ಬೆಂಗಳೂರಿನ ಕೊವಿಡ್-19 ವಲಯಗಳ ಉಸ್ತುವಾರಿಗೆ 8 ಅಧಿಕಾರಿಗಳ ತಂಡ

ಬೆಂಗಳೂರು, ಮಾರ್ಚ್ 29: ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಬೆಂಗಳೂರಿನದ್ದೇ ಸಿಂಹಪಾಲಿದೆ. ಸಿಲಿಕಾನ್ ಸಿಟಿಯಲ್ಲಿ ಸೋಂಕಿತ ವಲಯಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಒಂದೊಂದು ವಲಯಕ್ಕೆ ಒಬ್ಬ ಐಎಎಸ್ ಅಧಿಕಾರಿ ನೇತೃತ್ವದ ತಂಡವನ್ನು ರಚಿಸಲಾಗಿದೆ.

ಬೆಂಗಳೂರಿನಲ್ಲಿ ಕೊವಿಡ್-19 ಸೋಂಕಿತ ವಲಯಗಳ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಕೊರೊನಾವೈರಸ್ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುವಂತೆ ಎಂಟು ವಲಯಗಳಿಗೆ ಎಂಟು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 22ರ ಸಬ್ ಸೆಕ್ಷನ್ 2(ಹೆಚ್) ರಡಿ ಮತ್ತು ಸೆಕ್ಷನ್ 24ರ (ಎ), (ಬಿ), (ಎಫ್), (ಹೆಚ್), (ಜೆ), (ಕೆ) ಮತ್ತು (ಎಲ್) ಅಡಿ ಐಎಎಸ್ ಅಧಿಕಾರಿಗಳ ಎಂಟು ತಂಡವನ್ನು ರಚಿಸಲಾಗಿದೆ. ಬೆಂಗಳೂರಿನ ಕೊರೊನಾವೈರಸ್ ಹಾಟ್ ಸ್ಪಾಟ್ ವಲಯಗಳು ಯಾವುವು ಮತ್ತು ಅಲ್ಲಿ ನೇಮಕಗೊಂಡಿರುವ ಅಧಿಕಾರಿಗಳು ಯಾರು ಎನ್ನುವುದರ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ.

Covid-19: CM Yediyurappa Puts 8 Senior IAS Officers In-charge Of The BBMP Different Zones

ಬೆಂಗಳೂರಿನ ಎಂಟು ವಲಯ ಮತ್ತು ಸಂಯೋಜಕರ ಪಟ್ಟಿ:

ವಲಯದ ಹೆಸರು - ವಲಯ ಸಂಯೋಜಕರು
ಬೆಂಗಳೂರು ಪೂರ್ವ - ಮನೋಜ್ ಕುಮಾರ್ ಮೀನಾ
ಬೆಂಗಳೂರು ಪಶ್ಚಿಮ - ಉಜ್ವಲ್ ಕುಮಾರ್ ಘೋಷ್
ಬೊಮ್ಮನಹಳ್ಳಿ - ಡಾ.ರವಿಕುಮಾರ್ ಸುರಪುರ್
ಯಲಹಂಕ - ಅನ್ಬು ಕುಮಾರ್
ಬೆಂಗಳೂರು ದಕ್ಷಿಣ - ಪಂಕಜ್ ಕುಮಾರ್ ಪಾಂಡೆ
ಮಹಾದೇವಪುರ - ಡಾ. ಎನ್ ಮಂಜುಳ
ದಾಸರಹಳ್ಳಿ - ಡಾ. ಪಿ ಸಿ ಜಾಫರ್
ರಾಜರಾಜೇಶ್ವರಿ ನಗರ - ಡಾ. ಆರ್ ವಿಶಾಲ್

Recommended Video

      CD lady ಹಿಂದೆ ಇದ್ಯ ಡಿಕೆ ಕೈವಾಡ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+