ರಾಜ್ಯದಲ್ಲಿ 9 ಹೊಸ ಕೊರೊನಾ ಪ್ರಕರಣಗಳು ಪತ್ತೆ: ಒಟ್ಟು 598

ಬೆಂಗಳೂರು, ಮೇ 2: ರಾಜ್ಯದಲ್ಲಿ ಮತ್ತೆ 9 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಮೇ 1ರ ಸಂಜೆ 5 ಗಂಟೆಯಿಂದ ಮೇ 2ರ ಮಧ್ಯಾಹ್ನ 12 ಗಂಟೆ ಒಳಗೆ ಕಂಡು ಬಂದ ಪ್ರಕರಣಗಳು ಇವಾಗಿವೆ.

Recommended Video

      ದಾವಣಗೆರೆ ಕೊರೊನ ಸೋಂಕಿಗೆ ಗುಜರಾತ್ ನಂಟು ? ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳೋದೇನು ?

      ಬೀದರ್ 1, ತುಮಕೂರು 2, ಚಿಕ್ಕಬಳ್ಳಾಪುರ 1, ವಿಜಯಪುರ 2, ಬೆಳಗಾವಿ 1, ಜಮಖಂಡಿ ಬಾಗಲಕೋಟೆ 1, ಬೆಂಗಳೂರು ನಗರ ಜಿಲ್ಲೆ 1 ಕೇಸ್ ಇಂದು ಕಂಡು ಬಂದ ಹೊಸ ಕೊರೊನಾ ಪ್ರಕರಣಗಳು ಈ ಜಿಲ್ಲೆಗಳದ್ದಾಗಿದೆ.

      ಬೀದರ್‌ನ 82 ವರ್ಷದ ವೃದ್ಧ, ತುಮಕೂರಿನ 40 ವರ್ಷದ ವ್ಯಕ್ತಿ, ತುಮಕೂರಿನ 29 ವರ್ಷದ ಯುವತಿ, ಚಿಕ್ಕಬಳ್ಳಾಪುರದ 54 ವರ್ಷದ ವ್ಯಕ್ತಿ, 22 ವರ್ಷದ ವಿಜಯಪುರದ ಯುವಕ, ವಿಜಯಪುರದ 45 ವರ್ಷದ ವ್ಯಕ್ತಿ, 23 ವರ್ಷದ ಬೆಳಗಾವಿ ಯುವಕ, ಜಮಖಂಡಿ ಬಾಗಲಕೋಟೆಯ 45 ವರ್ಷದ ಮಹಿಳೆ, ಬೆಂಗಳೂರು ನಗರ ಜಿಲ್ಲೆಯ 32 ವರ್ಷದ ಮಹಿಳೆಗೆ ಸೋಂಕು ತಲುಲಿದೆ.

      Coronavirus Cases Increased To 598 Karnataka

      ಈ ಪೈಕಿ ಬೀದರ್‌ನ 82 ವರ್ಷದ ವೃದ್ಧ ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಇವರಿಗೆ ಸೋಂಕು ತಗುಲಿತ್ತು.

      ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. 255 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 25 ಜನರು ಕೊರೊನಾಗೆ ಬಲಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+