ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ: ಹೊಸ ಟ್ರೆಂಡ್ ಸೃಷ್ಟಿಸಿದ ಜೋಡಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡೋದು ಗೊತ್ತು, ಬಟ್ಟೆ, ಮೊಬೈಲ್‌ಗಳನ್ನೂ ಆರ್ಡರ್ ಮಾಡುತ್ತೇವೆ ಆದರೆ ನಿಶ್ಚಿತಾರ್ಥವನ್ನು ಮಾಡಿಕೊಂಡಿರುವುದನ್ನು ಎಲ್ಲಿಯೂ ನೋಡಿರಲು ಸಾಧ್ಯವಿಲ್ಲ.

ಹೌದು ಇದು ಆನ್‌ಲೈನ್ ನಿಶ್ಚಿತಾರ್ಥ, ಉಂಗುರವನ್ನು ಬದಲಾಯಿಸಿಕೊಳ್ಳದೆ ಮೊಬೈಲ್‌ನಲ್ಲಿ ಒಬ್ಬರಮುಖವನ್ನೊಬ್ಬರು ನೋಡಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರಿಂದ ಆನ್‌ಲೈನ್ ನಿಶ್ಚಿತಾರ್ಥದ ಟ್ರೆಂಡ್ ಆರಂಭವಾಗಿದೆ.

ಗುಂಡ್ಲುಪೇಟೆಯಲ್ಲಿ ಮದುವೆ ಹಿಂದಿನ ದಿನ ನಸುಕಿನಲ್ಲಿ ಪರಾರಿಯಾದ ವಧುಗುಂಡ್ಲುಪೇಟೆಯಲ್ಲಿ ಮದುವೆ ಹಿಂದಿನ ದಿನ ನಸುಕಿನಲ್ಲಿ ಪರಾರಿಯಾದ ವಧು

ವಧು-ವರರು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆ ಮಂದಿಯೆಲ್ಲ ಸೇರಿಕೊಂಡು ಮೊಬೈಲ್‌ನಲ್ಲಿ ವಿಡಿಯೋ ಕಾಲ್‍ನಲ್ಲಿದ್ದ ವಧು-ವರರಿಗೆ ನಿಶ್ಚಿತಾರ್ಥದ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆನ್‌ಲೈನ್ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಇದು ಹೊಸ ಟ್ರೆಂಡ್ ಕೂಡ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Engagement Online A Couple That Have Created A New Trend

ಇಬ್ಬರೂ ಕೆಲಸದಲ್ಲಿ ಬಿಜಿಯಾಗಿದ್ದಾರೆ, ಇಬ್ಬರಿಗೂ ಒಂದು ಊರಿನಲ್ಲಿ ಬಂದು ಸೇರಲು ಸಾಧ್ಯವಾಗಿಲ್ಲ, ನಿಶ್ಚಿತಾರ್ಥ ನಡೆಯಲೇಬೇಕು ಹೀಗಾಗಿ ಈ ಉಪಾಯ ಮಾಡಿದ್ದಾರೆ, ವಧುವಿನ ನೆಂಟರಿಷ್ಟರು ಅವರ ಮನೆಯಲ್ಲಿ, ವರನ ನೆಂಟರು ಅವರ ಮನೆಯಲ್ಲಿ ಇಬ್ಬರೂ ಮೊಬೈಲ್ ಹಿಡಿದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೈಬೆರಳ ತುದಿಯಲ್ಲಿರುವ ಇಂಟರ್‌ನೆಟ್‌ನಿಂದ ಎಷ್ಟೆಲ್ಲಾ ಉಪಯೋಗವಿದೆ ಎನ್ನುವುದು ಕೂಡ ಇದರಿಂದ ತಿಳಿದಿದೆ.

English summary
We know how to order a meal online, order clothes and mobiles but can't see the Online engagement anywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X