Namma Metro: ಟ್ರಾಫಿಕ್‌ಗೆ ಕಡಿವಾಣ, ಮೆಟ್ರೋ ಮಾರ್ಗದ ಸುಂದರತೆಗಾಗಿ BMRCL ಜೊತೆಗೂಡಿದ ಕಾರ್ಪೋರೇಟ್ ಕಂಪನಿಗಳು
ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ವಿರುದ್ಧದ ಅನೇಕ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದರೊಂದಿಗೆ ನಗರದ ಪ್ರಮುಖ ಐಟಿ ಮತ್ತು ಕಾರ್ಪೋರೇಟ್ ಕಂಪನಿಗಳು 'ನಮ್ಮ ಮೆಟ್ರೋ' ಜನಪ್ರಿಯಗೊಳಿಸಲು ಮುಂದಾಗಿವೆ.
ಬೆಂಗಳೂರು, ಮಾರ್ಚ್ 17: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ವಿರುದ್ಧದ ಅನೇಕ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದರೊಂದಿಗೆ ನಗರದ ಪ್ರಮುಖ್ಯ ಐಟಿ ಕಂಪನಿಗಳು ಸೇರಿದಂತೆ ಕಾರ್ಪೋರೇಟ್ ಕಂಪನಿಗಳು 'ನಮ್ಮ ಮೆಟ್ರೋ' ಜನಪ್ರಿಯಗೊಳಿಸಲು ಮುಂದಾಗಿವೆ.
ತಂತ್ರಜ್ಞಾನ, ಐಟಿ ಬಿಟಿ ಕೆಂದ್ರ ಕರೆಸಿಕೊಳ್ಳುವ ಟೆಕ್ ಕ್ಯಾಪಿಟಲ್‌ನ ಟ್ರಾಫಿಕ್ ಸಮಸ್ಯೆಗಳ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ, ಕಾರ್ಪೊರೇಟ್‌ಗಳು ಬೆಂಗಳೂರು ಮೆಟ್ರೊವನ್ನು ಜನಪ್ರಿಯಗೊಳಿಸಲು ಮತ್ತು ಅದನ್ನು ಇನ್ನಷ್ಟು ಸುಂದರಗೊಳಿಸಲು ಸಜ್ಜಾಗಿದ್ದಾರೆ. ಮೆಟ್ರೋ ಪಿಲ್ಲರ್ ನಿರ್ಮಾಣದಿಂದ ಹಿಡಿದು ಬಣ್ಣಬಳಿಯುವವರೆಗೂ ಕಾರ್ಪೋರೇಟ್ ಸಂಸ್ಥೆಗಳು ನಮ್ಮ ಮೆಟ್ರೋ ಜೊತೆ ಕೈ ಜೋಡಿಸಿವೆ.

ಸಂಚಾರ ದಟ್ಟಣೆ ಅಡಚಣೆಗಳಿಗೆ ಕುಖ್ಯಾತವಾಗಿರುವ ಬೆಂಗಳೂರಿನ ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ (ORR), ಎಲೆಕ್ಟ್ರಾನಿಕ್ಸ್ ಸಿಟಿ ಸೇರದಂತೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೊಸ ಮೆಟ್ರೋ ಮಾರ್ಗಗಳು ವಿಸ್ತರಣೆ ಆಗಲಿವೆ. ಈ ಮುಂಬರುವ ಮೆಟ್ರೋ ನಿಲ್ದಾಣಗಳು ನಗರದ ಪ್ರಮುಖ IT-BT ಕಂಪನಿಗಳಿಗೆ ಸೇವೆ ಸಲ್ಲಿಸಲಿವೆ.
ಈ ಕೆಲವು ಸಂಸ್ಥೆಗಳು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಜೊತೆಗೆ ಹತ್ತಿರದ ನಿಲ್ದಾಣದಿಂದ ತಮ್ಮ ಕ್ಯಾಂಪಸ್‌ಗಳಿಗೆ ಫುಟ್ ಓವರ್ ಬ್ರಿಡ್ಜ್‌ಗಳನ್ನು (FOBs) ನಿರ್ಮಿಸಲು, ನಿಧಿ ಕೇಂದ್ರಗಳು, ಪೈಂಟಿಂಗ್ ವೈಡಕ್ಟ್‌ಗಳು, ಪಿಲ್ಲರ್‌ಗಳು, ಸಸಿಗಳನ್ನು ನೆಡುವುದು ಮತ್ತು ಮಧ್ಯದ ನಿರ್ವಹಣೆಗಾಗಿ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಸಂಬಂಧ ಈಗಾಗಲೇ ಮಾತುಕತೆಗಳು ನಡೆದಿತ್ತು.
ಮುಂದೆ ಬಂದ ಕಂಪನಿಗಳು ಯಾವವು?
ಬೆಂಗಳೂರು ಮೆಟ್ರೋ ಅಧಿಕಾರಿಗಳ, ಕಾರ್ಪೋರೇಟ್ ಸಂಸ್ಥೆಗಳ ಈ ನಿರ್ಧಾರವು ಸಾರಿಗೆ ಸಂಸ್ಥೆಗಳನ್ನು ಉಳಿಸುತ್ತವೆ. ಇದು ನಮಗೆ ಗೆಲುವಿನ ವಿಷಯವಾಗಿದೆ. ಈ ಸಂಸ್ಥೆಗಳು ಮಾಡಿಕೊಂಡ ಒಪ್ಪಂದದನ್ವಯ ಮೆಟ್ರೋ ಸಾರಿಗೆ ಜನಪ್ರಿಯವಾಗುತ್ತದೆ. ಪ್ರಯಾಣಿಕರನ್ನು ಸೆಳೆಯಲು ಸಹಕಾರಿಯಾಗುತ್ತದೆ. ಉದ್ಯೋಗಿಗಳ ಸಾರಿಗೆಯಲ್ಲಿ ಸಂಸ್ಥೆಗಳು ಉಳಿಸಲು ನಿಂತಿವೆ ಎಂದು ಅವರು ಬಣ್ಣಿಸಿದ್ದಾರೆ.

