ಕೋವಿಡ್-19: ಬೆಂಗಳೂರಿನಲ್ಲಿರುವ ಕಂಟೇನ್ಮೆಂಟ್ ಝೋನ್ ಗಳ ಪಟ್ಟಿ ಇಲ್ಲಿದೆ

ಬೆಂಗಳೂರು, ಏಪ್ರಿಲ್ 20: ಕೋವಿಡ್-19 ತಡೆಗಟ್ಟುವ ಸಲುವಾಗಿ ದೇಶದಲ್ಲಿ ಎರಡನೇ ಹಂತದ ಲಾಕ್ ಡೌನ್ ಮೇ 3 ರವರೆಗೂ ಮುಂದುವರೆಯಲಿದೆ. ಲಾಕ್ ಡೌನ್ 2.0 ಹೇಗಿರಬೇಕು ಎಂಬುದರ ಬಗ್ಗೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಮಾರ್ಗಸೂಚಿ ನೀಡಿದೆ.

ಮಾರ್ಗಸೂಚಿ ಅನ್ವಯ ರೆಡ್ ಝೋನ್ ಅಥವಾ ಹಾಟ್ ಸ್ಪಾಟ್ ಅಥವಾ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಇಂದಿನಿಂದ ಲಾಕ್ ಡೌನ್ ನಿಯಮಗಳು ಕಠಿಣವಾಗಿರಲಿದ್ದು, ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

Covid-19: Check Full List Of Containment Zones In Bengaluru

ಹಾಗಾದ್ರೆ, ಬೆಂಗಳೂರಿನಲ್ಲಿ ಇರುವ ಕಂಟೇನ್ಮೆಂಟ್ ಝೋನ್ ಗಳು ಯಾವುವು.? ಇಲ್ಲಿದೆ ನೋಡಿ ಪಟ್ಟಿ:

ಬೆಂಗಳೂರಿನಲ್ಲಿ 38 ವಾರ್ಡ್ ಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಅವುಗಳು:

* ಬೊಮ್ಮನಹಳ್ಳಿ ವಲಯದ 2 ವಾರ್ಡ್ ಗಳು - ಸಿಂಗಸಂದ್ರ, ಬೇಗೂರು.

* ಮಹಾದೇವಪುರ ವಲಯದ 6 ವಾರ್ಡ್ ಗಳು - ಹಗದೂರು, ಗರುಡಾಚಾರ್ ಪಾಳ್ಯ, ವರ್ತೂರು, ಹೂಡಿ ಮತ್ತು ಹೊರಮಾವು, ರಾಮಮೂರ್ತಿನಗರ.

* ಪೂರ್ವ ವಲಯದ 9 ವಾರ್ಡ್ ಗಳು - ವಸಂತ ನಗರ, ಗಂಗಾ ನಗರ, ಲಿಂಗರಾಜಪುರ, ಜೀವನ್ ಭೀಮಾ ನಗರ, ರಾಧಾ ಕೃಷ್ಣ ಟೆಂಪಲ್, ಸಿ.ವಿ. ರಾಮನ್ ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾನಗರ, ಸಂಪಂಗಿ ರಾಮನಗರ.

* ದಕ್ಷಿಣ ವಲಯದ 12 ವಾರ್ಡ್ ಗಳು - ಗಿರಿನಗರ, ಆಡುಗೋಡಿ, ಸುದ್ದಗುಂಟೇ ಪಾಳ್ಯ, ಶಾಕಾಂಬರಿ ನಗರ, ಜೆ.ಪಿ.ನಗರ, ಗುರಪ್ಪನ ಪಾಳ್ಯ, ಬಾಪುಜಿ ನಗರ, ಹೊಸಹಳ್ಳಿ, ಸುಧಾಮ ನಗರ, ಮಡಿವಾಳ, ಅತ್ತಿಗುಪ್ಪೆ, ಕರಿಸಂದ್ರ.

* ಪಶ್ಚಿಮ ವಲಯದ 7 ವಾರ್ಡ್ ಗಳು - ಅರಮನೆ ನಗರ, ನಾಗರಭಾವಿ, ನಾಗಾಪುರ, ಶಿವನಗರ, ಆಜಾದ್ ನಗರ, ಜಗಜೀವನ್ ರಾಮ್ ನಗರ, ಸುಭಾಷ್ ನಗರ.

* ಯಲಹಂಕದ 2 ವಾರ್ಡ್ ಗಳು - ಥಣಿಸಂದ್ರ ಮತ್ತು ಬ್ಯಾಟರಾಯನಪುರ.

ಕರ್ನಾಟಕದಲ್ಲಿ ಇಲ್ಲಿಯವರೆಗೂ 390 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಖಚಿತಗೊಂಡಿವೆ. ಅವುಗಳ ಪೈಕಿ 16 ಮಂದಿ ಮೃತಪಟ್ಟಿದ್ದು, 111 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಇಲ್ಲಿಯವರೆಗೂ 89 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅವುಗಳ ಪೈಕಿ 44 ಮಂದಿ ಗುಣಮುಖರಾಗಿದ್ದು, 4 ಜನ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ, 'ಕಂಟೇನ್ಮೆಂಟ್ ಝೋನ್' ಗಳನ್ನು ಗುರುತಿಸಲಾಗಿದ್ದು, ಅಂತಹ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಕಂಟೇನ್ಮೆಂಟ್ ಝೋನ್ ಎಂದರೇನು.?
ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಿರ್ದಿಷ್ಟ ಜಾಗಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗುತ್ತದೆ. ಯಾವುದೇ ನಿರ್ದಿಷ್ಟ ರಸ್ತೆಯಲ್ಲಿ ಒಂದು ಸೋಂಕಿನ ಪ್ರಕರಣ ಕಂಡುಬಂದರೂ, ಆ ರಸ್ತೆಯನ್ನು ಕಂಟೇನ್ಮೆಂಟ್ ಝೋನ್ ಪಟ್ಟಿಗೆ ಸೇರಿಸಲಾಗುತ್ತದೆ. ಇಲ್ಲಿ ಸ್ಥಳೀಯವಾಗಿ ಸೋಂಕು ಹರಡುವುದನ್ನು ತಡೆಯಲು ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+