ಯೋಗೇಶ್ ಗೌಡ ಕೇಸ್ ತೀರ್ಪು ಪ್ರಕಟ: ವಿನಯ್ ಕುಲಕರ್ಣಿ ಅಪರಾಧಿ ಎಂದ ಕೋರ್ಟ್: 17 ಮಂದಿ ಸಿಬಿಐ ವಶಕ್ಕೆ
ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ (Yogesh Gowda Case Verdict) ಹತ್ಯೆ ನಡೆದು ಹತ್ತು ವರ್ಷಗಳ ಬಳಿಕ ಪ್ರಕರಣ ಕೋರ್ಟ್ ಮಹತ್ವದ ತೀರ್ಪುನ್ನು ಇಂದು ಬುಧವಾರ (ಏಪ್ರಿಲ್ 15) ಪ್ರಕಟಿಸಿದೆ. ಕಾಂಗ್ರೆಸ್ ಶಾಸಕ ವಿಜಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಅಪರಾಧಿ, ದೋಷಿ ಎಂದು ಹೇಳಿದೆ.
ತೀರ್ಪು ಹಿನ್ನೆಲೆಯಲ್ಲಿ ಕೋರ್ಟ್ ಹಾಜರಾಗಿದ್ದ 21 ಆರೋಪಿಗಳ ಪೈಕಿ 17 ಮಂದಿ ಕುರಿತ ಆದೇಶ ಹೊರ ಬಿದ್ದಿದೆ. ವಿನಯ್ ಕುಲಕರ್ಣಿಯನ್ನು ಪ್ರಕರಣ ದೋಷಿ ಎಂದಿರುವ ಕೋರ್ಟ್ ನಾಳೆ ಎಲ್ಲ ಆರೋಪಿಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದೆ. ತೀರ್ಪು ಹೊರ ಬಂದಿದ್ದೆ ತಡ, ಸಿಬಿಐ ಅಧಿಕಾರಿಗಳು ಎಲ್ಲ ಅರೋಪಿಗಳನ್ನು ವಸಕ್ಕೆ ಪಡೆದಿದ್ದಾರೆ. ನಾಳೆ ಮತ್ತೆ ಕೋರ್ಟ್ ಹಾಜರಾಗಲಿದ್ದಾರೆ. ಮೂರನೇ ಭಾರಿಗೆ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಅವರ ಕೊಲೆ ನಡೆದು ಹತ್ತು ವರ್ಷದ ಬಳಿಕ ಪ್ರಕರಣದ ಕೋರ್ಟ್ ವಿಚಾರಣೆ ಸಂಪೂರ್ಣವಾಗಿದೆ. ಇಂದು ತೀರ್ಪು ಪ್ರಕಟವಾಗಿದೆ. ಎರಡು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದಿರುವ ವಿನಯ್ ಕುಲಕರ್ಣಿ ಹಾಗೂ ಎಲ್ಲ ಆರೋಪಿಗಳ ಮೇಲೆ ಇಂದಿನ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ಪ್ರಕರಣ ಇಬ್ಬರು ಆರೋಪಿಗಳಾದ ಪ್ರತಿಕೂಲ ಹೇಳಿಕೆ ನೀಡಿದ್ದರಿಂದ 17 ಮಂದಿ ಆರೋಪಿಗಳ ಕುರಿತು ತೀರ್ಪು ನೀಡಿದೆ.
ಅಪರಾಧಿ ಎಂದ ಕೋರ್ಟ್, ಶಿಕ್ಷೆ ಎಷ್ಟು?
ಸದ್ಯ ಪ್ರಕರಣದಲ್ಲಿ ಯೋಗೇಶ್ ಗೌಡ ಸೇರಿ ಹಲವರನ್ನು ಅಪರಾಧಿ ಎಂದು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಹೇಳಿದೆ. ಈ ಮೂಲಕ ಕೊಲೆ ಪ್ರಕರಣದಲ್ಲಿ ಇವರ ಪಾತ್ರ ಇದೆ ಎಂದು ತಿಳಿಸಿದಂತಾಗಿದೆ. ಆದರೆ ಎಷ್ಟು ವರ್ಷ ಶಿಕ್ಷೆ ಎಂದು ಇನ್ನೂ ಹೇಳಿಲ್ಲ. ಅಪರಾಧಿ ಎಂದಿರುವ ಕೋರ್ಟ್ ನಾಳೆ ಗುರುವಾರ (ಏ.16) ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರದ್ದು ಪ್ರಮುಖ ಪಾತ್ರವಿದೆ ಎಂದು ಸಿಬಿಐ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೀಗಾಗಿಯೇ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರು ಎರಡು ಬಾರಿ 2020 ಮತ್ತು 2025 ರಲ್ಲಿ ಜೈಲಿನಲ್ಲಿದ್ದರು. ಜಾಮೀನು ಪಡೆದು ಹೊರ ಬಂದು, ಕ್ಷೇತ್ರದಿಂದ ಹೊರಗಿದ್ದುಕೊಂಡೆ ಚುನಾವಣೆ ಗೆದ್ದು ಶಾಸಕ ಸ್ಥಾನಕ್ಕೆ ಪುನರ್ ಆಯ್ಕೆ (2023) ಆಗಿದ್ದಾರೆ.