ಇನ್ನೂ ಒಪ್ಪಂದ ಮಾಡಿಕೊಂಡ ಮೆಟ್ರೋ ಸಾರಿಗೆ ಉತ್ತೇಜಿಸುತ್ತಿರುವ ಕಂಪನಿಗಳನ್ನು ನೋಡುವುದಾದರೆ, ಬಯೋಕಾನ್ ಫೌಂಡೇಶನ್, ಇಂಟೆಲ್ ಟೆಕ್ನಾಲಜಿ, ಇನ್ಫೋಸಿಸ್ ಫೌಂಡೇಶನ್, ಪ್ರೆಸ್ಟೀಜ್ ಸೇರಿದಂತೆ ಸಂಸ್ಥೆಗಳು/ಟೆಕ್-ಪಾರ್ಕ್‌ಗಳು, ರಾಯಭಾರ ಕಚೇರಿಗಳು ಅಲ್ಲದೇ ಐಟಿಪಿಬಿ (ITPB) ಸಂಸ್ಥೆಗಲು ತಮ್ಮ ಕ್ಯಾಂಪಸ್‌ಗಳ ಸಮೀಪವಿರುವ ಮೆಟ್ರೋ ನಿಲ್ದಾಣಗಳಿಗೆ ಧನಸಹಾಯ ಮಾಡಲಿವೆ. ಈ ಸಂಬಂಧ ನಮ್ಮ ಮೆಟ್ರೋ ಜೊತೆಗೆ ತಿಳುವಳಿಕೆಯ ಜ್ಞಾಪಕ ಪತ್ರಗಳಿಗೆ (MoUs) ಸಹಿ ಹಾಕಿವೆ.
ಈ ಧನದಿಂದ ಕಂಪನಿಗಳ ಕ್ಯಾಂಪಸ್‌ಗಳಿಗೆ ಬ್ರಿಡ್ಜ್ ನಿರ್ಮಾಣ, ನಿಧಿ ಕೇಂದ್ರಗಳು, ವೈಡಕ್ಟ್‌ಗಳಿಗೆ ಫೇಂಟಿಂಗ್ ಮಾಡಲು, ಮಧ್ಯಮ ಗಾರ್ಡ್ ನಿರ್ಮಾಣಕ್ಕೆ ಮತ್ತು ವೈಡಕ್ಟ್ ಕೆಳಗೆ ಸಸಿಗಳನ್ನು ನೆಡುವುದಕ್ಕೆ ಹಣ ಬಳೆಕ ಆಗಲಿದೆ ಎನ್ನಲಾಗಿದೆ. ಈ ಸಂಬಂಧ 'ನಮ್ಮ ಮೆಟ್ರೋ' ಸಂಸ್ಥೆಗಳು/ಟೆಕ್-ಪಾರ್ಕ್‌ಗಳಾದ ಬಾಗ್‌ಮನೆ, ಬಾಷ್, ಸೆಂಚುರಿ ಗ್ರೂಪ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ನಂತರ ಸಂಸ್ಥೆಗಳ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಗಳಿಗೆ ಮನವಿ ಮಾಡಿದ್ದ 'ನಮ್ಮ ಮೆಟ್ರೋ'
ಈ ಹಿಂದೊಮ್ಮ ನಮ್ಮ ಮೆಟ್ರೋ ಮಾರ್ಗದ ಮೆಟ್ರೋ ಮಾರ್ಗದ ಕೆಳಗೆ ಹಸಿರು ಮೀಡಿಯನ್ ಗಾರ್ಡನ್ ನಿರ್ಮಾಣಗೊಳ್ಳಲು, ಮೆಟ್ರೋ ವೈಡಕ್ಟ್ ಸುಂದರಗೊಳಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಕಾರ್ಪೋರೇಟ್ ಕಂಪನಿಗಳ ಸಹಾಯ ಕೇಳಿತ್ತು.
ಕಂಪನಿಗಳು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ (CSR) ಮೆಟ್ರೋ ಲೈನ್ ಕೆಳಗೆ ಮೀಡಿಯನ್ ಗಾರ್ಡನ್ ನಿರ್ಮಾಣ ಮಾಡಲು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಪಿಯರ್ (ವೈಡಕ್ಟ್)ಗಳಿಗೆ ಬಣ್ಣ ಬಳಿಯಲು ಮನವಿ ಮಾಡಿತ್ತು. ಅದರಂತೆ ಇದೀಗ ಹಲವು ಕಂಪನಿಗಳು ಮುಂದೆ ಬಂದು ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಮೂಲಕ ಬೆಂಗಳೂರು ಭವಿಷ್ಯದಲ್ಲಿ ಬೇರೆ ನಗರಗಳಿಗೆ ಮಾದರಿಯಾಗಲಿದೆ. ಎಲ್ಲರು ಸಾರ್ವಜನಿಕ ಸಾರಿಗೆ (Public Transport) ಬಳಸುವಂತಾಗಲು ಈ ಉಪಕ್ರಮ ನೆರವಾಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಅಭಿಪ್ರಾಯಪಟ್ಟರು.












Click it and Unblock the Notifications