ಕೊರೊನಾ ಭೀತಿ: ಪಿಜಿ, ಹಾಸ್ಟೆಲ್‌ಗಳಿಗೆ ಬಿಬಿಎಂಪಿ ಕಮಿಷನರ್ ಸೂಚನೆ

ಬೆಂಗಳೂರು, ಮಾರ್ಚ್ 17: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಬಿಬಿಎಂಪಿ ನಗರದ ಪಿಜಿ ಮತ್ತು ಹಾಸ್ಟೆಲ್ ಗಳಿಗೆ ಸೂಚನೆ ನೀಡಿದೆ. ಬಿಬಿಎಂಪಿ ಕಮಿಷನರ್ ಬಿ ಹೆಚ್ ಅನಿಲ್ ಕುಮಾರ್ ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

Recommended Video

      MS Dhoni leaves Chennai after IPL 2020 postponed till April 15 | IPL2020 | Dhoni Return to Home

      ಬೆಂಗಳೂರಿನಲ್ಲಿ ಪ್ರತಿ ನಗರಗಳಲ್ಲಿ 50ಕ್ಕೂ ಹೆಚ್ಚು ಪಿಜಿಗಳು ಇವೆ. ಹಾಸ್ಟೆಲ್ ಗಳ ಸಂಖ್ಯೆ ಕೂಡ ಜಾಸ್ತಿ ಇದೆ. ಸಾವಿರಾರೂ ವಿಧ್ಯಾರ್ಥಿಗಳು, ಕೆಲಸ ಮಾಡುವ ಮಂದಿ ಅದರಲ್ಲಿ ವಾಸ ಮಾಡುತ್ತಾರೆ. ಹೆಚ್ಚು ಸಂಖ್ಯೆಯ ಜನರು ಒಂದೇ ಕಡೆ ವಾಸ ಮಾಡುತ್ತಿದ್ದು, ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

      ಅಲ್ಲದೆ, ಅನೇಕ ಪಿಜಿ ಹಾಗೂ ಹಾಸ್ಟೆಲ್ ಗಳಲ್ಲಿ ಸ್ವಚ್ಚತೆ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಹೀಗಾಗಿ, ಬೆಂಗಳೂರಿನ ಪಿಜಿ ಹಾಗೂ ಹಾಸ್ಟೆಲ್ ಗಳಿಗೆ ಕೊರೊನಾ ವೈರಸ್ ನಿಂದ ದೂರ ಇರುವಂತೆ ಬಿಬಿಎಂಪಿ ಕೆಲವು ಸೂಚನೆಗಳನ್ನು ನೀಡಿದೆ.

      ವಿಧ್ಯಾರ್ಥಿಗಳು ಮನೆಗೆ ತೆರಳಬೇಕು

      ವಿಧ್ಯಾರ್ಥಿಗಳು ಮನೆಗೆ ತೆರಳಬೇಕು

      ಶಾಲಾ, ಕಾಲೇಜುಗಳಿಗೆ ರಜೆ ಇರುವ ವಿಧ್ಯಾರ್ಥಿಗಳು ತಮ್ಮ ಪಿಜಿ ಅಥವಾ ಹಾಸ್ಟೆಲ್‌ನಿಂದ ಮನೆಗೆ ತೆರಳಿದರೆ ಒಳ್ಳೆಯದು ಎಂದು ಬಿಬಿಎಂಪಿ ಕಮಿಷನರ್ ಬಿ ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಬಹುತೇಕ ಎಲ್ಲ ಶಾಲಾ ಹಾಗೂ ಕಾಲೇಜ್ ಗಳಿಗೆ ರಜೆ ಘೋಷಣೆ ಆಗಿದ್ದು, ಅಂತಹ ವಿಧ್ಯಾರ್ಥಿಗಳು ತಮ್ಮ ಊರಿಗೆ ತೆರಳುವುದು ಸುರಕ್ಷಿತ ಎಂದು ಹೇಳಿದ್ದಾರೆ.