ರಿಯಲ್ ಎಸ್ಟೇಟ್ ಕಾರಣಕ್ಕೆ ಕೊಲೆ
ಯೋಗೇಶ್ ಗೌಡ ಹಾಗೂ ವಿನಯ್ ಕುಲಕರ್ಣಿ ಅವರ ಮಧ್ಯೆ ತಾಲೂಕ ಪಂಚಾಯತಿಯ ಸ್ಥಾನದ ವಿಚಾರವಾಗಿ ಇಬ್ಬರ ಮಧ್ಯ ಜಗಳ ಆಗಿತ್ತು. ಭೂಮಿ ವಿವಾದವೂ ಇತ್ತು. ಅದರಿಂದ ಜಗಳ ನಡೆದು, ಹತ್ಯೆ ಆಗಿದೆ ಅಂತಲೂ ಪೊಲೀಸ್ ತನಿಖೆಯಲ್ಲಿ ತಿಳಿಸಲಾಗಿತ್ತು.
ಕೋರ್ಟ್ ಅಂತಿಮ ತೀರ್ಪು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿನಯ್ ಕುಲಕರ್ಣಿ ಸೇರಿ ಪ್ರಕರಣದ ಎಲ್ಲ 21 ಆರೋಪಿಗಳು ಖುದ್ದು ಹಾಜರಾಜದರು.
2016 ಜೂನ್ 10ರಂದು ಹತ್ಯೆ ನಡೆದಿದ್ದು, ಬಳಿಕ ಪೊಲೀಸ್ ತನಿಖೆ ಆರಂಭವಾಗಿತ್ತು. ಪೊಲೀಸರು ತನಿಖೆಯಲ್ಲಿ ಸತ್ಯ ಮರೆ ಮಾಚಿದ್ದರು ಎಂದು ಸಿಬಿಐ ತಿಳಿಸಿದ್ದಾರೆ. ಮೃತ ಯೋಗೇಶ ಗೌಡ ಕೊಲೆ ಕುಟುಂಬಸ್ಥರ ಒತ್ತಾಯ ಮೇರೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಸಿಬಿಐ ತಂಡ ಒಟ್ಟು 113 ಸಾಕ್ಷ್ಯಗಳಿಂದ ಮಾಹಿತಿ ಪಡೆದಿದ್ದಾರೆ. ತನಿಖೆ ಮುಗಿಸಿ, ಚಾರ್ಜ್ ಶೀಟ್ ಈಗಾಗಲೇ ಸಲ್ಲಿಸಿದ್ದರು. ಅದಾದ ಬಳಿಕವೇ ನ್ಯಾಯಾಲದಲ್ಲಿ ಸುಮಾರು ಎಂಟು ವರ್ಷಗಳಿಂದ ವಿಚಾರಣೆ ನಡೆದಿದ್ದು, ಇತ್ತೀಚೆಗೆ ವಿಚಾರಣೆ ಪೂರ್ಣಗೊಂಡಿತ್ತು. ಅಂತಿಮ ತೀರ್ಪು ಪ್ರಕಟಿಸಲು ಏಪ್ರಿಲ್ 15ರ ದಿನಾಂಕವನ್ನು ಕೋರ್ಟ್ ನಿಗದಿ ಮಾಡಿತ್ತು.
ಧಾರವಾಡದಲ್ಲಿ ಪೊಲೀಸ್ ಬಿಗಿ ಭದ್ರತೆ
ತೀರ್ಪಿನ ಬಳಿಕ ಅಹಿಕರ ಘಟನೆ ನಡೆದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸುತ್ತಿದೆ. ಮುಂಜಾಗೃತಾ ಕ್ರಮವಾಗಿ ಧಾರವಾಡದ ವಿಜಯ್ ಕುಲಕರ್ಣಿ ಮನೆ ಹಾಗೂ ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ. ಯಾವುದೇ ಅಹಿಕರ ಘಟನೆಗಳು ಜರುಗಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.












Click it and Unblock the Notifications