ಕೊರೊನಾ ಸೋಂಕೇ ಬಂಡವಾಳ: ಮೆಡಿಕಲ್ ಶಾಪ್ ಗಳ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಮಾರ್ಚ್ 15: ಮಹಾಮಾರಿ ಕೊರೊನಾ ಸೋಂಕು ರಾಜ್ಯದಲ್ಲಿ ಒಬ್ಬರನ್ನು ಬಲಿ ಪಡೆದುಕೊಂಡ ನಂತರ, ಇದನ್ನೇ ಬಂಡವಾಳ ಮಾಡಿಕೊಂಡು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮೆಡಿಕಲ್ ಶಾಪ್ ಗಳ ಮೇಲೆ, ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆಯೇ, ಮಾಸ್ಕ್ ಮತ್ತು ಸ್ಯಾನಿಟೈಜರ್ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಕೃತಕ ಅಭಾವವನ್ನು ಸೃಷ್ಟಿಸಿ, ಈ ಎರಡನ್ನು ಒಂದಕ್ಕೆ ಐದರಿಂದ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.

ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ನಗರದ ಹಲವು ಮೆಡಿಕಲ್ ಶಾಪ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮೆಡಿಕಲ್ ಶಾಪ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

Coronavirus: City Crime Branch Police Raided Medical Shops In Bengaluru

ಈ ವೇಳೆ, ದುಬಾರಿ ಬೆಲೆಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ಮಾರುತ್ತಿದ್ದ ಐವರು ಮೆಡಿಕಲ್ ಶಾಪ್ ಮಾಲೀಕರು ಸೆರೆಸಿಕ್ಕಿದ್ದಾರೆ. ಜಯನಗರ, ಕಲಾಸಿಪಾಳ್ಯ, ಮಹಾಲಕ್ಷ್ಮೀ ಲೇಔಟ್, ಸಂಜಯ ನಗರ ಮುಂತಾದ ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಸ್ಕ್, ಥರ್ಮಾಮೀಟರ್ ಮತ್ತು ಸ್ಯಾನಿಟೈಜರ್ ಗಳ ಡಿಮಾಂಡ್ ಹೆಚ್ಚಾಗುತ್ತಿದ್ದಂತೆಯೇ, ನಗರದಲ್ಲಿ, ಬೇಕಾಬಿಟ್ಟಿ ಬೆಲೆಗಳಿಗೆ ಇವುಗಳನ್ನು ಮಾರಾಟಮಾಡಲಾಗುತ್ತಿದ್ದದ್ದು ಒಂದೆಡೆಯಾದರೆ, ಕೃತಕ ಅಭಾವವನ್ನು ಸೃಷ್ಟಿಸಲಾಗುತ್ತಿತ್ತು.

ರಾಜ್ಯಾದ್ಯಂತ ಒಂದು ವಾರ ಹೈಅಲರ್ಟ್ ಘೋಷಣೆಯಾದ ನಂತರ, ಹಲವು ಖಾಸಗಿ ಕಚೇರಿಗಳು ಮುಚ್ಚಿ, ವರ್ಕ್ ಫ್ರಂ ಹೋಂ ಮೂಲಕ ಕೆಲಸ ನಿರ್ವಹಿಸಲು ತಮ್ಮ ಉದ್ಯೋಗಿಗಳಿಗೆ ಸೂಚಿಸಿದೆ. ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಯಾನಿಟೈಜರ್ ಅಳವಡಿಸಿರುವುದರಿಂದ ಇದರ ಬೇಡಿಕೆ ದುಪ್ಪಟ್ಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+