Bengaluru Metro Pillar Mishap: IISc ತಂಡದಿಂದ ಪ್ರಕರಣದ ತಾಂತ್ರಿಕ ತನಿಖೆ, ವಿಜ್ಞಾನಿ ತಿಳಿಸಿದ ಕಾರಣ ಏನು?

ಬೆಂಗಳೂರು, ಜನವರಿ 18: ಇತ್ತೀಚೆಗೆ ಮೆಟ್ರೋ ಮಾರ್ಗ ನಿರ್ಮಾಣ ಹಂತದ ಕಾಮಗಾರಿ ವೇಳೆ ಪಿಲ್ಲರ್‌ ಕುಸಿದು ಅಮಾಯಕ ಇಬ್ಬರು ಜೀವ ಕಳೆದುಕೊಳ್ಳಲು ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ವಿಜ್ಞಾನಿ ಡಾ.ಚಂದ್ರ ಕಿಶನ್‌ ಹೇಳಿದ್ದಾರೆ.

ಈ ಡಾ.ಚಂದ್ರ ಕಿಶನ್‌ ಅವರು ಭಾರತೀಯ ವಿಜ್ಞಾನ ಸಂಸ್ಥೆಯ (IISC) ವಿಜ್ಞಾನಿ. ಮೆಟ್ರೋ ಪಿಲ್ಲರ್ ಕುಸಿತ ಮತ್ತು ಸಾವಿನ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಿಸಿದ್ದೇವೆ. ಅದರಲ್ಲಿ ಶೇ. 80ರಷ್ಟು ತಾಂತ್ರಿಕ ತನಿಖೆ ಮುಗಿದಿದ್ದು, ಈ ಅವಧಿಯಲ್ಲಿ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ನಿರ್ಲಕ್ಷ್ಯ, ವೈಫಲ್ಯಗಳಿಂದಲೇ ತಾಯಿ ಹಾಗೂ ಮಗು ಜೀವ ಹಾನಿಗೆ ಕಾರಣ ಎಂಬುದು ಗೊತ್ತಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಂತೆ ಒಟ್ಟಾರೆ ಶೇ. 100ರಷ್ಟು ತಿನಖೆಯನ್ನು ಮುಂದಿನ 4-5ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ತಾಂತ್ರಿಕ ತನಿಖಾ ತಂಡದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (IISC) ತಜ್ಞರು ಇದ್ದು, ಅವರೆಲ್ಲ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ವರದಿ ಪರಿಶೀಲಿಸಲಿರುವ ರಾಜ್ಯ ಸರ್ಕಾರ ಸಂಬಂಧಿಸಿದವರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದೆ.

Contractor and Engineer negligence is reason of Metro Pillar Mishap in Bangalore says IISc scientist

ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಯಾವುದೇ ಕಳಪೆ ಕಾಮಗಾರಿ ನಡೆದಿಲ್ಲ. ಬದಲಾಗಿ ಗುಣಮಟ್ಟದ ವಸ್ತುಗಳನ್ನೇ ಬಳಸಿ ಕೆಲಸ ಮಾಡಲಾಗಿದೆ. ಆದರೆ ಕಬ್ಬಿಣದ ಸರಳುಗಳನ್ನು ಪಿಲ್ಲರ್ ನಿರ್ಮಾಣಕ್ಕೆಂದು ಸುಮಾರು 18 ಅಡಿ ಎತ್ತರ ಕಟ್ಟಿ ನಿಲ್ಲಿಸಲಾಗಿತ್ತು. ಈ ವೇಳೆ ಕಂಡು ಬಂದ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ತನಿಖೆಯಿಂದ ಬಯಲಾಗಿದೆ.

ಪಿಲ್ಲರ್ ನಿರ್ಮಾಣಕ್ಕೆ ಯಾವ ಸ್ಟೀಲ್ ಬಳಸಲಾಗಿದೆ. ಅದರಲ್ಲಿ ಜಲ್ಲಿ, ಮಣ್ಣು ಹಾಗೂ ಸಿಮೆಂಟ್ ಗುಣಮಟ್ಟ, ಅಳತೆ, ಮೇಲ್ನೋಟಕ್ಕೆ ಗುತ್ತಿಗೆದಾರರು ನೇರ ಹೊಣೆ ಎನ್ನಲಾಗುತ್ತಿದೆ. ಅಷ್ಟು ಎತ್ತರದಲ್ಲಿ ಕಬ್ಬಿಣದ ಸರಳು ಕಟ್ಟಿದಾಗ ಅಗತ್ಯ ಎಚ್ಚರಿಕೆ ವಹಿಸಬೇಕಿತ್ತು. ಪಿಲ್ಲರ್ ಸರಿಯಾಗಿ ನಿಲ್ಲಲು ಆಧಾರ ನೀಡದಿರವುದೇ ಕುಸಿತಕ್ಕೆ ಕಾರಣವಾಗಿದೆ. ಎಲ್ಲ ಅಂಶಗಳು ತನಿಖೆ ಪೂರ್ತಿಯಾದ ಮೇಲೆ ಸಂಪೂರ್ಣವಾಗಿ ತಿಳಿದು ಬರಲಿದೆ.

Contractor and Engineer negligence is reason of Metro Pillar Mishap in Bangalore says IISc scientist

ಬಿಎಂಆರ್‌ಸಿಎಲ್-ಐಟಿಪಿಎಲ್ ಮಧ್ಯ ಸಂಪರ್ಕ: ಒಪ್ಪಂದ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಪಟ್ಟಂದೂರು ಅಗ್ರಹಾರ ಮೆಟ್ರೊ ನಿಲ್ದಾಣದ ಕಾನ್ಕೋರಸ್‌ ಮಟ್ಟದಿಂದ ಇಂಟರ್‌ ನ್ಯಾಷನಲ್‌ ಟೆಕ್‌ ಪಾರ್ಕ್‌ನ ಕ್ಯಾಂಪಸ್‌ಗೆ ನೇರ ಸಂಪರ್ಕ ಪಾದಚಾರಿ ಮಾರ್ಗ ನಿರ್ಮಿಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಲಿಮಿಟೆಡ್‌ (ಐಟಿಪಿಎಲ್‌)ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಹಿ ಹಾಕಿದೆ.

ಪಾದಚಾರಿ ಮಾರ್ಗದ ನಿರ್ಮಾಣ ಮತ್ತು ಇತರ ತಾಂತ್ರಿಕ ಕಾಮಗಾರಿಗಳನ್ನು ಬಿಎಂಆರ್‌ಸಿಎಲ್‌ ಅನುಮೋದಿಸಿದ ವಿನ್ಯಾಸಗಳ ಪ್ರಕಾರ ಐಟಿಪಿಎಲ್‌ ನಿರ್ಮಿಸುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಟೆಕ್‌ ಪಾರ್ಕ್ ಬೆಂಗಳೂರು (ITPB) ಕ್ಯಾಂಪಸ್‌ನಲ್ಲಿ ಕೆಲಸ ಮಾಡುವ ಸುಮಾರು 55 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಮೆಟ್ರೊ ನಿಲ್ದಾಣದಿಂದ ನೇರವಾಗಿ ತಮ್ಮ ಕಚೇರಿಯನ್ನು ಪ್ರವೇಶಿಸಲು ಇದು ಸಹಾಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+