ಬೆಂಗಳೂರಿನಲ್ಲಿ ಕೊರೊನಾ ಲಸಿಕೆ ಅಭಿಯಾನ ಮುಂದುವರೆಯುತ್ತೆ: ಆಯುಕ್ತ

ಬೆಂಗಳೂರು,ಜನವರಿ 27: ಬೆಂಗಳೂರಿನಲ್ಲಿ ಕೊರೊನಾ ಲಸಿಕೆ ಅಭಿಯಾನ ಮುಂದುವರೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಜನವರಿ 16 ರಿಂದ ನಿರಂತರವಾಗಿ ನಡೆದ ಕೊರೊನಾ ಲಸಿಕೆ ಅಭಿಯಾನ ಸರ್ಕಾರದ ಸೂಚನೆಯ ಮೇರೆಗೆ ಮಂಗಳವಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಬುಧವಾರದಿಂದ ಮತ್ತೆ ಈ ಪ್ರಕ್ರಿಯೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.ನಗರದಲ್ಲಿ ಜನವರಿ 16 ರಿಂದ 25ರವರೆಗೆ ನಡೆದ ಕೊರೊನಾ ಲಸಿಕಾ ಅಭಿಯಾನದಲ್ಲಿ 45 ಸಾವಿರಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ.

Corona Vaccine Drive Will Continue In Bengaluru

ಆದರೆ ಮಂಗಳವಾರ ನಗರದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆದಿಲ್ಲ, ಬುಧವಾರ ಯಥಾ ಪ್ರಕಾರ ಆರಂಭಗೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಅಭಿಯಾನ ಮುಂದುವರೆಯಲಿದೆ.

ನಗರದಲ್ಲಿ ಬುಧವಾರ ಸರ್ಕಾರಿಯ 53 ಹಾಗೂ ಖಾಸಗಿ ಆಸ್ಪತ್ರೆಯ 163 ಲಸಿಕಾ ಕೇಂದ್ರದಲ್ಲಿ ಒಟ್ಟು 20,608 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ನಗರದಲ್ಲಿ ಮಂಗಳವಾರ 276 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 452 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,97,609ಕ್ಕೆ ಏರಿಕೆಯಾಗಿದೆ.

Recommended Video

      Kerala ದಲ್ಲಿ ನಿಯಂತ್ರಣಕ್ಕೆ ಬಾರದ Corona ಸೋಂಕು! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+