died of coronary infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X