ಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಸುವಂತಿಲ್ಲ: ಕೋರ್ಟ್ ಸ್ಪಷ್ಟನೆ
ಬೆಂಗಳೂರು, ಜೂನ್ 7: ಇನ್ನುಮುಂದೆ ಪತ್ನಿಯ ಎಟಿಂಎ ಕಾರ್ಡ್‌ಗಳನ್ನು ಪತಿ ಬಳಸುವಂತಿಲ್ಲ, ಒಟ್ಟಿನಲ್ಲಿ ಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಕೆ ಮಾಡುವಂತಿಲ್ಲ. ಒಂದೊಮ್ಮೆ ಬಳಕೆ ಮಾಡಿದಲ್ಲಿ ಅದರಿಂದಾಗುವ ನಷ್ಟಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ ಎಂದು ಗ್ರಾಹಕರ ನ್ಯಾಯಾಲಯ ಹೇಳಿದೆ.
ಈ ವಾದವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಡಿಸಿದ್ದು, ಇದಕ್ಕೆ ಗ್ರಾಹಕರ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಅಭಿಪ್ರಾಯವನ್ನು ನೀಡಿದೆ.
ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ಅನ್ವಯ ಪತಿ, ಪತ್ನಿ, ಸ್ನೇಹಿತ , ಸಂಬಂಧಿ ಯಾರೇ ಆಗಿರಲಿ ಕಾರ್ಡ್ ಅನ್ನು ಮೊತ್ತೊಬ್ಬರು ಬಳಕೆ ಮಾಡುವಂತಿಲ್ಲ, ಒಂದು ವೇಳೆ ಅನಧಿಕೃತವಾಗಿ ಅತೌಆ ಕಾರ್ಡ್ ಮಾಲೀಕನ ಒಪ್ಪೊಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಹೊಣೆಯಾಗಿರುತ್ತಾರೆ.

ಬೆಂಗಳೂರಿನ ನಿವಾಸಿಯಾದ ವಂದನಾ ಹೆರಿಗೆ ರಜೆ ವೇಳೆ ಪತಿಯ ಬಳಿ ಕಾರ್ಡ್ ನೀಡಿ 25 ಸಾವಿರ ರೂ. ಡ್ರಾ ಮಾಡುವಂತೆ ಕೇಳುತ್ತಾರೆ, ಪತಿ ರಾಜೇಶ್ ಅದರಂತೆ ಪತಿ ರಾಜೇಶ್ ಕುಮಾರ್ ಸಮೀಪದ ಎಸ್ ಬಿಐ ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡ್ ಹಾಕಿ ಹಣ ವಿತ್ ಡ್ರಾ ಮಾಡಿದ್ದು, ಈ ವೇಳೆ ಎಟಿಎಂ ಮಷಿನ್ ನಿಂದ ಹಣ ಬಾರದೇ ಕೇವಲ ಸ್ಲಿಪ್ ಮಾತ್ರ ಬಂದಿದೆ.
ಆದರೆ ಸ್ಲಿಪ್ ನಲ್ಲಿ 25 ಸಾವಿರ ಹಣ ವಿತ್ ಡ್ರಾ ಆಗಿರುವ ಕುರಿತು ಪ್ರಿಂಟ್ ಆಗಿದ್ದು, ಇದರಿಂದ ಗಾಬರಿಯಾದ ಪತಿ ರಾಜೇಶ್ ಎಸ್ ಬಿಐ ಬ್ಯಾಂಕ್ ಗೆ ದೂರು ನೀಡಿದ್ದಾರೆ.
ಮೂರು ದಿನಗಳ ಬಳಿಕ ಈ ದೂರಿನ ಬಗ್ಗೆ ವಿಚಾರಿಸಲಾಗಿ ಬ್ಯಾಂಕ್ ಅಧಿಕಾರಿಗಳು ದೂರಿನ ವಿಚಾರಣೆ ಸಂಪೂರ್ಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಗ್ರಾಹಕರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ನಮೂದಾಗಿದೆ. ಆದರೆ ವಂದನಾ ಅವರ ಖಾತೆಗೆ ಹಣ ಮಾತ್ರ ಜಮೆಯಾಗಿಲ್ಲ.
ಈ ವೇಳೆ ಸಮಾರು 3.5 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್ ಎಸ್ ಬಿಐ ನಿಂದ ಹೇಳಿಕೆ ಪಡೆದಿದ್ದು,. ವಂದನಾ ಅವರ ಪತಿ ಎಟಿಎಂ ಕಾರ್ಡ್ ನಿಂದ್ ವಿತ್ ಡ್ರಾ ಮಾಡುವ ವೇಳೆ ಮಷಿನ್ ನಲ್ಲಿ 25 ಸಾವಿರ ರೂಗಳಿಗಿಂತಲೂ ಹೆಚ್ಚು ಹಣವಿತ್ತು.
ಇನ್ನು ವಂದನಾ ಅವರ ಕಾರ್ಡ್ ಅನ್ನು ಅವರ ಪತಿ ಬಳಕೆ ಮಾಡುವಂತಿಲ್ಲ. ಇದು ಎಟಿಎಂ ಪಿನ್ ನಿಯಮ ಮತ್ತು ಬ್ಯಾಂಕ್ ಗ್ರಾಹಕ ಭದ್ರತಾ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ವಂದನಾ ಅವರು ಚೆಕ್ ನೀಡಿ ಹಣ ವಿತ್ ಡ್ರಾ ಮಾಡಲು ತಿಳಿಸಬಹುದಿತ್ತು, ಅಥವಾ ಒಂದು ಪತ್ರ ಬರೆದುಕೊಡಬೇಕಿತ್ತು ಎರಡನ್ನೂ ಅವರು ಮಾಡಿಲ್ಲ ಹಾಗಾಗು ಎಸ್‌ಬಿಐನ ವಾದ ಸರಿಯಾಗಿದೆ ಎಂದು ಹೇಳಿ ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ.












Click it and Unblock the Notifications