'ಮೋದಿಗೆ ಮತ ಹಾಕುವುದೇ ಉಡುಗೊರೆ' ಹೀಗೊಂದು ಮದುವೆ ಆಮಂತ್ರಣ!

ಬೆಂಗಳೂರು, ನವೆಂಬರ್ 16: "ಆಶೀರ್ವಾದವೇ ಉಡುಗೊರೆ..." ಎಂದು ಮದುವೆ ಆಮಂತ್ರಣದ ಮೇಲೆ ಬರೆಯುವುದು ಅಚ್ಚರಿಯ ವಿಷಯವಲ್ಲ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣದಲ್ಲಿ "ಪ್ರಧಾನಿ ಮೋದಿಗೆ ಮತ ಹಾಕುವುದೇ ಉಡುಗೊರೆ" ಎಂದು ಮುದ್ರಿಸಿ ಮೋದಿ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದೆ.

ಪ್ರವೀಣ್ ಮತ್ತು ಹೇಮಲತಾ ಎಂಬುವವರ ಮದುವೆ ಆಮಂತ್ರಣ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ಆಮಂತ್ರಣದ ಕೆಳಗಡೆ "ನಿಮ್ಮ ಸಂತಸದ ನಗುಮುಖವೇ ಆಶೀರ್ವಾದ, 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ, ಹಾಕುವ ಮತವೇ ಉಡುಗೊರೆ" ಎಂದು ಮುದ್ರಿಸಲಾಗಿದೆ!

Couple in their marriage invitation requests people to vote Modi in 2019

ಅಷ್ಟೇ ಅಲ್ಲ, ಆಮಂತ್ರಣದ ಹಿಂಭಾಗದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಕೇಂದ್ರ ಎನ್ ಡಿಎ ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳನ್ನೂ ನೀಡಲಾಗಿದೆ.

Couple in their marriage invitation requests people to vote Modi in 2019

2019ರ ಮೇ-ಜೂನ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮುಂಬರುವ ಮಾರ್ಚ್ -ಏಪ್ರಿಲ್ ತಿಂಗಳಿನಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+