      ಸ್ವಚ್ಚತೆ ಕಾಪಾಡಿ

      ಸ್ವಚ್ಚತೆ ಕಾಪಾಡಿ

      ಪಿಜಿ ಅಥವಾ ಹಾಸ್ಟೆಲ್ ನಲ್ಲಿ ಇರುವವರು ಸ್ವಚ್ಚತೆಯಿಂದ ಇರಬೇಕು. ಅಲ್ಲಿ ವಾಸ ಮಾಡುವವರು ತಮ್ಮ ಕೋಣೆ, ತಾವು ಮಲಗುವ ಜಾಗ, ತಮ್ಮ ವಸ್ತುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಹಸ್ತಲಾಘವ ಮಾಡದೇ ಇರುವುದು, ಮಾಸ್ಕ್‍ ಧರಿಸುವುದು ಹೀಗೆ ಕೊರೊನಾ ವೈರಸ್ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದೆ.

      ಓನರ್/ ಮ್ಯಾನೆಜರ್ ಗಳಿಗೆ ಸೂಚನೆ

      ಓನರ್/ ಮ್ಯಾನೆಜರ್ ಗಳಿಗೆ ಸೂಚನೆ

      ಬೆಂಗಳೂರಿನ ಅನೇಕ ಪಿಜಿಗಳಲ್ಲಿ ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇನ್ನು ಹಾಸ್ಟೆಲ್ ಗಳ ಪರಿಸ್ಥಿತಿ ಬಗ್ಗೆ ಹೇಳುವುದೇ ಬೇಡ. ಹೀಗಾಗಿ ಇಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಈ ಕಾರಣ ಪಿಜಿಗಳ ಓನರ್/ ಮ್ಯಾನೆಜರ್ ಅಥವಾ ಹಾಸ್ಟೆಲ್ ವಾರ್ಡನ್ ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಕೊಠಡಿಗಳು, ಆವರಣಗಳು, ಶುದ್ಧವಾಗಿ ಇರಬೇಕು ಎಂದು ಸೂಚನೆ ನೀಡಿದ್ದಾರೆ

      110sq ಜಾಗದಲ್ಲಿ ಇಬ್ಬರಿಗೆ ಮಾತ್ರ ಅವಕಾಶ

      110sq ಜಾಗದಲ್ಲಿ ಇಬ್ಬರಿಗೆ ಮಾತ್ರ ಅವಕಾಶ

      ಸಾಮಾನ್ಯವಾಗಿ ಪಿಜಿಗಳಲ್ಲಿ ಒಂದೇ ರೂಮ್ ನಲ್ಲಿ ಹೆಚ್ಚು ಜನರು ಇರುತ್ತಾರೆ. ಒಂದೇ ಕೋಣೆಯಲ್ಲಿ 6, 7 ಜನರು ಸಹ ತುಂಬಿಕೊಂಡಿರುತ್ತಾರೆ. ಆದರೆ, ಕೊರೊನಾ ವೈರಸ್ ಮುಂಜಾಗ್ರತೆ ಕ್ರಮದಂತೆ, 110sq ಜಾಗದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಬೇಕು. ಅದಕ್ಕಿಂತ ಹೆಚ್ಚು ಜನರು ಇರದಂತೆ ಹಾಸ್ಟೆಲ್ ಹಾಗೂ ಪಿಜಿ ವ್ಯವಸ್ತಾಪಕರು ನೋಡಿಕೊಳ್ಳಬೇಕು.

      ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ

      ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ

      ಅಕಸ್ಮಾತ್ತಾಗಿ ಯಾವುದಾದರು ಪಿಜಿ ಅಥವಾ ಹಾಸ್ಟೆಲ್‌ನಲ್ಲಿ ಇರುವ ವ್ಯಕ್ತಿಗೆ ಕೊರೊನಾ ವೈರಸ್ ಪತ್ತೆಯಾದರೆ, ಅದು ಅಲ್ಲಿನ ಸ್ಚಚ್ಚತೆ ಸರಿ ಇಲ್ಲದ ಕಾರಣ ಬಂದಿದೆ ಎಂದು ಖಾತ್ರಿಯಾದರೆ ಓನರ್/ಮ್ಯಾನೆಜರ್/ ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಕಮಿಷನರ್ ತಿಳಿಸಿದ್ದಾರೆ. ಕೊರೊನಾ ವೈರಸ್ ಹರಡದೆ ಇರುವ ಹಾಗೆ ಪಿಜಿ ಹಾಗೂ ಹಾಸ್ಟೆಲ್ ಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಈ ನಿಯಮವನ್ನು ಪಾಲಿಕೆ ಕೈಗೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+